ಹಿಜಾಬ್ ನಿಷೇಧವನ್ನು ಹಿಂಪಡೆಯಲಾಗುವುದು :ಶಾಸಕಿ ಕನೀಝ್ ಫಾತಿಮಾ

ಬೆಂಗಳೂರು: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಬಿಜೆಪಿ ಹೇರಿರುವ ಹಿಜಾಬ್ ನಿಷೇಧವನ್ನು ಹಿಂಪಡೆಯ ಲಾಗುವುದು ಎಂದು ಶಾಸಕಿ ಕನೀಝ್ ಫಾತಿಮಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಏಕೈಕ ಮುಸ್ಲಿಂ ಮಹಿಳಾ ಶಾಸಕಿ ಕನೀಝ್ ಫಾತಿಮಾ. ಮುಂದಿನ ದಿನಗಳಲ್ಲಿ ನಾವು ಹಿಜಾಬ್ ನಿಷೇಧವನ್ನು ತೆಗೆದು ಹಾಕುತ್ತೇವೆ. ಹೆಣ್ಣು ಮಕ್ಕಳಿಗೆ ಶಾಲೆಗೆ ಮರಳಲು ಅವಕಾಶ ನೀಡಲಾಗುವುದು. ಅವರು ಪರೀಕ್ಷೆಗಳನ್ನು ಬರೆಯಬಹುದು. ಆ ಹುಡುಗಿಯರು ಎರಡು ಅಮೂಲ್ಯ ವರ್ಷಗಳನ್ನು ಕಳೆದುಕೊಂಡರು ಎಂದು ಅವರು ಹೇಳಿದರು.

ಉತ್ತರ ಗುಲ್ಬರ್ಗ್ ಕ್ಷೇತ್ರದಿಂದ ಕನೀಝ್ ಸ್ಪರ್ಧಿಸಿದ್ದರು. ಕನೀಝ್ ಬಿಜೆಪಿಯ ಚಂದ್ರಕಾಂತ್ ಬಿ. ಪಾಟೀಲ್ ಅವರನ್ನು 2712 ಮತಗಳಿಂದ ಸೋಲಿಸಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ತರುವಾಯ, ಅನೇಕ ವಿದ್ಯಾರ್ಥಿನಿಯರು ಶಿಕ್ಷಣವನ್ನು ತೊರೆದರು.

ಈ ವರ್ಷ ಮಾರ್ಚ್‌ನಲ್ಲಿಯೂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡುವುದಿಲ್ಲ ಎಂದು ಕರ್ನಾಟಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದರು. ಹಿಜಾಬ್ ಸಮವಸ್ತ್ರದ ಭಾಗವಲ್ಲ ಮತ್ತು ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಲು ಒತ್ತಾಯಿಸುವವರನ್ನು ಸಭಾಂಗಣಕ್ಕೆ ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಬಿಜೆಪಿಯ ನಿಷೇಧದ ವಿರುದ್ಧ ಪ್ರತಿಭಟನೆ ಗಳು ನಡೆದಿದ್ದವು. ಹಿಜಾಬ್ ನಿಷೇಧ ಸೇರಿದಂತೆ ಬಿಜೆಪಿಯ ಕೋಮುವಾದಿ ನಿಲುವುಗಳಿಗೆ ಚುನಾವಣಾ ಸೋಲು ಉತ್ತರವಾಗಿದೆ ಎಂದರು 

 
 
 
 
 
 
 
 
 
 
 

Leave a Reply