ಆಜಾದಿಕಾ ಅಮೃತ್ ಮಹೋತ್ಸವ ಅಂಗವಾಗಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಮಾಹೆಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಆಜಾದಿಕಾ ಅಮೃತ್ ಮಹೋತ್ಸವ ಅಂಗವಾಗಿ ನಶೆಯಿಂದ ಮುಕ್ತಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾಲ್ನಡಿಗೆ ಜಾಥಾ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಸರಕಾರಿ ಸಂಯುಕ್ತ ಪ್ರೌಢಶಾಲೆ ಕೋಟ ಪಡುಕರೆ ಇಲ್ಲಿ ಹಮ್ಮಿಕೊಂಡಿತು.

ಈ ಕಾಲ್ನಡಿಗೆ ಜಾಥಾವನ್ನು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಯುತ ಆನಂದ್ ಸಿ ಕುಂದರ್ ರವರು ಹಸಿರು ಪತಾಕೆಯನ್ನು ತೋರಿಸುವುದರ ಮೂಲಕ ಚಾಲನೆಯನ್ನು ನೀಡಿದರು. ಶಾಲೆಯ ಮಕ್ಕಳು ವಿವಿಧ ಧ್ಯೇಯ ವಾಕ್ಯದ ಫಲಕಗಳನ್ನು ಹಿಡಿದು ಜಾಥದಲ್ಲಿ ಭಾಗವಹಿಸಿದರು.

ನಂತರ ಸಭೆಯಲ್ಲಿ ಶ್ರೀ ಆನಂದ್ ಸಿ ಕುಂದರ್ ಮಾತನಾಡಿ ಸ್ವಾತಂತ್ರ್ಯದ ಮಹತ್ವ ಮತ್ತು ನಶೆಯಿಂದ ದೂರವಿರುವಲ್ಲಿ ನಮ್ಮ ಜವಾಬ್ದಾರಿಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ನಿರಂಜನ್ ನಾಯಕ್ ಮಾತನಾಡಿ ನಶೆಯ ವಿಚಾರದಲ್ಲಿ ಮಕ್ಕಳು ಈ ವಿಚಾರದಲ್ಲಿ ಜಾಗೃತರಾಗುವುದು ಅತ್ಯಗತ್ಯ ಇಲ್ಲವಾದಲ್ಲಿ ಮುಂದೆ ಸಮಸ್ಯೆ ಕಟ್ಟಿಟ್ಟ ಬುತ್ತಿ ,ಈ ನಿಟ್ಟಿನಲ್ಲಿ ಮಣಿಪಾಲ ಯೂನಿವರ್ಸಿಟಿಯ ಕೆಲಸ ಶ್ಲಾಘನಾರ್ಹ ಎಂದರು ,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ.ಗೀತಾ ಮಯ್ಯ ಸ್ವಾಗತಿಸಿ ನಶಾ ಮುಕ್ತ್ ಚಳುವಳಿಯ ವಿವರ ನೀಡಿದರು.

ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು , ಆಪ್ತ ಸಮಾಲೋಚಕರು ಹಾಗೂ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರುಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಪ್ರಾಧ್ಯಾಪಕ ಡಾ. ಬಿನಿಲ್ ಹಾಗೂ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಧ್ಯಾಪಕ ರೋಷನ್ ಜತನ್, ಕೋಟ ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿ ಪೂರ್ಣಿಮಾ ಅಧಿಕಾರಿ, ಉಪಸ್ಥಿತರಿದ್ದರು. ರಾಯನ್ ಮಥಾಯಾಸ್ ಕಾರ್ಯಕ್ರಮ ನಿರೂಪಿದರು.

 
 
 
 
 
 
 
 
 
 
 

Leave a Reply