Janardhan Kodavoor/ Team KaravaliXpress
24.6 C
Udupi
Monday, November 28, 2022
Sathyanatha Stores Brahmavara

‘ಶ್ರೀರುಗ್ಮಿಣೀಶವಿಜಯ’ ಮಹಾಕಾವ್ಯ ಆಧಾರಿತ 19 ದಿನಗಳ ಹರಿಕಥಾ ಕಾರ್ಯಕ್ರಮದ ಸಮಾರೋಪ ಸಮಾರಂಭ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಶ್ರೀ ಹಂಡೆದಾಸ ಪ್ರತಿಷ್ಠಾನ(ರಿ) ಕಾರ್ಕಳ ಇವರ ವತಿಯಿಂದ,ಶ್ರೀವಾದಿರಾಜ ವಿರಚಿತ ‘ಶ್ರೀರುಗ್ಮಿಣೀಶವಿಜಯ’ ಮಹಾಕಾವ್ಯ ಆಧಾರಿತ 19 ದಿನಗಳ ಹರಿಕಥಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ರೋಚಕಥೆಯೊಂದಿಗೆ,ಶಾಸ್ತ್ರದ ಮೂಲಕ ಭಗವಂತನ ವರ್ಣನೆ ಮತ್ತು ಸಮಾಜದ ಉದ್ಧಾರಕ್ಕೆ ಕಾರಣವಾಗಿರುವ ಶ್ರೀವಾದಿರಾಜ ಗುರುಸಾರ್ವಭೌಮರು ರಚಿಸಿರುವ ‘ಶ್ರೀರುಗ್ಮಿಣೀಶ ವಿಜಯ’ ದ ಹರಿಕಥಾ ಶ್ರವಣದಿಂದ ಎಲ್ಲರ ದುಃಖ ಪರಿಹಾರವಾಗಿ,ಭಗವಂತನ ಅನುಗ್ರಹವಾಗಲಿ ಎಂದು ಆಶೀರ್ವಚಿಸಿದರು.ಮುಖ್ಯ ಅತಿಥಿಗಳಾಗಿ ಹಂಡೆದಾಸ ಪ್ರತಿಷ್ಠಾನದ ಸಲಹೆಗಾರರಾದ ಪ್ರೊ.ಎಂ.ಎಲ್.ಸಾಮಗರು,ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ,ಹಂಡೆದಾಸ ಪ್ರತಿಷ್ಠಾನದ ಅಧ್ಯಕ್ಷೆ ರುಕ್ಮಿಣಿ ಹಂಡೆ,ಉಪಾಧ್ಯಕ್ಷರಾದ ವಿದ್ವಾನ್ ವೇದವ್ಯಾಸ ಐತಾಳ್ ಭಾಗವಹಿಸಿದ್ದರು.ಪ್ರತಿಷ್ಠಾನದ ರಾಮಚಂದ್ರ ಉಪಾಧ್ಯಾಯರು ಕಾರ್ಯಕ್ರಮ ನಿರ್ವಹಿಸಿದರು.ವಿದ್ವಾನ್ ರಾಘವೇಂದ್ರ ಉಪಾಧ್ಯಾಯರು ಸ್ವಾಗತಿಸಿ,ವೀಣಾ ಹೆಬ್ಬಾರ್ ಧನ್ಯವಾದವಿತ್ತರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!