ಯು.ಪಿ.ಎಂ.ಸಿ- ‘ಸುಪ್ರಭಾ’ ವಾರ್ಷಿಕಾಂಕ ಅನಾವರಣ.

ಕಾಲೇಜು ವಾರ್ಷಿಕಾಂಕ ‘ಸುಪ್ರಭಾ’ 2021-22ರ ಸಂಚಿಕೆಯನ್ನು ಕಾಪು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಪುಂಡಲೀಕ ಮರಾಠೆಯವರು ಜನವರಿ 18ರಂದು ಅನಾವರಣಗೊಳಿಸಿದರು.

ಮಾನವ ಜನ್ಮ ಅತ್ಯಮೂಲ್ಯವಾಗಿದ್ದು ಅದನ್ನು ಸಾರ್ಥಕಗೊಳಿಸಬೇಕು. ಜನ್ಮಾಂತರದ ಸಂಸ್ಕಾರ ಹುಟ್ಟುವಾಗಲೇ ಜೊತೆಗಿದ್ದು ಅವಕಾಶಸಿಕ್ಕಾಗ ಅದನ್ನು ಬಳಸಿಕೊಳ್ಳುಬೇಕು. ಇದರಿಂದ ಮನುಷ್ಯ ಅಳಿದರೂ ಸಾಧನೆಯ ರೂಪದಲ್ಲಿ ಹೆಸರು ಸ್ಥಿರವಾಗಿರುತ್ತದೆ. ವಿದ್ಯಾರ್ಥಿಗಳು ಈ ದಿಶೆಯಲ್ಲಿ ತಮ್ಮಲ್ಲಿರುವ ಪ್ರತಿಭಾ ಕೌಶಲಗಳಿಗೆ ಲೇಖನ ರೂಪವನ್ನು ಕೊಟ್ಟು ಸಂಚಿಕೆಯಲ್ಲಿ ಪ್ರಕಟಿಸಿದಾಗ ಅಮಿತಾನಂದವನ್ನು ಹೊಂದುವ ಮೂಲಕ ಜೀವನ ಸಾರ್ಥಕ್ಯವನ್ನು ಮೆರೆಯಬಹುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ ಭಟ್ ಅಧ್ಯಕ್ಷರಾಗಿದ್ದರು. ಸಂಚಿಕೆಯ ಪ್ರಧಾನ ಸಂಪಾದಕ ಶ್ರೀ ರಾಘವೇಂದ್ರ ಜಿ.ಜಿ ಪ್ರಾಸ್ತಾವಿಕ ನುಡಿಗಳ ಮೂಲಕ ಸ್ವಾಗತಿಸಿದರು. ಸಂಪಾದಕ ಮಂಡಳಿಯ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರೇಮ್ ಸಾಯಿ, ಆಶಿಕಾ ಉಪಸ್ಥಿತರಿದ್ದರು. ದ್ವಿತೀಯ ಬಿಬಿಎ ನ ವಿದ್ಯಾರ್ಥಿಗಳಾದ ಚೈತ್ರ ಪ್ರಾರ್ಥಿಸಿದರು, ಪ್ರಣೀತ ವಂದಿಸಿದರು, ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply