ಹಿರಿಯ ನಾಗರೀಕರಿಗೆ ‘ಆಧಾರ್ ಕಾರ್ಡ್’ ತೋರಿಸಿದರೆ ‘KSRTC ಯಲ್ಲಿ ಶೇ.25ರಷ್ಟು ರಿಯಾಯಿತಿ

ಬೆಂಗಳೂರು : ಇದುವರೆಗೆ ಹಿರಿಯ ನಾಗರೀಕರಿಗೆ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣಿಸುವಾಗ ರಿಯಾಯಿತಿ ಪಡೆಯೋದಕ್ಕೆ ಹಿರಿಯ ನಾಗರೀಕರ ಗುರುತಿನ ಚೀಟಿ ತೋರಿಸಬೇಕಾಗಿತ್ತು.

ಆದರೆ ಇದೀಗ ಹಿರಿಯ ನಾಗರೀಕರು ಆಧಾರ್ ಕಾರ್ಡ್ ತೋರಿಸಿಯೂ ಪ್ರಯಾಣಿಸುವಾಗ ಶೇ.25ರ ರಿಯಾಯಿತಿಯನ್ನು ಪಡೆಯ ಬಹುದಾಗಿದೆ.

ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ಯಾವುದೇ ಅಧಿಕೃತ ಗುರಿತಿನ ಚೀಟಿ ತೋರಿಸಿ ಹಿರಿಯ ನಾಗರೀಕರು ಶೇ.25ರಷ್ಟು ರಿಯಾಯಿತಿ ದರದಲ್ಲಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸ ಬಹುದಾಗಿ ಎಂದು ತಿಳಿಸಿದೆ.

ಅಂದಹಾಗೇ ಈ ಮೊದಲು 60 ವರ್ಷ ಮೇಲ್ಪಟ್ಟ ವರು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸು ವಾಗ ಹಿರಿಯ ನಾಗರೀಕರ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿತ್ತು.

ಕೆಲವು ಸಂದರ್ಭದಲ್ಲಿ ಈ ಗುರುತಿನ ಚೀಟಿ ತಗೊಂಡು ಹೋಗದೇ ಇದ್ದಾಗ, ಹಿರಿಯ ನಾಗರೀಕರು ಬೇರೆ ಅಧಿಕೃತ ಗುರಿತಿನ ಚೀಟಿ ತೋರಿಸಿದ್ರೂ ರಿಯಾಯಿತಿಯಿಂದ ಸಮಸ್ಯೆ ಆಗುತ್ತಿತ್ತು.

ಈ ಹಿನ್ನಲೆಯಲ್ಲಿ, ಇದೀಗ ಅಧಿಕೃತ ಬೇರೆ ಯಾವುದೇ ಗುರುತಿನ ಚೀಟಿ ತೋರಿಸಿ ರಿಯಾಯಿತಿ ಪಡೆಯೋದಕ್ಕೆ ಸಾರಿಗೆ ಸಂಸ್ಥೆ ಅವಕಾಶ ನೀಡಿದೆ.

ಈ ಹಿನ್ನಲೆಯಲ್ಲಿ ಇನ್ಮುಂದೆ ಹಿರಿಯ ನಾಗರೀಕರು, ತಮ್ಮ ಗುರುತಿನ ಚೀಟಿಯನ್ನು ತಗೊಂಡು ಹೋಗದೇ ಇದ್ದಾಗ, ಪಾಸ್ ಪೋರ್ಟ್, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗುರುತಿನ ಚೀಟಿ, ವಾಸಸ್ಥಳ ಹಾಗೂ ಹುಟ್ಟಿದ ದಿನಾಂಕವಿರುವಂತ ಗುರುತಿನ ಚೀಟಿ, ನಿಗಮದಿಂದ ವಿತರಿಸಿರುವಂತ ಗುರುತಿನ ಚೀಟಿಯನ್ನು ತೋರಿಸಿ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.

 
 
 
 
 
 
 
 
 
 
 

Leave a Reply