ಒಬ್ಬ ಸಂಗೀತಾ ಕಲಾವಿದನಿಗೆ ಶ್ರದ್ಧೆ, ಭಕ್ತಿಯ ಜೊತೆಗೆ ಆಸಕ್ತಿ ಇದ್ದರೆ ಮಾತ್ರ ಸಂಗೀತ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು. ಸಂಗೀತ ಕಲೆಯು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಕೂಡ ಆಸಕ್ತಿಯ ಪ್ರಕಾರವಾಗಿದೆ ಎಂದು ವಿದುಷಿ ಲಕ್ಷಿö್ಮÃ ಗುರುರಾಜ್, ಇವರು ಡಾ. ಜಿ. ಶಂಕರ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು. ಸಾಂಸ್ಕೃತಿಕ ಸಂಘ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಕಾಲೇಜು ಎ.ವಿ. ಹಾಲ್ನಲ್ಲಿ ಸ್ವರ ಸಂಗಮ ಅಂತರ್ ಕಾಲೇಜು ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತಾನಾಡಿದರು.
ಸಂಗೀತ ಕಲಾವಿದರಿಗೆ, ಕೇಳುಗರ ಮೆಚ್ಚುಗೆಯ ಮಾತುಗಳೇ ಪ್ರೋತ್ಸಾಹಕ ಬಹುಮಾನವಾಗಿರುತ್ತದೆ. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕಲಾವಿದರಿಗೆ ಅವಕಾಶಗಳು ಮುಖ್ಯವಾಗಿದ್ದು, ಸಾಧನೆಗೆ ದಾರಿದೀಪವಾಗುತ್ತದೆ ಎಂದು ಶ್ರೀಮತಿ ಶೈಲಾ ರಾಜೇಂದ್ರ ಮಯ್ಯ ಮುಖ್ಯಅತಿಥಿಯ ಭಾಷಣದಲ್ಲಿ ಸ್ಪರ್ಧಾಳುಗಳನ್ನು ಉದ್ದೇಶಿಸಿ ಮಾತನಾಡಿದರು.
ಡಾ. ಭಾಸ್ಕರ ಶೆಟ್ಟಿ ಎಸ್. ಪ್ರಾಂಶುಪಾಲರು, ಸ.ಮ.ಪ್ರ.ದ. ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರು ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು, ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಉತ್ತಮ ಜೀವನ ಮೌಲ್ಯಗಳನ್ನು ತಿಳಿದುಕೊಳ್ಳುವುದು ಔಚಿತ್ಯವಾಗಿದೆ. ಸೋಲು-ಗೆಲುವು ಪ್ರತಿಯೊಬ್ಬನ ಜೀವನದ ಭಾಗವಾಗಿದ್ದು, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕೆಂದು ಹೇಳಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸೋಜನ್ ಕೆ.ಜಿ. ಸಂಚಾಲಕರು ಐಕ್ಯೂಎಸಿ, ಶ್ರೀಮತಿ ವಿದ್ಯಾ ಡಿ. ಸಂಚಾಲಕರು ಸಾಂಸ್ಕೃತಿಕ ಸಂಘ ಮತ್ತು ಡಾ. ವಾಣಿ ಆರ್ ಬಲ್ಲಾಳ್ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಉಡುಪಿಯ ಬೇರೆ ಬೇರೆ ಕಾಲೇಜಿನ ಸುಮಾರು ೧೭ ತಂಡ ಸ್ವರ ಸಂಗಮ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಕು. ಚೈತ್ರಾ, ದ್ವಿತೀಯ ಬಿ.ಎ. ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಕು. ಹರ್ಷಿತಾ ಎಸ್. ಪುತ್ರನ್ ಅತಿಥಿಗಳನ್ನು ಸ್ವಾಗತಿಸಿದರು. ಸಾಂಸ್ಕೃತಿಕ ಸಂಘ ಪ್ರತಿನಿಧಿ ಕು. ರಿಶಾಲ್ ಡಿ. ಮೆಲ್ಲೋ ವಂದಿಸಿದರು.