ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ; ಬೀಳ್ಕೋಡುಗೆ ಸಮಾರಂಭ

ಉಡುಪಿ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ , ಉಡುಪಿ ವೃತ್ತ ದ ಅಧೀಕ್ಷಕ ಇಂಜಿನಿಯರ್ ನರಸಿಂಹ ಪಂಡಿತ್ ಸುಮಾರು 32 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ವಿದ್ಯುತ್ ಕಂಪನಿಯಲ್ಲಿ ಸೇವೆ ಸಲ್ಲಿಸಿ ಶನಿವಾರ ಸೇವಾ ನಿವೃತ್ತಿ ಹೊಂದಿದ್ದ ಇವರ ಬೀಳ್ಕೋಡುಗೆ ಸಮಾರಂಭ ನೌಕರ ಸಂಘದ ಸಭಾ ಭವನ ಕುಂಜಿಬೆಟ್ಟು ಉಡುಪಿ ಜರಗಿತು ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಯ ನಿರ್ವಾಹಕ ಇಂಜಿನಿಯರ್ ರಾಕೇಶ್ ಕುಂದಾಪುರ ರವರು ನರಸಿಂಹ ಪಂಡಿತ್ ದಂಪತಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು, ಉಡುಪಿ ವೃತ್ತ ದ ಅಧೀಕ್ಷಕರಾಗಿ ಉತ್ತಮ ಆಡಳಿತಗಾರರು ,ಸಾಹಿತ್ಯ ಪುಸ್ತಕ , ಕವಿತೆ ರಚನೆ ,ಮಾಡಿ ನೌಕರರೊಂದಿಗೆ ಉತ್ತಮ ಬಾಂಧವ್ಯ ,ಮಾರ್ಗ ದರ್ಶಕರಾಗಿ ಆಡಳಿತ ನೆಡೆಸಿಕೊಟ್ಟ ರಾಗಿದ್ದಾರೆ . ವೇದಿಕೆಯಲ್ಲಿ ಮೆಸ್ಕಾಂ ಅಧಿಕಾರಿಗಳಾದ ಪ್ರಶಾಂತ್ ಪುತ್ರನ್ , ಕೆ ಮಾರಪ್ಪ , ಸತೀಶ್ , ರಮೇಶ್ , ದಯಾನಂದ , ಗಣರಾಜ್ ಭಟ್ , ರಾಘವೇಂದ್ರ , ನರಸಿಂಹ ,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯ ನಿರ್ವಾಹಕ ಇಂಜಿನಿಯರ್ ಕೆ ಪ್ರಸನ್ನಕುಮಾರ್ ಸ್ವಾಗತಿಸಿದರು , ನಿರೂಪಣೆ ಗಿರೀಶ್ ಉಡುಪಿ ನಡೆಸಿಕೊಟ್ಟರು. 

Leave a Reply