ನಟಿ ರಾಗಿಣಿ ಸಿಸಿಬಿ ಬಲೆಗೆ..?

ಬೆಂಗಳೂರು : ಕನ್ನಡ ಚಿತ್ರರಂಗದ ನಟ ನಟಿಯರ ಡ್ರಗ್ಸ್ ದಂಧೆ ಆರೋಪದ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಎದುರು ವಿಚಾರಣೆಗಾಗಿ ಸೋಮವಾರ ಬೆಳಿಗ್ಗೆ ಹಾಜರಾಗುವುದಾಗಿ ನಟಿ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ ಎನ್ನ ಲಾಗಿದೆ.

ಸಿಸಿಬಿ ನೀಡಿರುವ ನೋಟಿಸ್‌ ಉಲ್ಲೇಖಿಸಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರಾಗಿಣಿ “ನನ್ನ ವಕೀಲರು ಸಿಸಿಬಿ ಪೊಲೀಸರ ಎದುರು ಹಾಜರಾಗಲಿದ್ದಾರೆ‌” ಎಂದು ಹೇಳಿದ್ದಾರೆ.

“ಸಮಯದ ಅಭಾವದಿಂದ ಸಿಸಿಬಿ ಕಚೇರಿಗೆ ಹಾಜರಾಗಲು ಸಾಧ್ಯ ಆಗ್ತಿಲ್ಲ. ನನ್ನ ಪರವಾಗಿ ವಕೀಲರು ಸಿಸಿಬಿ ಕಚೇರಿಗೆ ಬಂದಿದ್ದಾರೆ. ನಾನು ಸೋಮವಾರ ಬೆಳಿಗ್ಗೆ ಕಚೇರಿಗೆ ಬಂದು ಹೇಳಿಕೆ ನೀಡುತ್ತೇನೆ” ಎಂದೂ ರಾಗಿಣಿ ಟ್ವೀಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಕೆಲ ನಟ-ನಟಿಯರು ಡ್ರಗ್ಸ್ ಧಂದೆಯಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಸಿಸಿಬಿ ತನಿಖೆ ಚುರುಕುಗೊಳಿಸಿದ್ದು ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿ ದ್ದಾರೆ.

ರಾಗಿಣಿ ದ್ವಿವೇದಿ ಮಾಜಿ ಗೆಳೆಯ ಜಯ ನಗರದ ಆರ್ ಟಿಒ ಅಧಿಕಾರಿ ರವಿಶಂಕರ್ ರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇದೇ ವೇಳೆ ನಾಳೆ 10ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ರಾಗಿಣಿಗೂ ಸಿಸಿಬಿ ನೋಟಿಸ್ ನೀಡಿದೆ. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.

ನಟಿ ರಾಗಿಣಿ ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿಶಂಕರ್ 2019ರ ಮಾರ್ಚ್ 16ರಂದು ಖಾಸಗಿ ಹೋಟೆಲ್ನಲ್ಲಿ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿ ಕೊಂಡಿದ್ದರು. ಅಂದು ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಇದಕ್ಕೆ ರಾಗಿಣಿ ರವಿಶಂಕರ್ ಜೊತೆ ಹೋಗಿದ್ದೆ ಗಲಾಟೆಗೆ ಕಾರಣವಾಗಿತ್ತು ಎಂದು ತಿಳಿಯಲಾಗಿದೆ.

 
 
 
 
 
 
 
 
 
 
 

Leave a Reply