ಅವಗಢ ಸಂಭವಿಸುವ ಮೊದಲು ರಸ್ತೆಯನ್ನು ಸರಿಪಡಿಸುವರೇ

ಇದು ಪಡುತೋನ್ಸೆ ಕೆಮ್ಮಣ್ಣಿನಿಂದ ಪಡುಕುದ್ರು ತೂಗುಸೇತುವೆಯ ಕಡೆಗೆ ನದಿ ಪಕ್ಕದಿಂದ ಹಾದು ಹೋಗುವ ಕಾಂಕ್ರೀಟ್ ರಸ್ತೆ. ಕೆಲವು ವರ್ಷಗಳ ಹಿಂದೆ ಸ್ವಲ್ಪ ಕುಸಿದ ರಸ್ತೆಗೆ ನದಿ ಕಡೆಯಿಂದ ಜನರ ರಕ್ಷಣೆಗೆ ಗಾರ್ಡ್ ಗಳನ್ನು ಅಳವಡಿಸಲಾಗಿತ್ತು. 
ಆದರೆ ಇತ್ತೀಚೆಗೆ ಅಳವಡಿಸಿರುವ ಗಾರ್ಡ್  ಗಳು ರಸ್ತೆಯಿಂದ ದೂರ ಸರಿದು ರಸ್ತೆ ಮತ್ತು ಗಾರ್ಡ್ ಗಳ ನಡುವೆ ಉದ್ದಕ್ಕೂ ಚರಂಡಿ ನಿರ್ಮಾಣವಾಗಿರುತ್ತದೆ. ಹಾಗೂ ರಸ್ತೆಯ ಪಕ್ಕದಲ್ಲಿ ಒಂದು ಅಪಾಯ ಕಾರಿ ಹೊಂಡವೂ ನಿರ್ಮಾಣವಾಗಿರುತ್ತದೆ. ಅಲ್ಲಿ ಕುಸಿದಿರುವ ಸ್ವಲ್ಪ ಭಾಗಕ್ಕೆ ಮಾತ್ರ ಮಣ್ಣು ಮತ್ತು ಕಲ್ಲು ಹಾಕಿ ತೇಪೆ ಹಾಕಲಾಗಿದೆ. 
 ಉಳಿದ ಭಾಗದ ಸಮಸ್ಯೆಗೆ ನಾಲ್ಕು ತಿಂಗಳು ಕಳೆದರೂ ಸಂಬಂಧ ಪಟ್ಟವರು ಯಾರೂ ಗಮನ ಹರಿಸುತ್ತಿಲ್ಲ. ಶನಿವಾರ ರವಿವಾರಗಳಂದು ತೂಗು ಸೇತುವೆ ನೋಡಲು ತುಂಬಾ ಯಾತ್ರಿಕರು ಬರುತ್ತಿರುತ್ತಾರೆ. ಆಯ ತಪ್ಪಿದರೆ ಸೀದಾ ಹೊಳೆಗೆ ಬೀಳುವ ಸಾಧ್ಯತೆ ಇದೆ. ಅವಗಢ ಸಂಭ ವಿಸುವ ಮೊದಲು ಸಂಬಂಧ ಪಟ್ಟವರು ಕೂಡಲೇ ರಸ್ತೆಯನ್ನು ಸರಿಪಡಿಸುವರೇ…  
 
 
 
 
 
 
 
 
 
 
 

Leave a Reply