ನಿಟ್ಟೂರು ಪ್ರೌಢಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ಪದಗ್ರಹಣ

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಇಂರ‍್ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ 08-08-2022 ರಂದು ಜರಗಿತು. ರೋಟೆರಿಯನ್ ಡಾ| ಸುರೇಶ್ ಶೆಣೈ ಪದಗ್ರಹಣ ನೆರವೇರಿಸಿ, ವಿದ್ಯಾರ್ಥಿಗಳನ್ನು ಕುರಿತು ನಾಯಕತ್ವದ ಲಕ್ಷಣ ಈ ವಿಷಯದ ಬಗ್ಗೆ ಮಾತನಾಡುತ್ತಾ ಪ್ರತಿಯೊಬ್ಬನಲ್ಲೂ ನಾಯಕನಿದ್ದಾನೆ. ಉತ್ತಮ ಜ್ಞಾನ, ಸ್ಪಷ್ಟವಾದ ಗುರಿ ಎಲ್ಲರನ್ನು ಸೇರಿಸಿಕೊಂಡು ಮುನ್ನಡೆಯುವ ಮನಸ್ಸು ಇವು ಉತ್ತಮ ನಾಯಕತ್ವದ ಲಕ್ಷಣ. ವಿದ್ಯಾರ್ಥಿಗಳು ಇಂರ‍್ಯಾಕ್ಟ್ ಕ್ಲಬ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಭವಿಷ್ಯದಲ್ಲಿ ಉತಮ ನಾಯಕರಾಗಬಹುದು ಎಂದರು. ಉಡುಪಿ ರೋಟರಿಯ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಯ ಅನಾವರಣಕ್ಕಾಗಿ ರೋಟರಿ ಕ್ಲಬ್ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು. ನಿಟ್ಟೂರು ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡುತ್ತಾ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದಲ್ಲಿ ರೋಟರಿ ಕ್ಲಬ್ ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳು ಇಂರ‍್ಯಾಕ್ಟ್ ಕ್ಲಬ್ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಇಂರ‍್ಯಾಕ್ಟ್ ಸಭಾಪತಿ ರೋ| ಪದ್ಮಿನಿ ಭಟ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಅನಸೂಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಇಂರ‍್ಯಾಕ್ಟ್ ಕ್ಲಬ್ ಸಂಯೋಜಕ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು. ಇಂರ‍್ಯಾಕ್ಟರ್ ವೈಷ್ಣವಿ ಸ್ವಾಗತಿಸಿದರು, ದೀಕ್ಷಾ ನಾಯಕ್ ವಂದಿಸಿದರು. ಧನ್ಯಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply