ಸೇಕ್ರೆಡ್ ಹಾರ್ಟ್ ದೇವಾಲಯ ಕೊಳಲಗಿರಿಯಲ್ಲಿ ತೆನೆಹಬ್ಬ

ಸೇಕ್ರೆಡ್ ಹಾರ್ಟ್ ದೇವಾಲಯ ಕೊಳಲಗಿರಿಯಲ್ಲಿಂದು ತೆನೆಹಬ್ಬದ (ಮಾತೆ ಮಾರಿಯಮ್ಮ ಜಯಂತಿ) ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇವಾಲಯದಲ್ಲಿ ಬಲಿಪೂಜೆಯನ್ನು ದೇವಾಲಯದ ಧರ್ಮಗುರುಗಳಾದ ರೆ.ಪಾ ಅನಿಲ್ ಪ್ರಕಾಶ್ ಕ್ಯಾಸ್ಟಲಿನೋ ಹಾಗೂ ಸಹಾಯಕರಾಗಿ ರೆ.ಪಾ ಪೀಠರ್ ಫೆರ್ನಾಂಡಿಸ್ ಅವರು ನೇರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ನವೀಕರಣಗೊಳಿಸಲಾಗುವ ಚರ್ಚ್ ಬೆಲ್ ಟವರ್ ಇದರ ಶಿಲಾನ್ಯಾಸವನ್ನು ಪ್ರಾರ್ಥನೆಯ ಮೂಲಕ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷ ಶ್ರೀ ವಿನ್ಸೆಂಟ್ ಡಿ’ಸೋಜಾ, ಕಾರ್ಯಧರ್ಶಿ ಶ್ರೀ ಮೌರೀಸ್ ಮಸ್ಕರೇನ್ಹಸ್, 18 ಆಯೋಗದ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಡಿ’ಸೋಜಾ, 12 ವಾರ್ಡಿನ ಗುರಿಕಾರರು ಹಾಗೂ ಅಪಾರ ಭಕ್ತಾದಿಗಳ ಸಮ್ಮುಖದೊಂದಿಗೆ ನೆರವೇರಿಸಲಾಯಿತು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶ್ರೀ ವಿಲ್ಸನ್- ವಿಯೋನಾ ಡಿ’ಸೋಜಾ ಕೆನಡಾ, ನಿಖೆಲ್ ಸ್ಯಾಮ್ಯುಯೆಲ್ ಪ್ಯಾಮಿಲಿ ದುಬೈ ಹಾಗೂ ರೋಷನ್-ಸೋಫಿಯಾ ಡಿ’ಸೋಜಾ ಅವರು ವಹಿಸಿದ್ದರು. ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply