“ನಾಯಿ ಮತ್ತು ನಾಯಿ ಬಾಲ” ಹಾಗೂ “ತ್ರಿಭಾಷಾ ರಂಗ ನಾಟಕಗಳು” ಪುಸ್ತಕ ಲೋಕಾರ್ಪಣೆ

ಅನಂತ ವೈದಿಕ ಕೇಂದ್ರ, ಉಡುಪಿ ಮತ್ತು ರಂಗನಾಥ ಕಾಂಪೌಂಡು ನಿವಾಸಿಗಳ ನೇತೃತ್ವದಲ್ಲಿ “ಚಲನಚಿತ್ರ ನಿರ್ದೇಶಕ, ನಟ, ರಂಗಕರ್ಮಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನ ಇವರು ಭಾಷಾಂತರಿಸಿದ ಎರಡು ನಾಟಕಗಳ ಒಂದು ಪುಸ್ತಕ “ನಾಯಿ ಮತ್ತು ನಾಯಿ ಬಾಲ” ಹಾಗೂ “ತ್ರಿಭಾಷಾ ರಂಗ ನಾಟಕಗಳು” (ಕನ್ನಡ ಕೊಂಕಣಿ, ತುಳು) ಭಾಷಾ ನಾಟಕಗಳನ್ನು ಒಳಗೊಂಡಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ನೆರೆವೇರಿಸಿದರು.  
ಈ ಸಂದರ್ಭದಲ್ಲಿ ಅನಂತ ವೈದಿಕ ಕೇಂದ್ರದ ನಿರ್ದೇಶಕರಾದ ವೇದಮೂರ್ತಿ ಶ್ರೀ ಚೇಂಪಿ ರಾಮ ಚಂದ್ರ ಭಟ್, ಹಾಸ್ಯ ಭಾಷಣಕಾರಿಣಿ ಶ್ರೀಮತಿ ಸಂಧ್ಯಾ ಶೆಣೈ, ಖ್ಯಾತ ಕವಿ ಮನೋಹರ್ ನಾಯಕ್, ಪ್ರಶಸ್ತಿ ವಿಜೇತ ಲೇಖಕಿ ಡಾl. ಕಾತ್ಯಾಯಿನಿ ಕುಂಜಿಬೆಟ್ಟು, ಆರ್.ಎಸ್.ಬಿ ಸಮಾಜದ ಮುಂದಾಳು ಗೋಕುಲ್ ದಾಸ್ ನಾಯಕ್, ಕುಡಾಳ ದೇಶಸ್ಥ ಸಮಾಜದ ಮುಂದಾಳು ಮಹೇಶ್ ಠಾಕೂರ್, ಖಾರ್ವಿ ಸಮಾಜದ ಮುಂದಾಳು ಕುಂದಾಪುರ ನಾರಾಯಣ ಖಾರ್ವಿ, ದೇಶ ಭಂಡಾರಿ ಸಮಾಜದ ಮುಂದಾಳು ಚಿದಾನಂದನ ಭಂಡಾರಿ ಕಾಗಲ, ರಂಗಕರ್ಮಿ, ದೈವಜ್ಞ ಸಮಾಜದ ಬಾಂಧವರಾದ ರಾಜಗೋಪಾಲ ಶೇಟ್, ವೈಶ್ಯವಾಣಿ ಸಮಾಜದ ಬಾಂಧವರಾದ ವಸಂತ್ ನಾಯಕ್, ಕಲಾವಿದ, ಕೆಥೋಲಿಕ್ ಸಮಾಜ ಬಾಂಧವರಾದ ವಿವಿಟಾ ಡಿಸೋಜಾ,  ಟಿ ರಂಗ ಪೈ ,  ನ್ಯಾಯವಾದಿ ಲಕ್ಷ್ಮಣ್ ಶೆಣೈ , ಶಶಿಭೂಷಣ ಕಿಣಿ, ಹಾಗೂ ಪ್ರಮುಖರು ಉಪಸ್ಥಿತರಿದ್ದರು. 
ಸಭಾ ಕಾರ್ಯಕ್ರಮದ ಬಳಿಕ ಮೂಲ್ಕಿ ರವೀಂದ್ರ ಪ್ರಭು ತಂಡದವರಿಂದ ಸಂಗೀತ ರಸಮಂಜರಿ ಸಂಪನ್ನಗೊಂಡಿತು.   
 
 
 
 
 
 
 
 
 
 
 

Leave a Reply