ಮಾಹೆ : ‘ಸಾಮಾಜಿಕ ಪರಿವರ್ತನೆಯಲ್ಲಿ ಯುವಸಮುದಾಯ’ ಕುರಿತ 4ನೆಯ ರಾಷ್ಟ್ರೀಯ ಸಮಾವೇಶ

ಮಾಹೆ, ಮಣಿಪಾಲ್‌ ಆವರಣದಲ್ಲಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಆಯೋಜಿಸಿದ ‘ಸಾಮಾಜಿಕ ಪರಿವರ್ತನೆಯಲ್ಲಿ ಯುವ ಸಮುದಾಯ- ಮಾಹೆಯ 4 ನೆಯ ರಾಷ್ಟ್ರೀಯ ಸಮಾವೇಶ’ ವು ಸೆಪ್ಟೆಂಬರ್‌ 17, 2023 ರಂದು ಸಂಪನ್ನಗೊಂಡಿತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕ್ರಿಯಾಶೀಲ ಯುವನೇತಾರರು, ಪರಿವರ್ತನದ ಹರಿಕಾರರು, ಸಾಮಾಜಿಕ ಬದಲಾವಣೆಯ ನಿರ್ಮಾರ್ತೃಗಳು ಹೀಗೆ ಸುಮಾರು 600 ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ‘ಯುವ ಸಮುದಾಯವು ಜಾಗತಿಕ ಪ್ರಭಾವ, ಸುಸ್ಥಿರ ಅಭಿವೃದ್ಧಿಯ ಗುರಿ (SDG) ಯ ವೇಗವಾಹಕ’ ಎಂಬುದು ಸಮಾವೇಶದ ಪ್ರಧಾನ ವಿಷಯವಾಗಿದ್ದು ಇದು G20ಯನ್ನು ಪ್ರತಿನಿಧಿಸುವ ಯೂತ್‌ 20 (Y20 ) ಗೆ ಸಂಬಂಧಿಸಿದ ಕಾರ್ಯಕ್ರಮವಾಗಿದೆ.

ಮಾಹೆ ಟ್ರಸ್ಟ್‌ನ ಅಧ್ಯಕ್ಷ ಮತ್ತು ಮಣಿಪಾಲ್‌ ಎಜುಕೇಶನ್‌ ಮತ್ತು ಮೆಡಿಕಲ್‌ ಗ್ರೂಪ್‌ನ ಅಧ್ಯಕ್ಷ ಡಾ. ರಂಜನ್‌ ಆರ್‌. ಪೈ ಸಮಾವೇಶವನ್ನು ಉದ್ಘಾಟಿಸಿದ್ದು, ಮಾಜಿ ಕೇಂದ್ರ ಸಚಿವ ಸುರೇಶ್‌ ಪ್ರಭು ಮುಖ್ಯ ಅತಿಥಿಗಳಾಗಿದ್ದರು. ಸುರೇಶ್‌ ಪ್ರಭು ಅವರು ಸಮಾವೇಶದ ಪ್ರಾಮುಖ್ಯದ ಕುರಿತು ಒತ್ತಿ ಹೇಳುತ್ತ, ‘ಕೆಳಮಟ್ಟದಿಂದಲೇ ಆರ್ಥಿಕ ಕೊಡುಗೆಯನ್ನು ಉತ್ತೇಜಿಸುವುದು ಅತೀ ಅಗತ್ಯವಾಗಿದೆ.ಉದಯೋನ್ಮುಖ ಉದ್ಯಮಶೀಲರು ಎರಡು-ಮೂರು ನಗರಗಳಲ್ಲಿ ಅವಕಾಶಗಳನ್ನು ವಿಸ್ತರಿಸುವ ಪ್ರಯತ್ನ ಮಾಡಬೇಕು, ಆ ಮೂಲಕ ಮಣಿಪಾಲದ ಬೋಳುಗುಡ್ಡದಲ್ಲಿ ವಿಶ್ವಪ್ರಸಿದ್ಧ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ಡಾ ಟಿ ಎಂ ಎ ಪೈ ಯವರ ಆದರ್ಶವನ್ನು ಅನುಸರಿಸಬೇಕು’ ಎಂದರು.

ಪ್ರವಾಹ್‌ ಮತ್ತು ಕಮ್ಯುನಿಟ್- ದ ಯೂತ್‌ ಕಲೆಕ್ಟಿವ್‌ ಇದರ ಆಶ್ರಫ್‌ ಪಟೇಲ್‌ ಮುಖ್ಯ ಭಾಷಣವನ್ನು ಮಾಡಿದರು. ಮಿಟ್ಟಿ ಕೆಫೆಯ ಅಲಿನಾ ಅಲಮ್‌, ಚೈಲ್ಡ್‌ ರೈಟ್ಸ್‌ ಆಂಡ್‌ ಯೂ [CRY) ನ ಅನುಪಮಾ ಮುಹುರಿ ಅವರು ಸಂವಾದದಲ್ಲಿ ಭಾಗವಹಿಸಿದ್ದು ಅವರ ಮಾತುಗಳು ಸಮಾವೇಶದಲ್ಲಿ ಪಾಲ್ಗೊಂಡವರನ್ನು ವಿಶೇಷವಾಗಿ ಪ್ರಭಾವಿಸಿದವು.

‘ಸಾಮಾಜಿ ಪರಿವರ್ತನೆ’ಯ ಕುರಿತ 4 ನೆಯ ರಾಷ್ಟ್ರೀಯ ಸಮಾವೇಶವು ಚಿಂತನೆಯನ್ನು ಉತ್ತೇಜಿಸುವ ಸಂವಾದಗಳೊಂದಿಗೆ, ಒಳನೋಟಗಳುಳ್ಳ ಪ್ರಸ್ತುತಿಗಳೊಂದಿಗೆ, ಯುವ ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಸಾಮಾಜಿಕ ಪರಿವರ್ತನೆಯ ವಿಷಯಗಳ ಕುರಿತ ಸಂವಾದ ಕಲಾಪಗಳೊಂದಿಗೆ ಕ್ರಿಯಾಶೀಲ ವೇದಿಕೆಯನ್ನು ಒದಗಿಸಿತು. ಸಮಾವೇಶದದಲ್ಲಿ ಭಾಗಿಗಳಾದವರು ತಮ್ಮ ಅನುಭವ, ಕಲ್ಪನೆ, ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಕುರಿತ ನವೀನ ಪರಿಹಾರಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಕೂಡ ಇದು ಒದಗಿಸಿತು.

ಮಾಹೆಯ ವೈಸ್‌ ಛಾನ್ಸಲರ್‌ ಎಂ. ಡಿ. ವೆಂಕಟೇಶ್‌ ಅವರು ತಮ್ಮ ಸ್ವಾಗತ ಭಾಷಣದಲ್ಲಿ,ಸಮಾವೇಶದ ಸ್ಥೂಲ ರೂಪುರೇಷೆಯನ್ನು ನೀಡಿದರು. ಮಾಹೆಯ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದು,, ಸಾಮಾಜಿಕ ಪರಿವರ್ತನೆಯನ್ನು ಸಾಧ್ಯವಾಗಿಸುವಲ್ಲಿ ಯುವ ಜನತೆಯ ಪಾತ್ರದ ಕುರಿತು ಮೌಲಿಕವಾದ ಒಳನೋಟಗಳನ್ನು ನೀಡಿದರು. ಸಮಾವೇಶದ ಆಯೋಜನ ಕಾರ್ಯದರ್ಶಿ ಡಾ. ಪ್ರವೀಣ್‌ ಕುಮಾರ್‌ ಧನ್ಯವಾದ ಸಮರ್ಪಿಸಿದರು. ಸಮಾವೇಶದ ಸಂಚಾಲಕರಾದ ಡಾ. ಅನೂಪ್‌ ನಹಾ, ಸಂಯೋಜಕರಾದ ಅಭಿಷೇಕ್‌ ಚತುರ್ವೇದಿ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಪಲ್ಲವಿ ಕಾಮತ್‌ ಮತ್ತು ನವೀನ್‌ ಉಪಸ್ಥಿತರಿದ್ದರು.

 

 

 

 

 

 
 
 
 
 
 
 
 
 
 
 

Leave a Reply