ಚಂದನವನದಲ್ಲಿ ಪ್ರಜ್ವಲಿಸುತ್ತಿರುವ ಭರವಸೆಯ ನಟ ಮಂಜುನಾಥ್ ಚೇರ್ಕಾಡಿ

ಈ ಭೂಮಿಯ ಮೇಲೆ ಸಾಧನೆ ಮಾಡಲು ನಮಗೆ ನೂರಾರು ದಾರಿಗಳಿವೆ ಆದರೆ ಕಲೆಯ ಮುಖಾಂತರ ಜೀವನವನ್ನು ರೂಪಿಸಿ ಆದರ ಹಿಂದೆಯೆ ಇದ್ದು ಕಷ್ಟ ನೋವುಗಳನ್ನು ಸಹಿಸುತ್ತ ಕಲಾಮಾತೆಯ ಮಡಿಲಿನಲ್ಲಿ ಸಾಧನೆ ಮಾಡುವಂತಹ ಯೋಗ ಎಲ್ಲರಿಗೂ ಬರೊದಿಲ್ಲ ಬದುಕಿನಲ್ಲಿ ಎಷ್ಟೇ ಕಷ್ಟ ಇದ್ದರೂ ಜೀವನವನ್ನು ಗೆದ್ದೆ ಗೆಲ್ಲುವೇ ಅನ್ನುವ ಚಲವಿದ್ದರೆ ಖಂಡಿತವಾಗಿಯೂ ನಮ್ಮ ಗುರಿ ಸಾಧಿಸಿಯೇ ಸಾಧಿಸುತ್ತಿವಿ ನಾವು ಸಮಾಜದಲ್ಲಿ ಗೌರವ ಪಡೆದು ಉನ್ನತ ಸ್ಥಾನಕ್ಕೆರಲೂ‌ ಸುಮಾರು ವರುಷಗಳ ಪರಿಶ್ರಮ ಇರುತ್ತೆ ಈ ಮಾತಿಗೆ ಸರಿಸಮಾನವಾಗಿ ಚೇರ್ಕಾಡಿಯ ಅದ್ಭುತ ಪ್ರತಿಭೆ ಇಂದು ಕಲಾವಿದನಾಗಿ ಇಡೀ ನಾಡಿನ ಮನಸ್ಸು ಗೆದ್ದಿರೋದು ಚೇರ್ಕಾಡಿಯ ಊರಿಗೆ ಸಂತಸ ತಂದಿದೆ ಹೌದು ಚೇರ್ಕಾಡಿಯ ಯುವ ನಟ, ಅದ್ಭುತ ಕಲೆಗಾರ ಮಂಜುನಾಥ್ ಚೇರ್ಕಾಡಿರವರು ಇದೀಗ ಸಿನಿಮಾರಂಗದ ಬಹುಮುಖ್ಯ ವ್ಯಕ್ತಿ. ಕಷ್ಟದ ಬದುಕಿನಲ್ಲಿ ಚಲಗಾರನಂತೆ ಸಾಧಿಸಿದ ಹಠವಾದಿ. ಇಂದು ಕನ್ನಡ ಹಾಗೂ ಹಲವು ಭಾಷೆಗಳ ಚಿತ್ರಗಳಲ್ಲಿ ನಟನೆ ಮಾಡಿದ ಇವರು ಕನ್ನಡದ ಹೆಸರಾಂತ ನಟನಾಗಿ ಮಿನುಗುತಿರುವವರು.
ತನ್ನ ಚಿಕ್ಕವಯಸ್ಸಿನಲ್ಲೇ ಬಾರ್ ಕ್ಲೀನರ್ ಆಗಿ, ಕಷ್ಟದ ಹಾದಿಯಲ್ಲಿ ಬೆಳೆದು ಬಂದ ಇವರು ಇಂದು ಸಾಧನೆಯ ಶಿಖರವನ್ನು ಏರಿದ ಅದ್ಭುತ ಸಾಧಕ ನಮ್ಮ ಕೃಷ್ಣನಗರಿ ಉಡುಪಿ ಜಿಲ್ಲೆಯ ಚೇರ್ಕಾಡಿಯ ನವರಸ ಪ್ರತಿಭೆ “ಹಳ್ಳಿಹುಡುಗ ಖ್ಯಾತಿ” ಯ ಮಂಜುನಾಥ್ ಚೇರ್ಕಾಡಿ ಇವರು ನರಸಿಂಹ ಹಾಗೂ ಬೇಬಿ ದಂಪತಿಗಳ ಮುದ್ದಿನ ಮಗ ಮಂಜುನಾಥ್ ರವರು ತನ್ನ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು 21ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡು, ತನ್ನ ಚಿಕ್ಕಮ್ಮನಲ್ಲೆ ತಾಯಿಯ ಪ್ರೀತಿ ಕಾಣುತ್ತ ಚಿಕ್ಕಮ್ಮನ ಆಸರೆಯಲ್ಲೆ ಬೆಳೆದರು ತನ್ನ ಬಾಲ್ಯ ಜೀವನವನ್ನು ಕಷ್ಟದ ಬದುಕನ್ನೇ ಅನುಭವಿಸಿ ಇಂದು ಒಬ್ಬ ನಟನಾದರು ಕೂಡ ಕಷ್ಟದಲ್ಲಿ ಬದುಕುತ್ತಿರುವ ಅನೇಕ ಬಡವರಿಗೆ ಸಹಾಯ ಮಾಡುವ ಒಳ್ಳೆಯ ಗುಣ ನಮ್ಮ ಚೇರ್ಕಾಡಿಯವರದು.
ತನ್ನ ಪ್ರಾಥಮಿಕ ಶಿಕ್ಷಣವನ್ನು ತುಂಬಾ ಬಡತನದಲ್ಲೇ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೇತ್ರಿ ಚೇರ್ಕಾಡಿ ಮುಗಿಸಿ ತನ್ನ ವಿದ್ಯಾ ಗುರುಗಳಾದ ನಂದಿನಿ ಮೇಡಂ ಹಾಗು ಸಾಧು ಸಾಧು ಸರ್ ಇವರು ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ಮಾಡಿದವರು ನಂತರ  ಹಠಕ್ಕೆ ಬಿದ್ದು ಕಲಿತು ಪ್ರೌಢ ಶಿಕ್ಷಣವನ್ನು ಶಾರದ ಪ್ರೌಢ ಶಾಲೆ ಮುಂಡ್ಕೀನ್ ಜಡ್ಡು  ಚೇರ್ಕಾಡಿ ಅಲ್ಲಿ ಮುಗಿಸಿದರು ಈ ಸಮಯದಲ್ಲಿ ತುಂಬ ಓದಿನಲ್ಲಿ ಹಿಂದೆ ಇದ್ದ ನನಗೆ ಎಲ್ಲ ಶಿಕ್ಷಕರ ಬೆಂಬಲದ ಜೊತೆಗೇ ಸ್ವಲ್ಪ ಜಾಸ್ತಿ ಬೆಂಬಲವಾಗಿ ನಿಂತವರು ರೇವತಿ ಮೇಡಂ ಇವರ ಬೆಂಬಲದಿಂದ ಎಸೆಸೆಲ್ಸಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ಹುಡುಗ ಆದರೆ ಮಂಜುನಾಥ್ ರವರಲ್ಲಿ ಪ್ರತಿಭೆ ಇದೆ ಎಂದು ಈ ನಾಡಿಗೆ ಪರಿಚಯಿಸಿದವರು  ಟೀಚರ್ ಗೀತಾ ಮೇಡಂ ಅವರು ನಡೆಸಿ ಕೊಟ್ಟ ಬೇಸಿಗೆ ಶಿಬಿರದಲ್ಲಿ ಚಿತ್ರರಂಗ ಹಾಗೂ ನಾಟಕರಂಗದ ಬಗ್ಗೆ ಕಲಿತು ಅಲ್ಲಿ ಇಲ್ಲಿ ಕೆಲಸ ಮಾಡಿ ಕಷ್ಟ ಪಟ್ಟು ದುಡಿದ ಹಣವನ್ನು ಕೂಡಿಟ್ಟು  ಜೀವನ ಸಾಗಿಸುತ್ತ ಬದುಕಿ ಮುಂದೊದಿನ ಸಿನಿಮಾ ಅನ್ನೋ ಲೋಕದಲ್ಲಿ ರಾಜನಾಗಿ ಬದುಕಬೆಕೆನ್ನೋ ಆಸೆ ಛಲ ಇವರಲ್ಲಿತ್ತು.
ಇವರ ಪದವಿಪೂರ್ವ ಶಿಕ್ಷಣವು ಗೌರ್ಮೆಂಟ್ ಪಿ ಯು ಕಾಲೇಜು ಕೊಕ್ಕರ್ಣೆಯಲ್ಲೀ ಪಡೆದು ನಂತರ ಪದವಿ ಯನ್ನ ಸರಕಾರೀ ಫಸ್ಟ್ ಗ್ರೇಡ್ ಕಾಲೇಜ್ ಗರಡಿಮಜಲು ತೆಂಕನೀಡಿಯೂರಲ್ಲಿ bsw ಸೆಕೆಂಡ್ ಇಯರ್ ಓದುತ್ತಿರುವಾಗ ತನ್ನ ತಾಯಿಯ ಅನಾರೋಗ್ಯಕರಣದಿಂದಾಗಿ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೇ ಸೇರುವಂತಯ್ತು
 ಕನ್ನಡದ ಹೆಸರಾಂತ ಪ್ರೋಡಕ್ಷನ್  ಆರೂರು ಜಗದೀಶ್ ರವರ ಅದ್ಭುತ ಕಥಾ ಸಿರಿಯಲ್ ಶುಭವಿವಾಹ ಸಿರಿಯಲ್ ನಲ್ಲೂ ತನ್ನ ಆತ್ಮೀಯ ಮಿತ್ರರಾದ ಆರೂರು ಪ್ರವೀಣ್ ರವರ ಮೂಲಕ ಒಂದು ಅವಕಾಶ ಕೇಳಿ ತನಗೆ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಇಡೀ ಕರುನಾಡು ಮನೆಮಾತಾದ ಕರಾವಳಿಯ ಅದ್ಭುತ ಪ್ರತಿಭೆ ಈ ನಮ್ಮ ಹಳ್ಳಿಹುಡುಗ ಮಂಜುನಾಥ್ ಚೇರ್ಕಾಡಿ ರವರು ನಂತರ *ಅಭಯ್ ಸಿಂಹ ಅವಾರ್ಡ್ ವಿನ್ ಲಿಸ್ಟ್ ನಲ್ಲಿ ಪಡ್ಡಾಯಿ ಯಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದರು,
ಹೀಗೆ ಕವಿ ಶೆಟ್ಟಿ ಪ್ರೊಡಕ್ಷನ್ ಅವರ  ಜಿಲ್ಕಾ ಕನ್ನಡ ಹಿಂದಿ ಮರಾಠಿ ಚಲನಚಿತ್ರದಲ್ಲಿ ನಟಿಸಿ ತವರೂರಾದ ಚೇರ್ಕಾಡಿಗೆ ಹೆಮ್ಮೆ ತಂದು ಕೊಟ್ಟ ಪ್ರತಿಭೆ , ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಯವರ ಅವನೇ ಶ್ರೀಮನ್ನಾರಾಯಣ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ಸಪೋರ್ಟಿಂಗ್  ಕ್ಯಾರೆಕ್ಟರ್ ಮಾಡಿ ತನ್ನ ನಟನೆಯ ಚತುರತೆ ತೋರಿಸಿ ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು  ಚೇರ್ಕಾಡಿ ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲ ಶಾಲಾ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅದರಲ್ಲೂ  ಕಬ್ಬಡ್ಡಿ, ಕ್ರಿಕೆಟ್ ನಲ್ಲಿ ಮಿಂಚಿದ ಪ್ರತಿಭೆ ಇವರ ಕ್ರೀಡಾ ಆಟಕ್ಕೆ ತುಳು ಚಿತ್ರರಂಗದಲ್ಲಿ ನಡೆಸುವಂತಹ ಕೋಸ್ಟಲ್ ವುಡ್ ನ ಪ್ರತಿ ವರ್ಷ ನಡೆಯುವ ಕ್ರಿಕೆಟ್ ಟೂರ್ನಮೆಂಟ್ ಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರಿಂದನು ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ..
ಕನ್ನಡದ ಖ್ಯಾತ ನಟರಾದ ಲೂಸ್ ಮಾದ ಯೋಗೀಶ್ ರವರ ಲಂಕೆ ಸಿನಿಮಾದಲ್ಲೂ ಅಭಿನಯಿಸಿದರೆ ಕೃಷ್ಣಾರೆಡ್ಡಿ ನಿರ್ದೇಶನದ ಬಹುನಿರೀಕ್ಷಿತ ಚಲನಚಿತ್ರ ರೌಡಿ ಬೇಬಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಟನಾಗಿ ಹೊರಹೊಮ್ಮಿದರು.
ನಾವು ಇವರನ್ನು ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ ಒಬ್ಬ ದಾನ ಮಾಡೋ ಕರ್ಣನ ರೀತಿಯಲ್ಲೂ ನೋಡಬಹುದು ಏಕೆಂದರೆ ಚಿಕ್ಕಂದಿನಿಂದಲೂ ತಾನು ದುಡಿದ ಹಣದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಇದ್ದ ಹುಡುಗ “ಆರ್ಯ” ಎಂಬ ದೊಡ್ಡ ಸಂಸ್ಥೆಯನ್ನು ತನ್ನ ತಂಗಿಯ ಜೊತೆ ಗೂಡಿ ಪ್ರಾರಂಭಿಸಿ ಹಲವು ಬಡ ವಿದ್ಯಾರ್ಥಿಗಳಿಗೆ, ಕಷ್ಟ ಕಾಲದಲ್ಲಿರೋ ಹಲವು ಬಡ ಕುಟುಂಬಗಳಿಗೆ ಸಹಾಯ ಮಾಡಿದ ಒಳ್ಳೆಯ ಮನಸು ಚೇರ್ಕಾಡಿಯವರದು. ಜೊತೆಗೇ ಸರಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಬೆಳವಣಿಗೆ ಉದ್ದೇಶ ಇಟ್ಕೊಂಡು ಸರ್ಕಾರಿ ಶಾಲೆಗಳ ಸ್ವಚ್ಛತೆ ಕಾರ್ಯಕ್ರಮವನ್ನು ಮಾಡುತ್ತಾ ಜನರಿಗೆ ಮಾದರಿಯಾಗುತ್ತಿದೆ.
ಪುನೀತ್ ರಾಜಕುಮಾರ್ ಅವರ ಸವಿ ನೆನಪಿಗಾಗಿ ಪ್ರಸಾದ್ ನೇತ್ರಾಲಯ ಸಹಕಾರದಿಂದ ಬೃಹತ್ ನೇತ್ರದಾನ ಶಿಬಿರವನ್ನು ಮಾಡಿ ಯುವಜನತೆಗೆ ಮಾದರಿಯಾದ ಹೆಮ್ಮೆಯ ಸಂಸ್ಥೆ ಆರ್ಯ ಹೀಗೆ ಹಲವಾರು ಕೆಲಸಗಳನ್ನು ತನ್ನ ತಂಡದ ಜೊತೆಗೆ ಮಾಡಿ ಪ್ರಚಾರ ಬಯಸದ ನಮ್ಮ ಹೆಮ್ಮೆಯ ಹುಡುಗ .. ಏಕೆಂದರೆ ತಾನು ದುಡಿದರಲ್ಲಿ ಅರ್ಧಪಾಲು ಬಡವರ ಹೊಟ್ಟೆ ತುಂಬಿಸುತ್ತಿರುವ ಇವರು ಮತ್ತೂ ಇವರ ಸಂಸ್ಥೆಗೆ ನಮ್ಮದೊಂದು ಸಲಾಂ.
ತಾನು ಈ ಚಿತ್ರರಂಗಕ್ಕೆ ಬರಲು ಪಟ್ಟ ಕಷ್ಟವನ್ನು ತನ್ನ ಊರಿನ ಯಾವ ಯುವ ಪ್ರತಿಭೆ ಪಡಬಾರದೆಂದು ಅ ಪ್ರತಿಭೆಗಳಿಗೆ ಅವಕಾಶ ಹಾಗೂ ಸಹಾಯ ನೀಡುತ್ತಾ NCB STUDIO ಅನ್ನುವ ಹೊಸ ಯೂಟ್ಯೂಬ್ ಚಾನೆಲ್ ನನ್ನು ಮತ್ತು NCB melodies face book page  ಪ್ರಾರಂಭಿಸಿ ತನ್ನ ಸುತ್ತ ಮುತ್ತಲಿನ ಊರಿನ  ಪ್ರತಿಭೆಗಳಿಗೆ ಅವಕಾಶ ನೀಡಿ ಹಲವಾರು ಹೊಸ ಕಿರುಚಿತ್ರ ಮಾಡಿ ಬಿಡುಗಡೆಗೊಳಿಸಿದರು ಅವುಗಳಲ್ಲಿ ಏಕತೆಯನ್ನು ಸಾರುವ  “ನಾವೆಲ್ಲರೂ ಭಾರತೀಯರು”* ಅನ್ನೋ ಕಿರುಚಿತ್ರದಲ್ಲಿ ಮುಂಬರುವ ವಿದ್ಯಾರ್ಥಿಗಳಿಗೆ ದೇಶ ಭಕ್ತಿಯ ಅರಿವು ಮೂಡಿಸಿದ ಕಿರುಚಿತ್ರ ಜನರ ಮನದಲ್ಲಿ ಅಚ್ಚಳಿಯಾಗಿ ಉಳಿದಿದೆ… ಮೊನ್ನೆಯಷ್ಟೇ ಬಿಡುಗಡೆಯಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಕ್ತಿ ಪ್ರಧಾನ ಹಾಡು ದೇಶದಾದ್ಯಂತ ಜನ ಮೆಚ್ಚುಗೆ ಪಡೆದಿದೆ.. ಹಾಗೂ ಕೆಡವ್ ಕನ್ನಡ ಹಿಂದಿ ಬರುತ್ತಿರುವ ಬಹು ನಿರೀಕ್ಷಿತ  ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಮುಂಬರುವ ಕನ್ನಡದ ಬಹು ನಿರೀಕ್ಷಿತ ಸಿನಿಮಾ ರಿಷಿ ಚಿತ್ರದಲ್ಲಿ ಬಹುಮುಖ್ಯ ಪಾತ್ರ ದಲ್ಲಿ ಮಿಂಚಲು ರೆಡಿಯಾಗಿದ್ದು ಇನ್ನೇನೂ ಕೆಲವೇ ದಿನಗಳಲ್ಲಿ ಈ ಸಿನಿಮಾ ತೆರೆ ಮೇಲೆ ಮಿಂಚಲು ಸಿದ್ದವಾಗಿದೆ.
ಈ ಯುವಪ್ರತಿಭೆಯನ್ನ ಬೆಳೆಸಿದರೆ ನಮ್ಮ ರಾಜ್ಯಕ್ಕೆ ಒಬ್ಬ ಭರವಸೆಯ ನಟ ಸಿಕ್ಕಂತಾಗುತ್ತದೆ ಹಾಗೂ ತನ್ನ ಊರಿಗೂ ಹೆಮ್ಮೆ ಸಿಕ್ಕೆ ಸಿಗುತ್ತದೆ. ಈಗಾಗಲೆ ಈ ಚಿಕ್ಕ ವಯಸ್ಸಿನಲ್ಲಿ 29 ಭಾರಿ ನಿಸ್ವಾರ್ಥ ಸೇವೆಯಿಂದ ರಕ್ತದಾನ ಕೂಡಾ ಮಾಡಿ ಯುವ ಜನತೆಗೆ ಮಾದರಿ ಯಾಗಿದ್ದರೆ..
ಇವರ ಚಿಕ್ಕ ಪುಟ್ಟ ಸಾಧನೆಯನ್ನು ಗುರುತಿಸಿ 2019ರಲ್ಲಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಕ್ಕಳ ಕಲಾಪ್ರತಿಬೋತ್ಸವ ದಲ್ಲಿ ಸಿರಿಗನ್ನಡ ರಾಷ್ಟ್ರೀಯ ಕಿರುತೆರೆ ನಟ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮತ್ತೂ ಮಾಕ್ಸ್ ಲೈಫ್ ಇನ್ಸೂರೆನ್ಸ್ ಕೊಡಮಾಡುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರಲ್ಲಿ ಇವರನ್ನು 2023 ಮೇ 9 ರಂದು ಕಲಾರತ್ನ ಅವಾರ್ಡ್ ನೀಡಿ ಗೌರವಿಸಲಾಯಿತು.
ಮಂಜುನಾಥ್ ರವರ ಈ ಕಾರ್ಯಕ್ಕೆ ಇನ್ನೂ ಹೆಚ್ಚಿನ ಸಹಾಯ ಸಿಕ್ಕಿ ಕರಾವಳಿಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಲಿ ಅನ್ನುವುದೇ ನಮ್ಮೆಲ್ಲರ ಆಶಯ.
🖋️ ರಕ್ಷಿತ್ ಸರಿಪಲ್ಲ
 
 
 
 
 
 
 
 
 
 
 

Leave a Reply