ನವ ಭಾರತಕ್ಕೆ ‘ಮಿಷನ್ ಕರ್ಮಯೋಗಿ ನಾಗರಿಕ ಸೇವೆ:ಕೇಂದ್ರ ಗೃಹ ಸಚಿವ ಅಮಿತ್ ಶಾ

ಹೊಸದಿಲ್ಲಿ: ನಾಗರಿಕ ಸೇವೆಗಳ ಸಾಮರ್ಥ್ಯ ವರ್ಧನೆಯ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಸಿಎಸ್‌ಸಿಬಿ)ಯ ಕರ್ಮಯೋಗಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ. ಯೋಜನೆ ನಾಗರಿಕ ಸೇವೆಗಳಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ತರುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ. ಈ ದೂರದರ್ಶಿತ್ವದ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಕೃತಜ್ಞತೆ ಸಲ್ಲಿಸಿದ್ದಾರೆ.

“ಈ ಸಮಗ್ರ ಮತ್ತು ಆಮೂಲಾಗ್ರ ಯೋಜನೆಯು ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ವರ್ಧನೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು 21ನೇ ಶತಮಾನದ ಒಂದು ಹೆಗ್ಗುರುತಿನ ಸುಧಾರಣೆಯಾಗಿದ್ದು, ಇದು ಪ್ರತ್ಯೇಕವಾಗಿ ಕೆಲಸ ಮಾಡುವ ಸಂಸ್ಕೃತಿಯನ್ನು ಕೊನೆಗೊಳಿಸಿ, ಹೊಸ ಕಾರ್ಯ ಸಂಸ್ಕೃತಿಯನ್ನು ರೂಪಿಸುತ್ತದೆ. ಗುರಿ ಚಾಲಿತ ಮತ್ತು ನಿರಂತರ ತರಬೇತಿಯು ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಪಾರ ದರ್ಶಕತೆಯನ್ನು ಖಾತ್ರಿಪಡಿಸಲು ನಾಗರಿಕ ಸೇವಕರಿಗೆ ಅಧಿಕಾರ ಮತ್ತು ಸಂವೇದನೆಯನ್ನು ನೀಡು ತ್ತದೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ಈ ಸುಧಾರಣೆಯು ಸರಕಾರಿ ಕರ್ಮಚಾರಿಗಳಿಗೆ ತಮ್ಮದೇ ಆದ ಕಾರ್ಯಕ್ಷಮತೆಯನ್ನು ಸುಧಾರಿಸಲು ವ್ಯವಸ್ಥೆಯನ್ನು ಒದಗಿಸುವುದು ಮಾತ್ರವಲ್ಲದೆ ನವ ಭಾರತದ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಅದರಂತೆ ಬದುಕಲು ಸಹಕಾರಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ‘ನವ ಭಾರತಕ್ಕೆ ನಾಗರಿಕ ಸೇವೆ’ ಭವಿಷ್ಯಕ್ಕೆ ಸನ್ನದ್ಧವಾದ ನಾಗರಿಕ ಸೇವೆಯನ್ನು ರೂಪಿಸುವ ನಿಟ್ಟಿನಲ್ಲಿ  ಸರಕಾರ ಸಂಪೂರ್ಣ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.​
 
 
 
 
 
 
 
 
 
 
 

Leave a Reply