ಸತ್ಕಾರ್ಯಗಳಿಗೆ ಯಾವತ್ತೂ ಮನ್ನಣೆ ಸಿಗುತ್ತದೆ. – ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸಾಮೀಜಿ

‘ಸಾರ್ವಜನಿಕ ಬಾವಿ ನಿರ್ಮಿಸುವುದು, ಸಾಲು ಮರಗಳನ್ನು ನೆಡುವುದು, ವಿಶ್ರಾಂತಿ ಅನುಕೂಲಗಳನ್ನು ಒದಗಿಸುವುದು ಇವೆಲ್ಲವೂ ಬಹು ಹಿಂದಿನಿoದಲೂ ನಡೆದು ಬಂದ ಭಾರತೀಯ ಪರಂಪರೆ. ಇದರ ಮುಂದುವರಿದ ಭಾಗವಾಗಿ ಇಂದು
ಶ್ರೀ ಕೃಷ್ಣನ ಆರಾಧನೆ ಮಾಡಲು ಭಾವೀ ಸಮೀರ ವಾದಿರಾಜ ತೀರ್ಥರು, ಪುರಂದರ ದಾಸರು, ಕನಕದಾಸರು ಮುಂತಾದ ದಾಸವರೇಣ್ಯರು ನಡೆದಾಡಿದ ಪರಮ ಪವಿತ್ರವಾದ ಉಡುಪಿಯ ರಥಬೀದಿಯಲ್ಲಿ ಸಾರ್ವಜನಿಕರ
ಉಪಯೋಗಕ್ಕಾಗಿ ಇನ್ನರ್ ವ್ಹೀಲ್ ಸಂಸ್ಥೆಯವರು ಸಿಮೆಂಟ್ ಬೆಂಚುಗಳನ್ನು ಅಳವಡಿಸಿ ಶ್ರೀ ಕೃಷ್ಣನ ಆರಾಧನೆ ಮಾಡಿದ್ದಾರೆ. ಇದು ಶ್ರೀ ಕೃಷ್ಣನಿಗೆ ಪ್ರಿಯವಾದ ಸೇವೆ. ಇನ್ನರ್ ವ್ಹೀಲ್ ಸಂಸ್ಥೆ ತನ್ನ ಹೆಸರಿಗನುಣುವಾಗಿ ಗುಪ್ತವಾಗಿ
ಇಂತಹಾ ಕಾರ್ಯಕ್ರಮಗಳನ್ನು ನಡೆಸಿದರೂ ಬಹಿರಂಗದಲ್ಲಿ ಅಂತಹ ಸತ್ಕಾರ್ಯಗಳಿಗೆ ಸಾರ್ವತಿಕ ಮನ್ನಣೆ ಸಿಗುತ್ತದೆ. ಇಂತಹಾ ಜನೋಪಯೋಗಿ ಕಾರ್ಯಗಳು ಇನ್ನರ್ ವ್ಹೀಲ್ ಸಂಸ್ಥೆಯಿoದ ಸಾಕಷ್ಟು ಹರಿದು ಬರಲಿ’ ಎಂದು ಉಡುಪಿ ಪರ್ಯಾರ್ಯ ಶ್ರೀ ಕೃಷ್ಣಾಪುರ ಮಠ, ಶ್ರೀ ಕೃಷ್ಣ ಮಠದ ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀಪಾದಂಗಳವರು ಇಂದಿಲ್ಲಿ ಹೇಳೀದರು. ಪೂಜ್ಯರು ಉಡುಪಿ ರಥ ಬೀದಿಯಲ್ಲಿಉಡುಪಿಯ ಇನ್ನರ್ ವ್ಹೀಲ್ ಸಂಸ್ಥೆಯವರು ಒದಗಿಸಿದ ೧೦ ಸಿಮೆಂಟ್ ಬೆಂಚುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿ ಇನ್ನರ್ ವ್ಹೀಲ್ ಜಿಲ್ಲೆ ೩೧೮ರ ಚೇರ್‌ಮನ್ ಶ್ರೀಮತಿ ಪುಷ್ಪಾ ಗುರುರಾಜ್ ಇನ್ನರ್ ವ್ಹೀಲ್ ಸಂಘಟನೆಯ ಸೇವ ಪರಂಪರೆಯನ್ನು ವಿವರಿಸಿ ಶುಭ ಹಾರೈಸಿದರು. ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶುಭಾ ಎಸ್ ಬಾಸ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು,
ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಾಘವೇಂದ್ರ ವಂದಿಸಿದರು.

 
 
 
 
 
 
 
 
 
 
 

Leave a Reply