Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಮಹಾಭಾರತ ನೈತಿಕ ಮೌಲ್ಯಗಳ ಗಣಿ- ಡಾ.ಮಧುಸೂದನ್ ಭಟ್

ಸಾರ್ವಕಾಲಿಕವಾದ ನೈತಿಕ ಮೌಲ್ಯಗಳು ಮಹಾಭಾರತದ ಉದ್ದಗಲಕ್ಕೂ ವ್ಯಾಪಿಸಿವೆ. ಒಂದು ಯಜ್ಞಕಾರ್ಯದಲ್ಲಿ ಅನಿವಾರ್ಯದ ಜ್ಞಾನ ಯಜ್ಞ, ಅನ್ನ ಯಜ್ಞಗಳ ಉಲ್ಲೇಖ, ಅತಿಥಿ ಅಭ್ಯಾಗತರ ಸತ್ಕಾರ ಕ್ರಮ, ಜ್ಞಾನಿಗಳ ವಿಷಯದಲ್ಲಿ ಕೃಷ್ಣನಿಗಿರುವ ಗೌರವ, ಒಬ್ಬರ ಸಂಪತ್ತನ್ನು ಕಂಡು ಮತ್ತೊಬ್ಬರ ಮಾತ್ಸರ್ಯ, ಮಾತ್ಸರ್ಯದ ಪರಿಣಾಮ, ಅಧರ್ಮ ಕಾರ್ಯ ಎಸಗಿದರೆ ಯಾವರೀತಿಯ ಅಸಹಾಯಕತೆಗೆ ಒಳಗಾಗುತ್ತೇವೆ ಅದರಿಂದ ನುಸುಳಿಕೊಂಡು ಪಾರಾಗಲು ಪಡಬೇಕಾದ ಕಷ್ಟ ಬವಣೆಗಳು ಎಂತಹ ಕಷ್ಟ ಎದುರಾದರೂ ಭಗವದ್ ಅನುಗ್ರಹದಿಂದ ಪಾರಾಗಬಹುದಾದ ಕತೆಗಳನ್ನು ಸಾಂದರ್ಭಿಕವಾಗಿ ಉಲ್ಲೇಖಿಸುತ್ತಾ ಭಾರತದಲ್ಲಿ ಪ್ರತಿಪಾದಿತವಾದ ನೈತಿಕ ಮೌಲ್ಯಗಳ ಅನುಷ್ಠಾನದಿಂದ ಸುಸಂಸ್ಕೃತ ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ಉಡುಪಿಯ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ವಿದ್ವಾನ್ ಡಾ.ಮಧುಸೂದನ್ ಭಟ್ ವಿವರಿಸಿದರು.
ಅವರು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಿರಂತರ ಜ್ಞಾನಯಜ್ಞ ‘ಮಹಾಭಾರತ ನೀತಿಗಳ ಸಮಕಾಲೀನ ಚಿಂತನೆ’ ವಿಷಯದಲ್ಲಿ ಎಂಟು ದಿನಗಳ ಕಾಲ ಪ್ರವಚನ ನೀಡುತ್ತಾ ಈ ವಿಚಾರಗಳನ್ನು ತಿಳಿಸಿದರು.
ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಪ್ರವಚನಕಾರರನ್ನು ಗೌರವಿಸಿದರು. ಶ್ರೀ ಕೃಷ್ಣಾಪುರ ಮಠದ ಆಸ್ಥಾನ ವಿದ್ವಾನ್ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!