ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ

ಕೋವಿಡ್ ಸಮಯ ಸಂಶೋಧಕರು, ಸಾಹಿತಿಗಳು ಮತ್ತು ಬರಹಗಾರರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿ ಅನೇಕ ಕಾದಂಬರಿ, ಸಾಹಿತ್ಯಗಳನ್ನು ರಚಿಸುವಲ್ಲಿ ಸಹಕಾರಿಯಾಯಿತು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಹೇಳಿದರು.

ಕೋಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನ, ಪಾಂಮೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಓದುಗರನ್ನು ಕಾದಂಬರಿಗಳು ಓದಿಸಿಕೊಂಡು ಹೋಗುವ ಗುಣಗಳನ್ನು ಹೊಂದಿರಬೇಕು ಎಂದ ಅವರು ಡಾ.ಶ್ರೀಧರ್ ಎಚ್.ಜಿ ಅವರು ಪ್ರಸ್ಥಾನ ಕಾದಂಬರಿಯಲ್ಲಿ ಶರಾವತಿ ಮುಳುಗಡೆ ಪ್ರದೇಶದ ಜನರ ನೋವು ಬವಣೆಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಶರಾವತಿ ಅಣೆಕಟ್ಟುಗಳನ್ನು ಕಟ್ಟುವ ಸಂದರ್ಭ ಅಭಿವೃದ್ಧಿ, ಪ್ರಗತಿ ಮತ್ತು ಅನೇಕರ ಬದುಕು ಮುಳುಗಿ ಹೋಗುವ ಕಥನ ಅನಿವಾರ್ಯವಾಗಿತ್ತು. ಆದರೆ ೫೦ವರ್ಷಗಳ ಹಿಂದಿನ ಅಣೆಕಟ್ಟುಗಳ ಅಪಾಯದ ಬಗ್ಗೆ ನಾವು ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭ ಪ್ರಥಮ ಬಹುಮಾನ ಪಡೆದ ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನ ಪ್ರಾಧ್ಯಾಪಕ ಹಾಗೂ ಕುಲಸಚಿವ ಡಾ.ಶ್ರೀಧರ ಎಚ್. ಜಿ ಅವರ ಪ್ರಸ್ಥಾನ ಕಾದಂಬರಿಗೆ ಪಾಂಡೇಶ್ವರ ಸೂರ್ಯನಾರಾಯಣ ಚಡಗ ಸ್ಮಾರಕ ಕಾದಂಬರಿ ಪ್ರಸಸ್ತಿ ನೀಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಗರದ ಹಿರಿಯ ಸಾಹಿತಿ ಅಂಬ್ರಯ್ಯಮಠ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಪ್ರೊ.ಗಣೇಶ ಬಿ.ವಿ ಅವರ ಕೆದ್ಲಾಯರ ಆಯ್ದ ವೈಚಾರಿಕ ಲೇಖನಗಳ ಪುಸ್ತಕವನ್ನು ಹಿರಿಯ ಪತ್ರಕರ್ತ ಎಂ.ಜಯರಾಮ ಅಡಿಗ ಬಿಡುಗಡೆಗೊಳಿಸಿದರು.

ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಚಡಗ ಸಂಸ್ಮರಣೆ ಮಾಡಿದರು. ಹಿರಿಯ ಸಾಹಿತಿ ಪ್ರೊ.ವಿ.ಗಣೇಶ ಪುಸ್ತಕ ಪರಿಚಯ ನೀಡಿದರು. ಬೆಳಗೋಡು ರಮೇಶ ಭಟ್ ಪ್ರಸ್ಥಾನ ಕಾದಂಬರಿಯ ಪರಿಚಯ ನೀಡಿದರು.

ಕೋಟೇಶ್ವರದ ಡಾ.ಸಬಿತ ಭಾಸ್ಕರ ಆಚಾರ್ಯ, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ತಾರನಾಥ ಹೊಳ್ಳ ಇದ್ದರು. ಕೋಟೇಶ್ವರದ ಡಾ.ಎನ್.ಬಾಸ್ಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ.ಉಪೇಂದ್ರ ಸೋಮಯಾಜಿ ವಂದಿಸಿದರು. ಅಧ್ಯಾಪಕಿ ಮಹಾಲಕ್ಷಿ÷್ಮÃ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply