ಸಮಾಜ ಸೇವಾ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆ

ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಉಡುಪಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘ ಉಡುಪಿ ಜಿಲ್ಲೆ, ಲಯನ್ಸ್ ಜಿಲ್ಲೆ 317ಸಿ, ಲಿಯೋ ಮತ್ತು ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ, ಆಶಾ ನಿಲಯ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ಇವರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಪ್ರಾದೇಶಿಕ ಪರಿಷತ್ತಿನ ವಲಯಾಧ್ಯಕ್ಷರು ರೆ. ಐವನ್ ಡಿ ಸೋನ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಶುಭ ಹಾರೈಸಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ರತ್ನಾ ಅವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಲಯನ್ ವಿಶ್ವನಾಥ್ ಶೆಟ್ಟಿ ಜಿಲ್ಲಾ ಗವರ್ನರ್ ಲಯನ್ಸ್ ಜಿಲ್ಲೆ 317ಸಿ, ಶ್ರೀ ಪ್ರವೀಣ್ ನಾಯಕ್ ಸಹಕಾರಿ ಸಂಘಗಳ ಉಪನಿರ್ದೇಶಕರು, ಶ್ರೀ ಲಯನ್ ಹೃಷಿಕೇಶ್ ಹೆಗ್ಡೆ ಜೋನಲ್ ಚೇರ್ ಮ್ಯಾನ್.
ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಪ್ರದಾನ ವ್ಯವಸ್ಥಾಪಕರು, ಬಡಗುಬೆಟ್ಟು ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಲಿ. ಉಡುಪಿ, ಶ್ರೀ ಸ್ಟಿಫನ್ ವಿ ಕರ್ಕೇಡ ಕಾರ್ಯದರ್ಶಿ, ಆಶಾ ನಿಲಯ ಶ್ರೇಯೋಭಿವೃದ್ಧಿ ಸಮಿತಿ, ಉಡುಪಿ, ರೆವೆ ಕಿಶೋರ್ ಸಭಾಪಾಲಕರು, ಸಿ. ಎಸ್. ಐ ಜುಬಿಲಿ ದೇವಾಲಯ, ಉಡುಪಿ,
ಶ್ರೀ ಲಯನ್ ಮನೋಹರ್ ಶೆಟ್ಟಿ ತೋನ್ಸ್ ಅಧ್ಯಕ್ಷರು, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ, ಶ್ರೀಮತಿ ಆಗ್ನೇಸ್ ಕುಂದರ್ ಗೌರವಾಧ್ಯಕ್ಷರು, ಡಾ. ಕಾಂತಿ ಹರೀಶ್ ರಾಜ್ಯಾದ್ಯಕ್ಷರು, ಕ.ರಾ.ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘ ರಿ. ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಎ. ಲಕ್ಷ್ಮಿ ಬಾಯಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಶ್ರೀ ದಿನಕರ್ ಶೆಟ್ಟಿ, ಶ್ರೀಮತಿ ಲಕ್ಷ್ಮೀ ಬಾಯಿ, ಶ್ರೀಮತಿ ಹೆಲೆನ್ ಸಾಲ್ಯಾನ್ ಇವರನ್ನು ಲಯನ್ಸ್ ವತಿಯಿಂದ ಗೌರವಿಸಲಾಯಿತು. ವಿಶೇಷ ಶಾಲೆಗಳಲ್ಲಿ 15ವರ್ಷ ಮೇಲ್ಪಟ್ಟು ಸೇವೆ ಮಾಡಿದ ಸುಮಾರು 12 ಸಂಸ್ಥೆಗಳಲ್ಲಿ ಓರ್ವರಂತೆ 12 ಮಂದಿ ಶಿಕ್ಷಕರಿಗೂ  ಗೌರವ ಸಮರ್ಪಿಸಲಾಯಿತು. ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 5ನೇ ಸ್ಥಾನ ಗಳಿಸಿದ ಆಸರೆ ವಿಶೇಷ ಶಾಲಾ ವಿದ್ಯಾರ್ಥಿ ಅರ್ಚನಾ ಇವರನ್ನು ಗೌರವಿಸಲಾಯಿತು.
ಲಯನ್ಸ್ ಇಂದ್ರಾಳಿ ಜಯಕರ್ ಶೆಟ್ಟಿ ಇವರ ಸೇವಾ ಕಾರ್ಯವನ್ನು ಗುರುತಿಸಿ ಜಿಲ್ಲಾ ಶಿಕ್ಷಕರ ಸಂಘದ ವತಿಯಿಂದ ಗೌರವಿಸಲಾಯಿತು. ಉಡುಪಿ ಜಿಲ್ಲಾ ವಿಶೇಷ ಶಾಲಾ ಮುಖ್ಯೋ ಪಾಧ್ಯಾಯರು, ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಶಾ ನಿಲಯ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಶಶಿಕಲಾ ಕೋಟ್ಯಾನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಡಾ. ಕಾಂತಿ ಹರೀಶ್ ವಂದಿಸಿ, ಶ್ರೀ ರವೀಂದ್ರ ಎಚ್ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply