ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳು ಖಾಲಿ, ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಅಂಚೆ ಇಲಾಖೆಯಲ್ಲಿ 40,889 ಪೊಸ್ಟ್‌ ಮ್ಯಾನ್‌ (ಗ್ರಾಮೀಣ ಡಾಕ್‌ ಸೇವಕ್) ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ 40,889 ಪೊಸ್ಟ್‌ ಮ್ಯಾನ್‌ (ಗ್ರಾಮೀಣ ಡಾಕ್‌ ಸೇವಕ್) ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಸಲಾಗಿದೆ.

 

ಹುದ್ದೆಗಳ ಸಂಖ್ಯೆ: 40,889 (ದೇಶದಲ್ಲಿ) 3036 (ಕರ್ನಾಟಕದಲ್ಲಿ), ಹುದ್ದೆಗಳು ಮತ್ತು ವೇತನ. ಬ್ರ್ಯಾಂಚ್‌ ಪೋಸ್ಟ್‌ಮಾಸ್ಟರ್‌: 12,000-29,380 ರೂ. ಅಸಿಸ್ಟಂಟ್ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್: 10,000-24,470 ರೂ,  ಪೋಸ್ಟ್‌ಮ್ಯಾನ್‌: 10,000-24,470 ರೂ. ವಿದ್ಯಾರ್ಹತೆ: ಕನಿಷ್ಠ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ ಹೀಗಿದೆ.

ದಕ್ಷಿಣಕನ್ನಡಜಿಲ್ಲೆ: ಮಂಗಳೂರು ಅಂಚೆವಿಭಾಗ ಮಂಗಳೂರು, ಮೂಲ್ಕಿ, ಉಳ್ಳಾಲ ತಾಲೂಕುಗಳು – 95, ಪುತ್ತೂರು ಅಂಚೆವಿಭಾಗ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ, ಮೂಡಬಿದ್ರಿ ಕಾರ್ಕಳ ತಾಲೂಕುಗಳು –  113, ಉಡುಪಿ ಜಿಲ್ಲೆ: ಉಡುಪಿ ಅಂಚೆ ವಿಭಾಗ ಉಡುಪಿ, ಕುಂದಾಪುರತಾಲೂಕುಗಳು-  65 

ಆಸಕ್ತರು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸ ಲಾಗುವುದು. ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 40 ವರ್ಷ ಮೀರಿರಬಾರದು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಿ, ನಂತರ ಮೆರಿಟ್ ಪಟ್ಟಿ ತಯಾರು ಮಾಡಲಾಗುತ್ತದೆ. ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ, ನೇಮಕಾತಿ ಮಾಡಿಕೊಳ್ಳಲಾಗುವುದು. ಅರ್ಜಿ ಶುಲ್ಕ: 100 ರೂ. ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 16-02-2023

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: https://indiapostgdsonline.gov.in

ಮಂಗಳೂರು ವಿಭಾಗದಲ್ಲಿ ಒಟ್ಟು 95ಹುದ್ದೆಗಳು ಖಾಲಿ ಇದ್ದು ಆನ್ ಲೈನ್ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ತುಂಬಲ್ಪಡುತ್ತದೆ. ಈ ಹುದ್ದೆಗಳ ವಿವರಗಳನ್ನು ಅನುಬಂಧ 1 ರಲ್ಲಿ ನೀಡಲಾಗಿದೆ. ಗ್ರಾಮೀಣ ಅಂಚೆಸೇವಕ ಹುದ್ದೆಗಳಿಗೆ ಸಂಬಂಧಿಸಿದಂತೆಸಂಕ್ಷಿಪ್ತಮಾಹಿತಿ ಕೆಳಗಿನಂತಿದೆ.

ಶಾಖಾ ಅಂಚೆ ಪಾಲಕ (BPM) : ಗ್ರಾಮಾಂತರ ಪ್ರದೇಶದಲ್ಲಿ ಮತ್ತು ಕೆಲವು ಪಟ್ಟಣ ಪ್ರದೇಶದಲ್ಲಿ ಶಾಖಾ ಅಂಚೆ ಕಚೇರಿಗಳಿದ್ದು ಶಾಖಾ ಅಂಚೆ ಪಾಲಕರು ಅದರ ಮುಖ್ಯಸ್ಥರಾಗಿರುತ್ತಾರೆ. ಶಾಖಾ ಅಂಚೆ ಪಾಲಕರು ಅಂಚೆ ಸೇವೆಗಳಿಗೆ ಸಂಬಂಧಿಸಿದಂತೆ ಅಂಚೆ ಇಲಾಖೆಯಿಂದ ನೀಡಲ್ಪಡುವ ಯೋಜನೆಗಳು ,ಗ್ರಾಮೀಣ ಅಂಚೆ ಜೀವ ವಿಮೆ, ಅಂಚೆ ಜೀವ ವಿಮೆ.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ರಿಜಿಸ್ಟರ್/ಸ್ಪೀಡ್ ಪೋಸ್ಟ್ ಕಳುಹಿಸುವುದು, ಪತ್ರಗಳ ರವಾನೆ ಹೀಗೆ ವಿವಿಧ ಅಂಚೆ ಸೇವೆಗಳನ್ನು 4 ಅಥವ 5 ಗಂಟೆಗಳ ವರೆಗೆ ಸಾರ್ವಜನಿಕರಿಗೆ ನೀಡುವ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಸಹಾಯಕ ಅಂಚೆಪಾಲಕ (ABPM) : ಅವರ ಮುಖ್ಯವಾದ ಉದ್ಯೋಗ ಬಟವಾಡೆಗೆ ಸಂಬಂಧಿಸಿದ್ದಾಗಿ ರುತ್ತದೆ. ರಿಜಿಸ್ಟರ್ಡ್ ಪತ್ರಗಳು/ಸ್ಪೀಡ್ ಪೋಸ್ಟ್ ಗಳು, ಮನಿ ಆರ್ಡರ್ ಗಳನ್ನು ಮನೆ ಮನೆಗೆ ಬಟವಾಡೆ ಮಾಡುವ ಜವಾಬ್ದಾರಿ ಇವರದ್ದಾಗಿರುತ್ತದೆ. ಜೊತೆಯಲ್ಲಿ ಹೊಸ ಗ್ರಾಮೀಣ ಅಂಚೆ ಜೀವ ವಿಮೆ ಪಾಲಿಸಿಗಳನ್ನು ಮಾಡಿಸುವುದು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಮನೆ ಮನೆಗಳಿಗೆ ಬ್ಯಾಂಕಿಗ್ ಸೌಲಭ್ಯ ಹೀಗೆ ಹಲವಾರು ಜವಾಬ್ದಾರಿಗಳು ಇವರದ್ದಾಗಿರುತ್ತದೆ.

ಢಾಕ್ ಸೇವಕ್(DS) : ಈ ಹುದ್ದೆಯಲ್ಲಿ ಇವರು ಉಪ ಅಂಚೆ ಕಚೇರಿಗಳಲ್ಲಿ ಪ್ಯಾಕರ್ ಹುದ್ದೆಗಳನ್ನು ನಿರ್ವಹಿಸ ಕಾಗುತ್ತದೆ. ಮತ್ತು ಆಯಾ ಅಂಚೆ ಕಚೇರಿಗಳಿಗಿರುವ ಉಪ ಅಂಚೆ ಪಾಲಕರಿಗೆ ಕಚೇರಿಯ ನಿರ್ವಹಣೆಯಲ್ಲಿ ಹಾಗೂ ವ್ಯವಹಾರ ಅಭಿವೃದ್ಧಿಯಲ್ಲಿ ಸಹಕರಿಸುವ ಕೆಲಸವನ್ನು ಡಾಕ್ ಸೇವಕರು ಹೊಂದಿರುತ್ತಾರೆ.

ಗ್ರಾಮೀಣ ಅಂಚೆ ಸೇವಕರು ಸಿವಿಲ್ಪೋಸ್ಟ್ಗಳನ್ನು ಹೊಂದಿದ್ದರೂ ಅವರು ಯೂನಿಯನ್ಆ ಫ್ಇಂಡಿಯಾದ ನಿಯಮಿತ ಸಿವಿಲ್ಸೇವೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಅವರು ದಿನಾಂಕ 14.02.2020 ರ ಆದೇಶ ಸಂಖ್ಯೆ 17-30/2019-GDS ರ ಪ್ರಕಾರ ನಿರ್ಧರಿಸಲಾದ GDS (Conduct and Engagement) Rules, 2020 (ಕಾಲಕಾಲಕ್ಕೆತಿದ್ದುಪಡಿಗೊಳಪಟ್ಟಂತೆ)ನಿಯಮಗಳಿಂದನಿಯಂತ್ರಿಸಲ್ಪಡುತ್ತಾರೆ. ಈ ಆದೇಶವು , www.indiapost.gov.inನಲ್ಲಿಲಭ್ಯವಿದೆ.

ಭತ್ಯೆಗಳು : ಶಾಖಾ ಅಂಚೆ ಪಾಲಕರಲ್ಲಿ 4 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಮತ್ತು 5 ಗಂಟೆಗಳ ಶಾಖಾ ಅಂಚೆ ಕಚೇರಿಗಳು ಎಂಬ ಎರಡು ವಿಧಗಳಿದ್ದು ನಾಲ್ಕು ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/-ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರೆ ವೇತನಗಳು . ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 14500/- ಭತ್ಯೆ ಮೂಲ ವೇತನ ಹಾಗೂ ತುಟ್ಟಿ ಭತ್ಯೆ,ಇತರೆ ವೇತನಗಳು ಲಭಿಸುತ್ತದೆ.

ಉಪ ಶಾಖಾ ಅಂಚೆ ಪಾಲಕರು ಹಾಗೂ ಢಾಕ್ ಸೇವಕ್ ಹುದ್ದೆಗಳಲ್ಲಿ 4 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 10000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಹಾಗೂ ಇತರೆ ವೇತನಗಳು . ಮತ್ತು 5 ಗಂಟೆ ಕೆಲಸ ಮಾಡುವ ಶಾಖಾ ಅಂಚೆ ಪಾಲಕರಿಗೆ ರೂ 12000/- ಭತ್ಯೆ ಮೂಲ ವೇತನ ಮತ್ತೆ ತುಟ್ಟಿ ಭತ್ಯೆ ಲಭಿಸುತ್ತದೆ.

01-07-2018 ರ ನಂತರ ಅಯ್ಕೆಗೊಂಡ ಅಭ್ಯರ್ಥಿಗಳಿಗೆ ಆರಂಭಿಕ ಹಂತದಲ್ಲಿ ಆಯಾ ವರ್ಗಕ್ಕೆ ಸಂಬಂಧಿಸಿದ 4 ಗಂಟೆ ಕೆಲಸದ ಅವಧಿಗೆ ನಿಗದಿಯಾದ ವೇತನ ಶ್ರೇಣಿಯೇ ಅನ್ವಯವಾಗುವುದು.

ವಯೋಮಿತಿ:ಈ ಹುದ್ದೆಗೆ ಅರ್ಜಿ ಸುವ ಅಭ್ಯರ್ಥಿಗಳು, 05.06.2022ಗೆ ಅನ್ವಯವಾಗುವ ಹಾಗೆ 18 ರಿಂದ 40 ವರ್ಷದ ವಯೋಮಿತಿಯೊಳಗಿರಬೇಕು.ಅನುಸೂಚಿತ ಜಾತಿ ಮತ್ತು ಇತರ ವರ್ಗಗಳಿಗೆ 5 ವರ್ಷಗಳ ವಿನಾಯಿತಿ, ಒ.ಬಿ.ಸಿ ಅಂದರೆ ಇತರ ಹಿಂದುಳಿದ ವರ್ಗದವರಿಗೆ 3 ವರ್ಷದ ವಿನಾಯಿತಿ ಅನ್ವಯಿಸುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವರ್ಗ ಅಂದರೆ EWS ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ. ಇನ್ನು ವಿಕಲ ಚೇತನರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ.

ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟವಿಕಲಚೇತನರಿಗೆ ಒಟ್ಟು 13 ವರ್ಷಗಳು ಹಾಗೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳಿಗೆ ಸಂಬಂಧಪಟ್ಟವಿಕಲಚೇತನರಿಗೆ ವಯೋಮಿತಿಯಲ್ಲಿ15 ವರ್ಷಗಳ ಸಡಿಲಿಕೆ ಇರುತ್ತದೆ.

ಶೈಕ್ಷಣಿಕಆರ್ಹತೆ:ಎಲ್ಲಾ ಹುದ್ದೆಗಳಿಗೆ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವುದು ಕಡ್ಡಾಯ. ಗಣಿತ ಮತ್ತು ಇಂಗ್ಲೀಷಿನಲ್ಲಿ ಕನಿಷ್ಟ ತೇರ್ಗಡೆ ಅಂಕಗಳನ್ನು ಕೂಡ ಹೊಂದಿರಬೇಕು. ಮಾನ್ಯತೆ ಹೊಂದಿರುವ ಪ್ರೌಢ ಶಿಕ್ಷಣ ಮಂಡಳಿಯಿಂದ ನೀಡಲ್ಪಡುವ SSLC/10ನೇತರಗತಿಪ್ರಮಾಣ ಪತ್ರ ಹೊಂದಿರಬೇಕು. ಅಲ್ಲದೆ ಅಭ್ಯರ್ಥಿಯು ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಒಂದು ವಿಷಯವಾಗಿ ಅದ್ಯಯನ ನಡೆಸಿದವರೂ ಅರ್ಜಿ ಸಲ್ಲಿಸಬಹುದಾಗಿದೆ.

ವಸತಿ: ಹುದ್ದೆಗೆ ಆಯ್ಕೆಗೊಂಡಲ್ಲಿ ಶಾಖಾ ಅಂಚೆ ಪಾಲಕರು ಕನಿಷ್ಟ 10*10 ಅಳತೆಯ ಅಂದರೆ ಸುಮಾರು 100 ಚದರ ಅಡಿ ವಿಸ್ತೀರ್ಣ ಹೊಂದಿರುವ ಪ್ರಮುಖ ಜಾಗದಲ್ಲಿರುವ ಒಂದು ಕಟ್ಟಡವನ್ನು ಶಾಖಾ ಅಂಚೆ ಕಚೇರಿ ನಡೆಸಲು ಕೊಡುವ ಭಾದ್ಯತೆಯನ್ನು ಹೊಂದಿರುತ್ತಾರೆ. ಅಲ್ಲದೇ ಸದ್ರಿ ಗ್ರಾಮದಲ್ಲಿ ವಾಸ ಮಾಡಬೇಕು. ಮತ್ತು ಆ ಕಟ್ಟಡಕ್ಕೆ ವಿದ್ಯುಚ್ಚಕ್ತಿಯ ಪೂರೈಕೆ ಕೂಡ ಇರಬೇಕು.

ಇತ್ತೀಚಿನ ದಿನಗಳಲ್ಲಿ ಶಾಖಾ ಅಂಚೆ ಕಚೇರಿಗಳಲ್ಲಿ ಇಲೆಕ್ಟ್ರಾನಿಕ್ ದರ್ಪಣ್ ಉಪಕರಣದ ಮೂಲಕ ತಂತ್ರಜಾನ ಆಧಾರಿತ ಸೇವೆಗಳನ್ನು ನೀಡುತ್ತಿರುವುದರಿಂದ ಆ ಊರಿನಲ್ಲಿ ಸದ್ರಿ ಅಂಚೆ ಪಾಲಕರು ನೀಡುವ ಕಟ್ಟಡದಲ್ಲಿ ಸರಿಯಾದ ರೀತಿಯ ನೆಟ್ ವರ್ಕ್ ಲಭ್ಯತೆಯು ಕೂಡ ಮುಖ್ಯ ಆಗಿರುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯ (OC)/ಹಿಂದುಳಿದ(OBC)/ಆರ್ಥಿಕವಾಗಿ ಹಿಂದುಳಿದ(EWS) ವರ್ಗಗಳಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ರೂಪಾಯಿ 100 ಅನ್ನು ಅರ್ಜಿ ಶುಲ್ಕವಾಗಿ ಸಲ್ಲಿಸಬೇಕಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಮತ್ತು SC/ST ಹಾಗೂ PwDಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ.

ಎಲ್ಲಾ ಹುದ್ದೆಗಳಿಗೂ ಕೂಡ ಸ್ವತಂತ್ರವಾಗಿ ಸೈಕಲ್ ಚಲಾಯಿಸುವ ಅಥವಾ ಮೋಟರ್ ಸೈಕಲ್ ಚಲಾಯಿಸುವ ಸಾಮರ್ಥ್ಯ ವನ್ನು ಹೊಂದಿರಬೇಕು. ಈ ಎಲ್ಲಾ ಹುದ್ದೆಗಳಲ್ಲೂ 4 ಅಥವಾ 5 ಗಂಟೆ ಮಾತ್ರ ಕೆಲಸ ಮಾಡುವ ಹುದ್ದೆಗಳಾಗಿದ್ದು ಇನ್ನುಳಿದ ಅವಧಿಗಳಲ್ಲಿ ಪ್ರತೀ ಅಭ್ಯರ್ಥಿಯೂ ಕೂಡ ತನ್ನ ಜೀವನ ನಿರ್ವಹಣೆಗ ಬೇಕಾದ ಬೇರೆ ಬದಲಿ ಆದಾಯದ ಮೂಲವನ್ನು ಹೊಂದಿರಬೇಕು. ಅಭ್ಯರ್ಥಿಗಳು ಸ್ವಂತ ಸಕ್ರಿಯ eMail ID ಮತ್ತುಮೊಬೈಲ್ಸಂಖ್ಯೆಯನ್ನು ಹೊಂದಿರಬೇಕು.

ಅರ್ಜಿಸಲ್ಲಿಸುವ ಬಗ್ಗೆ ಮಾಹಿತಿಗಳು ; https://indiapost.gov.inಅಥವಾhttps://indiapostgdsonline.gov.in ವೆಬ್ ಸೈಟ್ ನಲ್ಲೂ ಕೂಡ ಲಭ್ಯವಿದೆ. ಮಂಗಳೂರಿನಲ್ಲಿ ಸುಮಾರು 95 ಹುದ್ದೆಗಳಿರುವುದರಿಂದ ಹಾಗೂ ಆಯ್ಕೆಯು ಸಂಪೂರ್ಣವಾಗಿ ಅಂಕಗಳ ಆಧಾರದಲ್ಲಿ ಆನ್ ಲೈನ್ ಮೂಲಕ ಇರುವುದರಿಂದ ಮತ್ತೆ ಇದಕ್ಕೆ ಯಾವುದೇ ತರಹದ ಸಂದರ್ಶನವು ಇಲ್ಲದೇ ಇರುವುದರಿಂದ ಇದೊಂದು ಎಲ್ಲಾ SSLC ಮತ್ತು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಯೊಂದಿಗೆ ಕೆಲಸ ಮಾಡುವ ಒಂದು ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಇದನ್ನು ಅರ್ಹ ಅಭ್ಯರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.

ಅರ್ಜಿಯನ್ನು ಸಲ್ಲಿಸುವ ಮೊದಲು ಇತ್ತೀಚಿನಭಾವಚಿತ್ರ (jpg/jpeg, 50 kb), ಸಹಿ (jpg/jpeg, kb) ಇವುಗಳನ್ನು ಸ್ಕ್ಯಾನಿಂಗ ಮಾಡಿ ಇಟ್ಟುಕೊಂಡು ಅದನ್ನು ನಿಗದಿತ ಹಂತದಲ್ಲಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕಾಗುತ್ತದೆ.

ಹೆಚ್ಚಿನ ಮಾಹಿತಿಯು https://indiapostgdsonline.gov.inಲಭ್ಯವಿದೆ ಹಾಗೂ ಯಾವುದೇ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗಳನ್ನು ಅಥವಾ ವಿಭಾಗೀಯ ಕಚೇರಿ, ಬಲ್ಮಠ ವನ್ನು ಸಂಪರ್ಕಿಸ ಬಹುದು. ನಮ್ಮ ಕಚೇರಿಯ ದೂರವಾಣಿ ಸಂಖ್ಯೆ 0824-2218400 ಇ-ಮೇಲ್ [email protected]

 
 
 
 
 
 
 
 
 
 
 

Leave a Reply