ನೀರಾವರಿ ​​ಸಚಿವ ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿಡಿ!​ ಆಡಿಯೋ ಲೀಕ್‌ ​

ಬೆಂಗಳೂರು: ಸಚಿವ ರಮೇಶ್‌ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಹೊರಬೀಳುತ್ತಿದ್ದಂತೆ ಇದರ ಹಿಂದಿರುವ ಕೈ ಯಾವುದು ಎಂಬ ಪ್ರಶ್ನೆ ಈಗ ಎಲ್ಲರ ತಲೆ ಕೊರೆಯುತ್ತಿದೆ. ನಿನ್ನೆಯಷ್ಟೇ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ “ಇನ್ನು ಮುಂದೆ ನಾನು ಲಕ್ಷ್ಮಿ ಹೆಬ್ಳಾಕರ್ ಬಗ್ಗೆ ಮಾತನಾಡಲ್ಲ” ಎಂದು ಹೇಳಿದ್ದರು. ಹೀಗೆ ಹೇಳಿದ ಮರುದಿನವೇ ಸೆಕ್ಸ್‌ ಸಿಡಿ ಹೊರಬೀಳುತ್ತದೆ ಎಂದರೆ ಸೆಕ್ಸ್‌ ಸಿಡಿ ಸಿಕ್ರೇಟ್‌ ಸಚಿವರಿಗೆ ಮೊದಲೇ ತಿಳಿದಿತ್ತೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಸಚಿವ ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿಡಿ!: ಕೆಲವು ದಿನಗಳಿಂದ ರಮೇಶ್‌ ಜಾರಕಿಹೊಳಿ ಅವರ ಮಾತಿನ ಶೈಲಿಯೇ ಬದಲಾಗಿತ್ತು. ರಾಜಕೀಯ ವಿರೋಧಿಗಳ ಬಗ್ಗೆ ಸಾಫ್ಟ್‌ ಕಾರ್ನರ್‌ ವಹಿಸಿದ್ದನ್ನು ಗಮನಿಸಿದರೆ ರಮೇಶ್‌ ಜಾರಕಿ ಹೊಳಿ ಅವರಿಗೆ ಸಿಡಿ, ಆಡಿಯೋ ಲೀಕ್‌ ಆಗೋ ವಿಷಯ ಮೊದಲೇ ಗೊತ್ತಿತ್ತೇ ಎಂದೇ ಅನುಮಾನ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಪ್ಲಾನ್‌ ಮಾಡಿ ಈ ರಿತಿ ಸಚಿವರನ್ನು ಸೆಕ್ಸ್‌ ಖೆಡ್ಡಾಗೆ ಬೀಳಿಸಿದ್ದು ಯಾರು? ರಾಸಲೀಲೆ ಸಿಡಿ ಯಾವತ್ತಿನದು? ಎಲ್ಲಿ ಅವರನ್ನು ಟ್ರಾಪ್‌ ಮಾಡಲಾಗಿದೆ? ಇದಕ್ಕೆ ಎಷ್ಟು ದಿನಗಳಿಂದ ಹೊಂಚು ಹಾಕಲಾಗಿತ್ತು? ಎಂಬುದರ ಎಲ್ಲಾ ಅಸಲಿಯತ್ತು ಇನ್ನಷ್ಟೇ ಗೊತ್ತಾಗಬೇಕಿದೆ.‌

ಇನ್ನು ಸೆಕ್ಸ್‌ ವಿಡಿಯೋ ಜೊತೆಗೆ ಯುವತಿಯೊಂದಿಗೆ ಮಾತನಾಡಿರುವ ಆಡಿಯೋ ಕೂಡ ಪಬ್ಲಿಕ್‌ ಆಗುವ ಮೂಲಕ ರೂಂ ನಲ್ಲಿ ಬೆತ್ತಲಾಗಿದ್ದ ರಮೇಶ್‌ ಜಾರಕಿಹೊಳಿ ರಾಜ್ಯದ ಜನತೆ ಮುಂದೆ ಕೂಡ ಬೆತ್ತಲಾದರು. ಯುವತಿ ಜೊತೆಗಿನ ಚಕ್ಕಂದದ ವಿಡಿಯೋ ಬಯಲಾಗುತ್ತಿದ್ದಂತೆ ಮೈಸೂರಿನಲ್ಲಿದ್ದ ರಮೇಶ್‌ ಜಾರಕಿಹೊಳಿ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬುದು ತಿಳಿದುಬಂದಿದೆ.

 
 
 
 
 
 
 
 
 
 
 

Leave a Reply