ಎಂ ಪಿ ಎಂ ಸಿ: ‘ಮಹಿಳಾ ಆರೋಗ್ಯ’ ದ ಕುರಿತು ಕಾರ್ಯಕ್ರಮ

ಮಂಜುನಾಥ್ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಮಹಿಳಾ ದೌರ್ಜನ್ಯ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾದ ‘ಮಹಿಳಾ ಆರೋಗ್ಯ’ ದ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರ್ಗಾನದ ಡಾ.ಶಮ್ಮಾ ಶುಕುರ್,ಕಾಲೇಜು ಪ್ರಾಂಶುಪಾಲರಾದ ಡಾ.ಕಿರಣ್,ಮಹಿಳಾ ದೌರ್ಜನ್ಯ ಸಮಿತಿಯ ಸಂಚಾಲಕರಾದ ಭಾಗ್ಯಲಕ್ಷ್ಮಿ,ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನದ ಮುಖ್ಯಸ್ಥರಾದ ಸುಷ್ಮಾ ರಾವ್ ಮಹಿಳಾ ದೌರ್ಜನ್ಯ ಸಮಿತಿಯ ಸದಸ್ಯರಾದ ಜ್ಯೋತಿ,ಮಹಿಳಾ ದೌರ್ಜನ್ಯ ಸಮಿತಿಯ ಪದಾಧಿಕಾರಿಯಾಗಿರುವ ಮುಕ್ತಿ ವರ್ಧನ ಮತ್ತು ಧನ್ಯಶ್ರೀ ಉಪಸ್ಥಿತರಿದ್ದರು.ಡಾಕ್ಟರ್ ಶಮ್ಮಾ ಶುಕುರ್ ಅವರು ವಿದ್ಯಾರ್ಥಿನಿಯರನ್ನು ಕುರಿತು ಮಾತನಾಡಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳಾದ ಆರೋಗ್ಯ,ಉದ್ಯೋಗ ಲಿಂಗಧಾರತಮ್ಯ,ಅಪೌಷ್ಟಿಕತೆ,ಆತ್ಮಸ್ಥೈರ್ಯ ಆರೋಗ್ಯಯುತ ಸಮಾಜವನ್ನು ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳೆಯರು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಕಂಡುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕಾಲೇಜು ಅಧ್ಯಾಪಕ ವೃಂದ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply