ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಉಡುಪಿ ಬೃಹತ ರಕ್ತದಾನ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕ, ರಾಷ್ತ್ರಿಯ ಸೇವಾ ಯೋಜನಾ ಘಟಕಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ೮ ಜೂನ್ ೨೦೨೨ ರಂದು ಜರುಗಿತು. ಸಭೆಯ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ವೀಣಾ ಕುಮಾರಿ ಸಭೆಯನ್ನು ಉದ್ದೇಶಿಸಿ ರಕ್ತವು ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲಾಸ್ಮಾ ಮತ್ತು ಇತರೆ ಖನಿಜಗಳಿಂದ ಮಾಡಲ್ಪಟ್ಟಿದೆ. ಭಾರತದಲ್ಲಿ ೫ ಕೋಟಿ ಯೂನಿಟ್ ನಷ್ಟು ರಕ್ತದ ಆವಶ್ಯಕತೆಯಿದೆ ಆದರೆ ಪ್ರಸ್ತುತ ಕೇವಲ ೨.೫ ಕೋಟಿ ಯೂನಿಟ್ ನಷ್ಟು ರಕ್ತ ಪೂರೈಕೆಯಾಗುತ್ತಿದೆ ಇನ್ನಿರುವ ಕೊರತೆಯನ್ನು ಕೇವಲ ರಕ್ತದಾನದಿಂದ ಮಾತ್ರ ಪೂರೈಸಲು ಸಾದ್ಯ ಏಕೆಂದರೆ ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲ. ಇನ್ನೂ ಪ್ರತಿ ಎರಡು ಸೆಕೆಂಡಿಗೆ ರಸ್ತೆ ಅಪಘಾತ ಅಥವಾ ಪ್ರಸವಾವಸ್ಥೆಯಲ್ಲಿರುವ ಮಹಿಳೆಯರಿಗೆ ರಕ್ತದ ಆವಶ್ಯಕತೆ ಬಹಳಾ ಇರುತ್ತದೆ ಎಂದು ರಕ್ತದ ಮಹತ್ವದ ಬಗ್ಗೆ ಅರಿವು ಮೂಡಿಸಿ ನೆರೆದಿರುವ ಜನತೆಗೆ ರಕ್ತದಾನ ಮಾಡಲು ಪ್ರೇರೆಪಿಸಿದರು.

ಶಲ್ಯತ್ಂತ್ರ ವಿಭಾಗದ ಮುಖ್ಯಸ್ಥ ಹಾಗೂ ಪ್ರಾದ್ಯಾಪಕರಾದ ರಜನೀಶ್ ವಿ ಗಿರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನೆರವೇರಿತು. ಕಮ್ಯುನಿಟಿ ಸರ್ವಿಸ್ ಯೂಜನಾಧಿಕಾರಿ ಡಾ. ಎಸ್ ಆರ್ ಮೊಹರೆರ ಸ್ವಾಗತಿಸಿದರು. ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಡಾ. ಮೊಹಮ್ಮದ್ ಫೈಸಲ್ ವಂದಿಸಿದರು. ಕುಮಾರಿ ಚೇತನ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಸುದೇಶ ಪ್ರಾರ್ಥಿಸಿದರು. ವಿದ್ಯಾರ್ಥಿಗಳು ಸಿಬಂದಿ ವರ್ಗದವರೂ ಸೇರಿದಂತೆ 150ಕ್ಕೂ ಅಧಿಕ ಜನ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. ಸುಮಾರು 110 ಯುನಿಟ್ಟಗಳಿಗೂ ಅಧಿಕ ರಕ್ತವನ್ನು ಸಂಗ್ರಹಿಸಲಾಯಿತು.

 
 
 
 
 
 
 
 
 
 
 

Leave a Reply