ಎಂ ಜಿ ಎಂ: ತಂತಿವಾದ್ಯಗಳ ಮೇಳ “ತತ” – ತಂತಿ ವಾದ್ಯಗಳ ಮಾಧುರ್ಯ ಕಾರ್ಯಕ್ರಮ

ಡಾ ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಉಡುಪಿ
ಯ ವತಿಯಿಂದ ಎಂ ಜಿ ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹೊಸ ವರುಷದ ಸಂಜೆ (೦೧..೦೧.೨೦೨೩)ತಂತಿವಾದ್ಯಗಳ ಮೇಳ “ತತ” – ತಂತಿ ವಾದ್ಯಗಳ ಮಾಧುರ್ಯ ಕಾರ್ಯಕ್ರಮ ನಡೆಯಿತು.

ಸಂಗೀತಕ್ಕೆ ದೇಶ ಕಾಲಗಳ ಹಂಗಿಲ್ಲ .. ವೆನಿಝುವೆಲಾದ ಜಾನಪದ ತಂತಿ ವಾದ್ಯ ಕ್ವಾತ್ರೂ
ಮೀಟುವುದರ ಮೂಲಕ ತತ ಕ್ಕೆ ನಾಂದಿ ಹಾಡಿದವರು ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಬಿ ಎನ್ ರವರು.

ಮಾನವನ ಬೌದ್ಧಿಕ ವಿಕಾಸಕ್ಕೆ ಸಂಗೀತ ಅವಶ್ಯಕ . ಸಂಗೀತವನ್ನು ಮನೋವಿಹಾರಕ್ಕೂ ಸಾಹಿತ್ಯವನ್ನು ಮನೋವಿಕಾಸಕ್ಕೂ ಬಳಸುತ್ತೇವೆ ,ಇವೆರಡರ ಪಾತ್ರ ಮನುಷ್ಯನ ಜೀವನದಲ್ಲಿ ಬಹಳ ದೊಡ್ಡದು . ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಕೆಲಸ ಮಾಡುತ್ತಿರುವ ಡಾ ಪಳ್ಳತಡ್ಕ ಕೇಶವ ಭಟ್ ಟ್ರಸ್ಟ್ ನ ಪದಾಧಿಕಾರಿಗಳನ್ನು ಅಭಿನಂದಿಸಿದರು .

ಪ್ರಸ್ತಾವನೆಯಲ್ಲಿ ಮಾತನಾಡಿದ ಶಿಕಾರಿಪುರ ಕೃಷ್ಣ ಮೂರ್ತಿ ಯವರು ಡಾ ,ಕೇಶವ ಭಟ್ ರವರ ಸಾಧನೆಗಳು ಹೆಚ್ಚಾಗಿ ವಿದೇಶದಲ್ಲಿ ಜನಮನ್ನಣೆ ಗಳಿಸಿದೆ . ಅವರ ಯೋಚನೆ ಯೋಜನೆಗಳನ್ನು ಟ್ರಸ್ಟ್ ನ ಮೂಲಕ ಜನ ಸಮುಧಾಯಕ್ಕೆ ಮುಟ್ಟಿಸುವ ಕೆಲಸ ಅವರ ಮಕ್ಕಳು ಮಾಡಿಕೊಂಡು ಬರುತ್ತಿದ್ದರೆ , ಬಾಲಪ್ರತಿಭೆಗಳಿಗೆ ಪ್ರೋತಾಹ , ಬಡ ಹೆಣ್ಣು ಮಕ್ಕಳ ಓದಿಗೆ ಸಹಾಯ , ಆರೋಗ್ಯಕರವಾದ ಆಹಾರ ಪದ್ಧತಿ .ಸಂಗೀತ ಬಗ್ಗೆ ಮಾಹಿತಿ , ಸಂಗೀತ ಕಾರ್ಯಕ್ರಮ . ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಈ ಮೂಲಕ ಅವರು ಅಜರಾಮರರು ಎಂದರು .

ಎಂ ಜಿ ಎಂ ಕಾಲೇಜಿನ ಪ್ರಾಂಶುಪಾಲರು ಪ್ರೊ ಲಕ್ಷ್ಮೀನಾರಾಯಣ ಕಾರಂತ್ ರು ಮಾತನಾಡಿ .. ಶಿಕ್ಷಣ ಅನ್ನೋದು ತುಂಬಾ ಕಷ್ಟ , ಹಣ ಸಂಪಾದನೆ ಮಾಡೋದು ಹೇಗೂ ಆಗತ್ತೆ , ಶಿಕ್ಷಣ ಸಂಗೀತ ಇದರಲ್ಲಿ ಪರಿಣತಿ ಹೊಂದೋದು ವಿರಳ , ಇಂತಹ ವಿಶಿಷ್ಟ ಕಾರ್ಯಕ್ರಮ ಉಡುಪಿಯಲ್ಲೇ ಬಹುಶ ಇದು ಮೊದಲ ಸಲ ನಡೀತಿರೋದು ಶ್ಲಾಘನಾರ್ಹ , ನಮ್ಮ ಯುವ ಪೀಳಿಗೆ ನಮ್ಮ ಸಂಸೃತಿ , ಸಾಹಿತ್ಯ ಸಂಗೀತಕಲಿತು ಅದನ್ನು ಉಳಿಸ ಬೇಕು ಅಂತ ತಿಳಿಸಿದರು .

ವೇದಿಕೆಯಲ್ಲಿಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ದೇವಕಿ ಭಟ್ ಹಾಗು ಕಲಾಸ್ಪಂದನದ ನಿರ್ದೇಶಕಿ ವಿದುಷಿ ಪಾವನ ಬಿ ಆಚಾರ್ ಉಪಸ್ಥಿತರಿದ್ದು ಪ್ರೊ. ಪ್ರಮೋದ್ , (ಪ್ರಿನ್ಸಟನ್ ಯೂನಿವರ್ಸಿಟಿ ) ರವರು ಧನ್ಯವಾದ ತಿಳಿಸಿ, ಶಿಲ್ಪಾ ಜೋಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು .

ಸಭಾಕಾರ್ಯಕ್ರಮದ ನಂತರ ವಿನೂತನ ಕಾರ್ಯ ಕ್ರಮ ತತ ನಡೆಯಿತು
ತತ ಅಥವಾ ತಂತಿ ವಾದ್ಯ , ತಂತಿಯನ್ನು ಮೀಟಿ ಸ್ವರ ಹೊಮ್ಮಿಸುವುದು , ತಂತಿವಾದ್ಯಗಳಾದ ವೀಣೆ, ಗಿಟಾರ್, ಸಿತಾರ್, ಮ್ಯಾಂಡೊಲಿನ್, ವಯಲಿನ್ ಜೊತೆಗೆ ಮೃದಂಗ, ರಿದಮ್ ಪ್ಯಾಡ್ ,ತಂಬೂರಿ, ತಾಳ ಗಳ ಮೇಳಗಳೊಂದಿಗೆ ತತ ಕಾರ್ಯಕ್ರಮ ನಡೆದು ಜನಮನವನ್ನು ಸೂರೆಗೊಂಡಿತು.

ವೀಣಾ ವಿನೋದಿನಿ ವಿದುಷಿ ಪಾವನ ಆಚಾರ್ ವೀಣೆಯಲ್ಲಿ , ಶ್ರೀ ಅಚ್ಚುತ್ ಪ್ರಕಾಶ್ ಗಿಟಾರ್ , ಸಾಕ್ಷಿತ್ ವಾರಂಬಳ್ಳಿ ಮ್ಯಾಂಡೊಲಿನ್ ನಲ್ಲಿ , ವಿಜಯಲಕ್ಷ್ಮಿ ಯವರು ಸಿತಾರ್ ನಲ್ಲಿ , ವೈಭವ್ ಪೈ ಯವರು ವೋಯಲಿನ್ ನಲ್ಲಿ , ಮೃದಂಗ ದಲ್ಲಿ ಡಾ ಬಾಲಚಂದ್ರ ಆಚಾರ್, ತಂಬೂರಿಯಲ್ಲಿ ಚಿನ್ಮಯೀ ದೀಕ್ಷಿತ್ , ರಿದಮ್ ಪ್ಯಾಡ್ ನಲ್ಲಿ ಕಾರ್ತಿಕ್ ಭಟ್ ಹಾಗು ತಾಳ ಸಹಕಾರದಲ್ಲಿ ಸಮನ್ವಿ ಮಯ್ಯ ಕಚೇರಿ ನಡೆಸಿಕೊಟ್ಟರು . ಶಿಲ್ಪಾ ಜೋಶಿಯವರು ಈ ವಾದ್ಯಗಳ ಮಹತ್ವವನ್ನು ತಿಳಿಸಿದರು .

 
 
 
 
 
 
 
 
 
 
 

Leave a Reply