ಮಕ್ಕಳ ಪ್ರತಿಭೆ ಆನಾವರಣಕ್ಕೆ ಥೀಮ್ ಪಾರ್ಕ್ ವೇದಿಕೆ ಸಹಕಾರಿ – ಪೂರ್ಣಿಮಾ

ಕೋಟ : ಮಕ್ಕಳ ಸಂಬಂಧಿತ ಕಾರ್ಯಕ್ರಮಗಳು ಮಕ್ಕಳ ಭೌತಿಕ ವಿಕಸನಕ್ಕೆ ಸಹಕಾರಿಯಾಗಿದ್ದು ಕಾರಂತರ ಆಸಕ್ತಿಯಂತೆ ಮಕ್ಕಳಿಗಾಗಿ ವಿವಿಧ ವಿನೂತನ ಕಾರ್ಯಕ್ರಮಗಳ ಆಯೋಜನೆ, ಪುರಸ್ಕಾರಗಳು ಮಕ್ಕಳಲ್ಲಿನ ಹೊಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುತ್ತದೆ ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಥೀಮ್ ಪಾರ್ಕ್‌ ವೇದಿಕೆಯಾಗಿ ರೂಪುಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ  ಪೂರ್ಣಿಮಾ ಅವರು ಹೇಳಿದರು.

ಅವರು ಕೋಟದ ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಡಾ| ಶಿವರಾಮ ಕಾರಂತ ಟ್ರಸ್ಟ್  ಉಡುಪಿ, ಡಾ| ಶಿವರಾಮ ಕಾರಂತ ಪ್ರತಿಷ್ಠಾನ  ಕೋಟಿ, ಡಾ| ಶಿವರಾಮ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ ಕೋಟ ಇವರ ಆಶ್ರಯದಲ್ಲಿ ನಡೆದ ಕಾರಂತರ ಇಪ್ಪತ್ತೈದನೇ ಪುಣ್ಯ ಸ್ಮರಣೆ ಅಂಗವಾಗಿ ಮಕ್ಕಳ ಸಾಂಸ್ಕೃತಿಕ -ಸಾಹಿತ್ಯಕ ರಸಗವಳ ಅನೂಹ್ಯ-2022(ನಾವೀನ್ಯದ  ಗೌಜಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ  ಅಶ್ವಿನಿ ದಿನೇಶ್, ವಿವೇಕ ಬಾಲಕಿಯರ ಪ್ರೌಡಶಾಲೆ ಮುಖ್ಯೋಪಾದ್ಯಾಯರಾದ  ಜಗದೀಶ್ ಹೊಳ್ಳ, ಕೋಟತಟ್ಟು ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ  ನರೇಂದ್ರ ಕುಮಾರ್ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಕೋಟ ವಿವೇಕ ಬಾಲಕಿರ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಅಮರ ಸುಳ್ಯ ಕ್ರಾಂತಿ-1937 ಯಕ್ಷಗಾನ ತಾಳಮದ್ದಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

.

 
 
 
 
 
 
 
 
 
 
 

Leave a Reply