ಶಂಕರಾಚಾರ್ಯ ಪುತ್ಥಳಿ ಸ್ಥಾಪನೆ~ ಪುತ್ತಿಗೆಶ್ರೀ ಸಂತಸ

ಸೆ.21: ಮಧ್ಯಪ್ರದೇಶದ ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಜಗದ್ಗುರು ಶ್ರೀ ಶಂಕರಾಚಾರ್ಯರ ಪುತ್ಥಳಿ ಸ್ಥಾಪಿಸಿರುವುದನ್ನು ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸ್ವಾಗತಿಸಿ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತೀಯ ಆಧ್ಯಾತ್ಮ ಲೋಕಕ್ಕೆ ಆಚಾರ್ಯ ಶಂಕರರ ಕೊಡುಗೆ ಮಹತ್ತರವಾದುದು.
ಅದ್ವೈತ ತತ್ವ ಪ್ರತಿಪಾದಿಸಿ, ವೈದಿಕ ಧರ್ಮದ ಪುನರುತ್ಥಾನಗೈದ ಮಹಾನುಭಾವರ ಮಹತ್ಕಾರ್ಯವನ್ನು ಅಜರಾಮರಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಮಧ್ಯಪ್ರದೇಶ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ. ತಮಗೂ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದು, ಚಾತುರ್ಮಾಸ್ಯದ ಕಾರಣದಿಂದಾಗಿ ಭಾಗವಹಿಸುವುದು ಅಸಾಧ್ಯವಾಯಿತು ಎಂದು ಶ್ರೀಗಳು ಅಭಿನಂದನ ಸಂದೇಶದಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply