ಇಳೆಗೆ ಬಂದ ಮಳೆ  ಮಲ್ಲಿಕಾ ಶ್ರೀಶ ಬಲ್ಲಾಳ್

ವರುಷದ ಮೊದಲ ಮಳೆ
ಮನಕೆ ಮೂಡಿಸಿತು ಹರುಷದ ಹೊಳೆ
ಬಿಸಿಲ ಬೇಗೆಗೆ ಬಳಲಿ
ಬೆಂಡಾಗಿದ್ದ ಇಳೆ
ನಳ ನಳಿಸುತಿಹಳು
ಕಳೆಕಳೆಯಾಗಿ.ಸೊಗಸಾಗಿ ಅರಳಿ ನಿಂತಿವೆ ವಸುಂಧರೆಯ ತರುಲತೆಗಳು
ತಂಪಾದ ಒಡಲಿನಿಂದ ಸಂತಸದಿ ಕುಣಿದಾಡುತಿವೆ ಮೃಗ ಖಗಗಳು.

ಮಳೆ ಬಂದು ನಿಂತ ಮೇಲೆ…
ಸ್ವಾರ್ಥಿ ಮನುಜನೋ ತನ್ನ ಆಧುನಿಕತೆ ಎಂಬ ಅಹಂಕಾರದಿಂದ ಇಡೀ ಜಗತ್ತನ್ನು ಕಾಂಕ್ರಿಟೀಕರಣಗೊಳಿಸಿ ಮಳೆಯ ನೀರನ್ನು ಇಳೆಯ ಆಳಕ್ಕೆ ಇಳಿಯದಂತೆ ಮಾಡಿ ತನ್ನ ಸ್ವಯಂಕೃತ ಅಪರಾಧಕ್ಕೆ ಪ್ರತಿಫಲವಾಗಿ ಬರಗಾಲ ಎಂಬ ಘೋರ ಶಿಕ್ಷೆ ಯನ್ನು  ಪಡೆಯುತ್ತಿದ್ದಾನೆ…- ಮಲ್ಲಿಕಾ ಶ್ರೀಶ ಬಲ್ಲಾಳ್

 
 
 
 
 
 
 
 
 
 
 

Leave a Reply