ಕಾಪು ದೀಪಸ್ತಂಭದ ನವೀಕೃತ ಶಾಶ್ವತ ಚಿತ್ರ ಅಂಚೆ ಮೊಹರು (ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್) :

ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸೀ ತಾಣ ಕಾಪು. ನಯನ ಮನೋಹರ ಕಡಲು ಹಾಗು ಸುಂದರ ಕಡಲತೀರದೊಂದಿಗೆ ಆಕರ್ಷಕ ಲೈಟ್ ಹೌಸ್ ಇಲ್ಲಿನ‌ ವಿಶೇಷತೆ. 1901ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ 34 ಮೀಟರ್ ಎತ್ತರದ ಈ ದೀಪ ಸ್ತಂಭವನ್ನು ನಿರ್ಮಿಸಿದ್ದು ಉಪಗ್ರಹ ಆಧಾರಿತ ದಿಕ್ಸೂ ಚಿ ಇಲ್ಲದಿದ್ದಾಗ ಹಡಗುಗಳಿಗೆ, ನಾವಿಕರಿಗೆ ಮಾರ್ಗದರ್ಶನ ನೀಡಲು ಇದು ಬಳಕೆಯಾಗುತ್ತಿತ್ತು.

ಈ ಕಾಪು ಲೈಟ್ ಹೌಸ್ ಪಾರಂಪರಿಕ ತಾಣವಾಗಿ ಕಡಲ ತೀರಕ್ಕೆ ವಿಶೇಷ ಮೆರುಗು‌ನೀಡಿದೆ. ಪ್ರವಾಸೋದ್ಯಮಕ್ಕೆ ಕೊಡುಗೆಯಾಗಿ ಕಾಪು ಅಂಚೆ ಕಚೇರಿಯಲ್ಲಿ ಕಾಪು ದೀಪಸ್ತಂಭದ ನವೀಕೃತ ಶಾಶ್ವತ ಚಿತ್ರ ಅಂಚೆ ಮೊಹರು( ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ ) 21.08. 2021 ರಿಂದ ಲಭ್ಯವಿದೆ. 

ಅಂಚೆ ಪರಿಕರಗಳಿಗೆ ಯಾವುದೇ ಶುಲ್ಕವಿಲ್ಲದೆ ಆಸಕ್ತರು ಫಿಲಾಟಲಿ ಮೌಲ್ಯದ ಈ ಶಾಶ್ವತ ಅಂಚೆ ಮೊಹರಿನ ಮುದ್ರೆಯನ್ನು ಪಡೆದುಕೊಳ್ಳಬಹುದು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply