ಇಷ್ಟದೇವರ ಪ್ರಾರ್ಥನೆ, ದೇವಗುರುಗಳ ಸೇವೆಯಿಂದ ಇಷ್ಟಾರ್ಥ ಸಿದ್ಧಿ – ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್

ಶಿರ್ವ:-ಕೊರೋನಾದಿಂದ 2ವರ್ಷಗಳ ಕಾಲ ಲೋಕಕ್ಕೆ ಸಂಕಷ್ಟ ಉಂಟಾಗಿದೆ. ಸೃಷ್ಟಿಯ ನಿಯಮಗಳ ವಿರುದ್ಧ ಹೋಗಲು ಸಾಧ್ಯವಿಲ್ಲ. ಕಲಿಯುಗದಲ್ಲಿ ಮಾನವಜನ್ಮದ ಸಾರ್ಥಕತೆ ಪಡೆಯಲು ಧರ್ಮಮಾರ್ಗದಲ್ಲಿ ನಡೆದಾಗ ಮಾತ್ರ ಸಾಧ್ಯ. ಕುಲದೇವರ ಪ್ರಾರ್ಥನೆ, ಇಷ್ಟದೇವರ ಪ್ರಾರ್ಥನೆ, ದೇವಗುರುಗಳ ಸೇವೆಯಿಂದ ಇಷ್ಟಾರ್ಥ ಸಿದ್ಧಿಸುತ್ತದೆ. ಎಂದು ಗೋವಾ ಕೈವಲ್ಯಪುರ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಮಠದ ಯತಿಗಳಾದ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ ನುಡಿದರು.

ರವಿವಾರ ಸಂಜೆ ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಹತ್ತು ದಿನಗಳ ಮೊಕ್ಕಾಂಗಾಗಿ ಆಗಮಿಸಿದ ಸಂದರ್ಭದಲ್ಲಿ ಏರ್ಪಡಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ದೇವರ ಉಪಾಸನೆ, ಪ್ರಾರ್ಥನೆ, ಗುರುಶಿಷ್ಯರ ಸಂಬಂಧ ಉತ್ತಮ ರೀತಿಯಲ್ಲಿ ನಡೆದಾಗ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಶ್ರೀಮಠದಿಂದ ಉಡುಪಿ ಆತ್ರಾಡಿಯಲ್ಲಿ ನೂತನ ಶಾಖಾ ಮಠ ನಿರ್ಮಾಣಗೊಂಡಿದ್ದು, ಡಿ.10ರಿಂದ ಜರುಗುವ ಧಾರ್ಮಿಕ ಅನುಷ್ಠಾನ ಕಾರ್ಯಕ್ರಮಗಳಲ್ಲಿ ಸಮಸ್ತರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿದೆ ಎಂದರು.

ಶ್ರೀಗಳವರನ್ನು ಶ್ರೀಕ್ಷೇತ್ರದ ಆಡಳಿತ ಮಂಡಳಿ, ಶಿಷ್ಯವರ್ಗದವರಿಂದ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು ದಂಪತಿಗಳು ಶ್ರೀಗಳವರ ಪಾದ್ಯಪೂಜೆ ನೆರವೇರಿಸಿದರು. ಶ್ರೀಮಠದ ವೈದಿಕ ಮಹೇಶ್ ಭಟ್ ಧಾರ್ಮಿಕ ಅನುಷ್ಠಾನ ನೆರವೇರಿಸಿದರು. 

ಮಠದ ಹಿರಿಯ ವೈದಿಕ ವಿಲಾಸ್ ಭಟ್, ಪ್ರಬಂಧಕ ಗಣೇಶ್ ನಾಯಕ್, ಶ್ರೀದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಅರ್ಚಕರಾದ ಸುಧೀಂದ್ರ ಭಟ್, ಸಂದೇಶ್ ಭಟ್, ಶ್ರೀಕಾಂತ್ ಭಟ್, ನರೇಶ್ ಭಟ್, ಶ್ರೀಮಠದ ವಿಶ್ವಸ್ಥ ಎಂ. ಗೋಕುಲ್‌ದಾಸ್ ನಾಯಕ್, ಆತ್ರಾಡಿ ಶಾಖಾಮಠದ ಅಧ್ಯಕ್ಷ ಸಂತೋಷ್ ವಾಗ್ಲೆ, ಹಿರ್ಗಾನ ಲಕ್ಷ್ಮೀಪುರ ದೇವಳದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ಅಲೆವೂರು ರಮೇಶ್ ಸಾಲ್ವಣ್‌ಕಾರ್, ಆಧ್ಯಕ್ಷ ಆನಂದ ನಾಯಕ್, ಎಂ.ಗೋಪಾಲಕೃಷ್ಣ ನಾಯಕ್ ಮಂಗಳೂರು, ಸಾರಸ್ವತ ಸಂದೇಶ್ ಪತ್ರಿಕೆ ಸಮಪಾದಕ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್, ಜಿ.ಪಂ.ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಆಡಳಿತ ಮಂಡಳಿ, ಆರ್‌ಎಸ್‌ಬಿ ಯುವವೃಂದ, ಮಹಿಳಾ ವೃಂದ, ಚಂಡೆಬಳಗದ ಸದಸ್ಯರು, ಭಗವದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆಡಳಿತ ಮಂಡಳಿ ಸದಸ್ಯ ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 

Leave a Reply