ಮುರ್ಮು ಅವರ ಮರಳು ಶಿಲ್ಪವನ್ನು ಅತ್ಯದ್ಭುತವಾಗಿ ರಚಿಸಿ ಅಭಿನಂದಿಸಿದ ಖ್ಯಾತ ಮರಳು ಶಿಲ್ಪಿ

ಒಡಿಶಾದ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಅದೇ ರಾಜ್ಯದ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಪುರಿ ಕಡಲತೀರದಲ್ಲಿ ಮುರ್ಮು ಅವರ ಮರಳು ಶಿಲ್ಪವನ್ನು ಅತ್ಯದ್ಭುತವಾಗಿ ರಚಿಸಿ, ಮುರ್ಮುಗೆ ಶುಭ ಹಾರೈಸಿದ್ದಾರೆ. ಒಡಿಶಾ ಮತ್ತು ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಯಲ್ಲಿ  ವಿನ್ಯಾಸಗೊಳಿಸದರು.

ಭಾರತ ರಾಷ್ಟ್ರಪತಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಾ, ಮೇರಾ ಭಾರತ್‌ ಮಹಾನ್‌ ಎಂದು ಮರಳು ಶಿಲ್ಪಕಲೆಯಲ್ಲಿ ರಚನೆ ಮಾಡಿದ್ದಾರೆ.  ಇದೇ ವೇಳೆ ದೇಶಾದ್ಯಂತ ಹಲವು ಗಣ್ಯರು ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ದ್ರೌಪದಿ ಮುರ್ಮು ಅವರಿಗೆ ಶುಭಾಶಯಗಳನ್ನು ತಿಳಿಸುತ್ತಾ ಟ್ವೀಟ್ ಮಾಡಿದ್ದಾರೆ. ವಿರೋಧ ಪಕ್ಷದ ಪರವಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಶವಂತ್ ಸಿನ್ಹಾ ಕೂಡ ದ್ರೌಪದಿ ಮುರ್ಮು ಅವರಿಗೆ ಶುಭ ಹಾರೈಸಿದ್ದಾರೆ.

 
 
 
 
 
 
 
 
 
 
 

Leave a Reply