ಗ್ರಾಮ ಸಮ್ಮೇಳನ ಅಧ್ಯಕ್ಷರಾಗಿ ರೇಶ್ಮಾ ಶೆಟ್ಟಿ ಗೋರೂರು ಆಯ್ಕೆ

ಅಜೆಕಾರು: ಆದಿಗ್ರಾಮೋತ್ಸವ 4 ನೇ ಗ್ರಾಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ರೇಶ್ಮಾ ಶೆಟ್ಟಿ ಎಣ್ಣೆಹೊಳೆ ಆಯ್ಕೆಯಾಗಿದ್ದಾರೆ. ಸಾಹಿತ್ಯ, ನಿರೂಪಣೆ, ವೃತ್ತಿಯಲ್ಲಿ ಸಾಧನೆ ಮಾಡಿರುವ ಅವರು ಎಣ್ಣೆಹೊಳೆಯವರು. ಗೊರೂರಿನಲ್ಲಿ ಪತಿಯೊಂದಿಗೆ ಹೊಟೇಲು ನಡೆಸುತ್ತಿರುವ ಅವರು ಜನಮಿಡಿತ ಪತ್ರಿಕೆಯ ವರದಿಗಾರ ರಾಗಿದ್ದಾರೆ

ಹವ್ಯಾಸ : ಬರವಣಿಗೆ/ಭಾಷಣ/ ಹಾಡುಗಾರಿಕೆ/ನಟನೆ/ಪದಬಂಧ ರಚನೆ /ಕಾರ್ಯಕ್ರಮ ನಿರೂಪಣೆ ಇತ್ಯಾದಿ…

ಚಟುವಟಿಕೆ ಗಳು
*ಕವನಗಳ ರಚನೆ, ಲೇಖನ ಬರವಣಿಗೆ, ಪತ್ರಿಕೆಗಳ ಬರಹಗಾರ್ತಿ, ಈಗಾಗಲೇ ಎರಡು ಕವನ ಸಂಕಲನಗಳು ಪ್ರಕಟ ಗೊಂಡಿವೆ . ಅನೇಕ ಜಿಲ್ಲಾಮಟ್ಟದ, ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಟಿ ಗಳಲ್ಲಿ, ಭಾಗವಹಿಸಿರುತ್ತಾರೆ , ಅನೇಕರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

*12ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ವತಿಯಿಂದ ಶ್ರವಣ ಬೆಳಗೊಳದಲ್ಲಿ ನೆರವೇರಿದ ವೇದಿಕೆಯ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಧ್ಯ ರಾತ್ರಿ 12ಗಂಟೆಗೆ ಮೊದಲ್ಗೊಂಡು ಬೆಳಗ್ಗಿನ ಜಾವ 6.30ಯ ತನಕ ಸತತವಾಗಿ ಕವಿಗೋಷ್ಠಿ ಕಾರ್ಯಕ್ರಮದ ನಿರೂಪಣೆ ಮಾಡಿ ದಾಖಲೆಯ ಕಾರ್ಯಕ್ರಮ ನಿರೂಪಣೆ ಎಂಬ ಹೆಗ್ಗಳಿಕೆಯೊಂದಿಗೆ ಶ್ರೇಷ್ಠ ನಿರೂಪಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ…

* ಹತ್ತಾರು ಪತ್ರಿಕೆ ಗಳಲ್ಲಿ ಹಲವಾರು ಲೇಖನ ಗಳು ಪ್ರಕಟಗೊಂಡಿದೆ.

* ಹತ್ತಾರು ಸಂಘಟನೆಗಳಲ್ಲಿ ಸಕ್ರೀಯತೆ. ಪದಾಧಿಕಾರ ನಿರ್ವಹಣೆ. ಸಾಮಾಜಿಕ ಜಾಲತಾಣದ ಅನೇಕ ಸಾಹಿತ್ಯಾತ್ಮಕ ತಂಡ ಗಳೊಂದಿಗೆ ಸಕ್ರೀಯವಾಗಿ ಭಾಗವಹಿಸುವಿಕೆ.

* ವಿಧ್ಯಾರ್ಥಿ ದೆಸೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ/ ಶಾಲಾ ಕಾಲೇಜು ವಿದ್ಯಾರ್ಥಿ ಮಂತ್ರಿ ಮಂಡಳಗಳಲ್ಲಿ ತೊಡಗಿಕೊಂಡಿದ್ದು, ವಾರ್ಷಿಕೋತ್ಸವ ಇತ್ಯಾದಿಗಳಲ್ಲಿ ಸಕ್ರೀಯ ಭಾಗವಹಿಸುವಿಕೆ.

*ಪೌರಾಣಿಕ /ಸಾಮಾಜಿಕ ನಾಟಕ ಗಳಲ್ಲೂ, ಕೈಯ್ಯಾಡಿಸಿರುತ್ತಾರೆ.

ವಿದ್ಯಾರ್ಥಿ ದಿನಗಳಲ್ಲಿ ಅನೇಕ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ, ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟುವಾಗಿ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.

* ಅನೇಕ ಉಪನ್ಯಾಸ/ ಭಾಷಣ ಗಳಲ್ಲಿ ಭಾಗವಹಿಸುವಿಕೆ.

* ಹಾಸನ ಆಕಾಶವಾಣಿ ಕೇಂದ್ರದಲ್ಲಿ ಯುವವಾಣಿ ಕಾರ್ಯಕ್ರಮದಲ್ಲಿ ಆಕಾಶವಾಣಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಸ್ತುತ ಸಕ್ರೀಯತೆ
*ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯ ಕಾರ್ಯದರ್ಶಿ.
* ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಹಾಸನ ಜಿಲ್ಲೆಯ ಗೊರೂರು ಘಟಕದ ಸಂಚಾಲಕಿ.
* ಸ್ಪಂದನಸಿರಿ ವೇದಿಕೆ ಯ ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ.
* ಕುರ್ಪಾಡಿ ಯುವ ವೃಂದ-ಅಜೆಕಾರು,ಕಾರ್ಕಳ ತಾಲ್ಲೂಕು, ಬಳಗದ ಸದಸ್ಯೆ.
* “ಜನಮಿಡಿತ” ದಿನ ಪತ್ರಿಕೆಯ ಹಾಸನ ಜಿಲ್ಲಾ ಪ್ರತಿನಿಧಿ.

*ಬರಹಗಾರರ ಬಳಗ ಕಟ್ಟಾಯ ಯ ಹೋಬಳಿ ಘಟಕದ ಅಧ್ಯಕ್ಷೆ.

ಪಡೆದ ಗೌರವ ಸಂಘಟನೆಗಳು ಗಳು
* ಕಥಾಬಿಂದು ಪ್ರಕಾಶನ-ಮಂಗಳೂರು ರವರು ಕೊಡಮಾಡಿದ “ಚೈತನ್ಯಶ್ರೀ” ರಾಜ್ಯ ಪ್ರಶಸ್ತಿ
* ಸಪ್ತಸ್ವರ ಸಂಗೀತ ಬಳಗ-ಬೆಳಗಾವಿ ಯವರು ಕೊಡಮಾಡಿದ “ರಾಷ್ಟ್ರೀಯ ಸೇವಾ ರತ್ನ” ಪ್ರಶಸ್ತಿ.
* ಬೆಳದಿಂಗಳ ಸಾಹಿತ್ಯ ಸಮಿತಿ ಮತ್ತು ಆಧಿ ಗ್ರಾಮೋತ್ಸವ ಯುವವೃಂದ ಕೊಡಮಾಡಿದ “ಯುವಸಿರಿ” ಗ್ರಾಮೊತ್ಸವ ಗೌರವ.
*ಯೋಗನರಸಿಂಹ ಸ್ವಾಮಿ ಜಾತ್ರಾ ಸಮಿತಿ ಗೊರೂರು ಕೊಡಮಾಡಿದ ಗೊರೂರು ಗ್ರಾಮ ಗೌರವ..
* ತುಳು ಸಾಹಿತ್ಯ ಅಕಾಡೆಮಿ/ಕಥಾಬಿಂದು ಪ್ರಕಾಶನ/ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯವರು ಜಂಟಿ ಯಾಗಿ ನೀಡಿದ “ಸೌರಭ ರತ್ನ-2021” ಪ್ರಶಸ್ತಿ.

*ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ,
ಕೊಡಮಾಡಲ್ಪಡುವ “ಕರ್ನಾಟಕ ಯುವ ರತ್ನ -2021″ಪ್ರಶಸ್ತಿ ಲಭಿಸಿರುತ್ತದೆ..

*ಧಾರವಾಡ ಬ್ಯಾಕೋಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ನೀನನಾನಾ ಕವನ ಸಂಕಲನಕ್ಕೆ “ಕನಕಶ್ರೀ” ರಾಜ್ಯ ಪ್ರಶಸ್ತಿ ಲಭಿಸಿದೆ..

*ಬರಹಗಾರರ ಬಳಗ ಹೂವಿನಹಡಗಲಿ ಹಾಗೂ ಹಾಸನ ಜಿಲ್ಲಾಸಮಿತಿಯ ವತಿಯಿಂದ “ವರ್ಷದ ಕವಿತೆ ಪುರಸ್ಕಾರ 2022” ಲಭಿಸಿದೆ.

ರುಶಿ ಪ್ರಕಾಶನ ಹಾಸನ ವತಿಯಿಂದ ನಡೆದ ರಾಜ್ಯೋತ್ಸವ ಕವನ ಸ್ಪರ್ಧೆಯಲ್ಲಿ ವಿಜೇತೆಯಾಗಿ “ಹೆಮ್ಮೆಯ ಕನ್ನಡಿಗ” ಪುರಸ್ಕಾರ. “

*ಮಲಬಾರ್ ಗೋಲ್ಡ್ ಅಂಡ್ ಡೈಮೊಂಡ್ ಉಡುಪಿ ಶಾಖೆ ಸಮಿತಿಯು ವತಿಯಿಂದ “ಮಲಬಾರ್ ಕವಿತೆ” ಗೌರವ ಪುರಸ್ಕಾರ.

*ತುಮಕೂರು ಬೆಂಕಿಯ ಬಲೆ ಪತ್ರಿಕೆಯವರು ನಡೆಸಿದ ವಾರ್ಷಿಕೋತ್ಸವದ ಸಂದರ್ಭದಲ್ಲಿ “18ನೇ ವಾರ್ಷಿಕ ಪುರಸ್ಕಾರ”.

ಚುಟುಕು ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಸಮಿತಿಯಿಂದ ರಾಜ್ಯ ಮಟ್ಟದ “ಚುಟುಕು ಗೌರವ-2022”.

* ಮಹಾಲಿಂಗಪುರದಲ್ಲಿ ನಡೆದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ “ಕೌಜಲಗಿ ನಿಂಗಮ್ಮ-2022” ರಾಜ್ಯ ಪುರಸ್ಕಾರ ಲಭಿಸಿದೆ.

ಜಾಗ್ರತಿ ಟ್ರಸ್ಟ್ ಬೆಂಗಳೂರುರವರು ಆಯೋಜಿಸಿದ ನಗೆಹಬ್ಬ -2022ಕಾರ್ಯಕ್ರಮದಲ್ಲಿ ಮೈಸೂರು ಕಲಾಮಂದಿರದಲ್ಲಿ ಕೆಂಪಮ್ಮ ಪುರಸ್ಕಾರ -2022 ರಾಜ್ಯ ಪುರಸ್ಕಾರ ಲಭಿಸಿರುತ್ತದೆ.

*ದೂರದರ್ಶನ ಚಂದನ ವಾಹಿನಿ ಪ್ರಸ್ತುತ ಪಡಿಸುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಬಹುಮಾನ ಪಡೆದಿರುವುದು.

ಪ್ರಕಟ ವಾದ ಕೃತಿ
* “ಭಾವಜೀವಿಯ ಅಂತರಂಗ” ಕವನ ಸಂಕಲನ. (ಕಥಾಬಿಂಧು ಪ್ರಕಾಶನ-ಮಂಗಳೂರು)
* “ನೀನಾನಾನಾ”- ಕವನ ಸಂಕಲನ (ಶ್ರೀ ಮತ್ತು ಮಾಧ್ಯಮ ಪ್ರಕಾಶನ ಅಜೆಕಾರು )

ಸಂಪರ್ಕ: *ರೇಷ್ಮಾ ಶೆಟ್ಟಿ-ಗೊರೂರು.
ಮೊ-8861792339.

 
 
 
 
 
 
 
 
 
 
 

Leave a Reply