ರಂಗಭೂಮಿ (ರಿ.) ಉಡುಪಿಯ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ – 2023

ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ “ರಂಗಭೂಮಿ (ರಿ.) ಉಡುಪಿ” ತನ್ನ ೫೯ನೇ ವರ್ಷದಲ್ಲಿ, ಇದೇ ನವಂಬರ್ ತಿಂಗಳ ೪ನೇ ವಾರದಲ್ಲಿ ದಿ| ಡಾ| ಟಿ.ಎಂ.ಎ. ಪೈ, ದಿ| ಎಸ್.ಎಲ್.ನಾರಾಯಣ ಭಟ್ ಮತ್ತು ದಿ| ಮಲ್ಪೆ ಮಧ್ವರಾಜ್ ಸ್ಮಾರಕ ರಾಜ್ಯ ಮಟ್ಟದ ೪೪ನೇ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸಲಿದೆ.

ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ ೧ ಘಂಟೆ ೩೦ ನಿಮಿಷ ಹಾಗೂ ಗರಿಷ್ಟ ೨ ಘಂಟೆ ೧೫ ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಈ ಬಾರಿ ಸ್ಪರ್ಧೆಗೆ ಗರಿಷ್ಠ ೧೨ ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಅನುಕ್ರಮವಾಗಿ ರೂ. ೩೫,೦೦೦/-, ರೂ.೨೫,೦೦೦/-, ರೂ.೧೫,೦೦೦/-ದ ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲನಟನೆ/ ಹಾಸ್ಯ ಪಾತ್ರಗಳಿಗೆ ನಗದು ಸಹಿತ ಬಹುಮಾನ ನೀಡಲಾಗುವುದು.

ಸ್ಪರ್ಧೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿದ್ದ ತಂಡಕ್ಕೆ ವಿಶೇಷ ಪುರಸ್ಕಾರವಿರುವುದು.

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಒಟ್ಟು ದೂರಕ್ಕೆ ಕಿ.ಮಿ ಗೆ ರೂ. ೧೫/ ರಂತೆ ಕನಿಷ್ಠ ರೂ.೧೫೦೦/-, ಗರಿಷ್ಠ ರೂ. ೧೭೦೦೦/- ಪ್ರಯಾಣ ವೆಚ್ಚ ನೀಡಲಾಗುವುದು ಹಾಗೂ ಪ್ರತೀ ತಂಡಕ್ಕೆ ಗೌರವಧನವಾಗಿ ರೂ. ೫೦೦೦/-ವನ್ನು ನೀಡಲಾಗುವುದು.

ಭರ್ತಿ ಮಾಡಿದ ಪ್ರವೇಶ ಪತ್ರ ಸ್ವೀಕರಿಸಲು ೨೦೨೩ರ ಅಕ್ಟೋಬರ್ ೨೧ ಕೊನೆಯ ದಿನಾಂಕವಾಗಿರುತ್ತದೆ. ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್‌ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, `ರಂಗಭೂಮಿ&#೩೯;, ಕುತ್ಪಾಡಿ, ಉಡುಪಿ-೫೭೪೧೧೮

ಮೊಬೈಲ್ ಸಂಖ್ಯೆ : ೯೪೪೮೯೫೨೮೪೭(ಪ್ರದೀಪ್‌ಚಂದ್ರ ಕುತ್ಪಾಡಿ) ಇವರನ್ನು ಸಂಪರ್ಕಿಸಬೇಕು ಅಥವಾ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು (೯೮೪೪೭೪೨೧೬೬) ಅಥವಾ ಜತೆ ಕಾರ್ಯದರ್ಶಿಗಳಾದ ಶ್ರೀಪಾದ ಹೆಗಡೆ (೯೮೪೫೧೧೧೪೪೯) ಹಾಗೂ ವಿವೇಕಾನಂದ ಎನ್. (೯೪೪೯೩೬೭೫೯೫) ಇವರನ್ನು ಸಂಪರ್ಕಿಸಬಹುದು ಎಂದು “ರoಗಭೂಮಿ” ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply