ನೀಲಾವರದಲ್ಲಿಂದು ಕೃಷಿ ಹಬ್ಬ, ಕೃಷಿ ಕಲರವ, ಕೃಷಿ ಇಂಚರ, ಕೃಷಿ ಕ್ರಾಂತಿ​~ ​ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ

ಬೇಸಾಯವೆಂದರೆ ಮೂಗು ಮುರಿಯುವ, ಪಲಾಯನಗೈಯುವ, ನಷ್ಟ ಎಂದುಕೊಳ್ಳುವ ಈ ಕಾಲಘಟ್ಟದಲ್ಲಿ ನೀಲಾವರ ಗ್ರಾಮದ ಕಳುವಿನಬೆಟ್ಟಿನಲ್ಲಿ 19 ಎಕರೆ ಭತ್ತ ನಾಟಿ ಕಾರ್ಯಕ್ರಮ !!! ಇದಕ್ಕೆ ಕಾರಣವಾದದ್ದು ಅಭಿವೃದ್ಧಿಯ ಗುರಿಕಾರ, ಉಡುಪಿ ಜಿಲ್ಲಾ ಹಸಿರು ಕ್ರಾಂತಿಯ ಹರಿಕಾರ ಎಂದೇ ಗುರುತಿಸಿಕೊಂಡಿರುವ ಜನಪ್ರಿಯ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅಧ್ಯಕ್ಷತೆಯ ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಇವರ ಕನಸಿನ ಯೋಜನೆ ಹಡಿಲು ಭೂಮಿ ಕೃಷಿ ಕಾರ್ಯಕ್ರಮ.. ಉಡುಪಿ ಜಿಲ್ಲೆಯ 2,000 ಎಕರೆ ಭೂಮಿಯಲ್ಲಿ ಕೃಷಿ ಕಾಯಕಲ್ಪದ ಅಂತಿಮ ಹೆಜ್ಜೆ ಇಂದು ನೀಲಾವರದಲ್ಲಿ !

ಹಿಂದೂ ಹೃದಯ ಸಾಮ್ರಾಟ್ ಕಲ್ಲಡ್ಕ ಪ್ರಭಾಕರ ಭಟ್ರ ಆಗಮನ ಈ ಪುಣ್ಯಭೂಮಿಗೆ ಮೆರುಗು, ಎಲ್ಲರಿಂದಲೂ ಬಾಸ್ ಎಂದು ಕರೆಯಿಸಿಕೊಳ್ಳುವ ಬೈಂದೂರು ವಿಧಾನಸಭಾ ಕ್ಷೇತ್ರದ ಚಾಣಕ್ಯ ಶಾಸಕ ಸುಕುಮಾರ್ ಶೆಟ್ಟಿಯವರ ಉಪಸ್ಥಿತಿ,  ನೀಲಾವರ ಮಹಿಷಮರ್ದಿನಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಘುರಾಮ್ ಮಧ್ಯಸ್ಥರ ಮಾರ್ಗದರ್ಶನ, Zenith die makersನ ಮಾಲಕರಾದ ವಿಶ್ವನಾಥ್ ಸನಿಲ್ ರವರ ಹಾರೈಕೆ ಇದರ ಜೊತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಉದ್ಯಮಿಗಳು, ನಾಯಕರು, ಕೇದರೋತ್ಥಾನ ಟ್ರಸ್ಟ್  ಪದಾಧಿಕಾರಿಗಳ ಪಾಲ್ಗೊಳ್ಳುವಿಕೆ ಇವತ್ತಿನ ಈ ಕಾರ್ಯಕ್ರಮದ ಘನಸ್ಥಿಗೆ….

​​


ಆಗಮಿಸಿದ ಅಭ್ಯಾಗತರು ಪರಶುರಾಮ ಸೃಷ್ಟಿಯ ನಾಗಾರಾಧನೆಯ ಈ ಪುಣ್ಯ ನೆಲದಲ್ಲಿ ಶೇಷಶಯನನಿಗೆ ಪೂಜೆಯನ್ನು ಸಲ್ಲಿಸಿಕೊಂಡು, ಕರಾವಳಿಯ ಪ್ರಸಿದ್ಧ ಕಲೆ ಕಂಬಳದ ಕೋಣವನ್ನು ಸಾಂಕೇತಿಕವಾಗಿ ಬಳಸಿಕೊಂಡು, ಚಂಡೆವಾದನ ಡೋಲು ಬಾರಿಸುವಿಕೆಯ ಜೊತೆ ಭೂಮಿತಾಯಿಗೆ ಕ್ಷೀರಾಭಿಷೇಕಗೈಯುದರ ಮುಖಾಂತರವಾಗಿ ಎಲ್ಲಕ್ಕೂ ಕಾರಣ ಮಣ್ಣೆಯೆನ್ನುವುದ್ದನ್ನು ಮತ್ತೊಮ್ಮೆ ರುಜುವಾತುಪಡಿಸಿದರು…..

ಗಂಡುಕಲೆ ಯಕ್ಷಗಾನದ ಭಾಗವತಿಕೆಯನ್ನು ನೀಲಾವರ ಮೇಳದ ಪ್ರಧಾನ ಭಾಗವತರಾದ ದೇವದಾಸ್ ಮರವಂತೆ ಮತ್ತು ಅವರ ಹಿಮ್ಮೇಳನದ ತಂಡ ಪ್ರಾರ್ಥನೆಗೆ ಹೇಳಿದಾಗ ಇವತ್ತಿನ ಈ ಯೋಜನೆ ಅರ್ಧ ಯಶಸ್ಸಾಯಿತು.

ಕಾರ್ಯಕ್ರಮದ ಸಂಯೋಜಕರು ಕೇವಲ ಒಂದು ದಿನದಲ್ಲಿ ಎಲ್ಲರಿಗೂ ಬೆರಗು ಹುಟ್ಟಿಸುವಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಸಂಘಟಿಸಿದ ನೀಲಾವರ ಗ್ರಾಮ ಪಂಚಾಯತಿಯ ಹೆಮ್ಮೆಯ ಅಧ್ಯಕ್ಷರಾದ ಮಹೇಂದ್ರ ಕುಮಾರ್ ಅವರ ನಲ್ಮೆಯ ಸ್ವಾಗತ, ಮುರಳಿ ಕಡೆಕಾರ್ ಅವರಿಂದ ಪ್ರಾಸ್ತಾವಿಕ ಮಾತುಗಳು, ದೀಪಪ್ರಜ್ವಲಿಸುದರ ಮೂಲಕ ಕೃಷಿಯ ಕಡೆ ನಮ್ಮ ನಡೆ ಎನ್ನುವುದನ್ನು ಜಗತ್ತಿಗೆ ಸಾರಿರುವಂತದ್ದು.

ರಘುಪತಿ ಭಟ್ರ ಕೃಷಿಯ ಕನಸಿನ ನಡೆಗಳು ಅದರ ಹಿಂದಿರುವ ಪರಿಶ್ರಮದ ಹೆಜ್ಜೆಗಳು ಮಾತಿನಲ್ಲಿ ಅನಾವರಣ, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ರ ಹಾಸ್ಯಮಿಶ್ರಿತ ಅರ್ಥಪೂರ್ಣ ಅನಿಸಿಕೆಗಳು, ಪುಣ್ಯಪುರುಷ ಕಲ್ಲಡ್ಕ ಪ್ರಭಾಕರ್ ಭಟ್ರ ಮತ್ತೆ ಮತ್ತೆ ಕೇಳಬೇಕೆ ನಿಸುವ ವಾಗ್ಜರಿ, ಧನಂಜಯ ಅಮೀನ್ ರವರು ಕೊಡಮಾಡಿದ ದೇಣಿಗೆಯನ್ನು ಕೇದರೋತ್ಥಾನ ಟ್ರಸ್ಟ್ಗೆ ಹಸ್ತಾಂತರ, ಕಾರ್ಯಕ್ರಮದ ನಡುವೆ ಹಡಿಲು ಭೂಮಿ ಕೃಷಿಗೆ ಸ್ಥಳದಾನ ಮಾಡಿದವರಿಗೆ ಕಿರು ಗೌರವ ಸಮರ್ಪಣೆ, ಗುಣಶೀಲ ಅಮೀನ್ ನೀಲಾವರರವರ ಧನ್ಯವಾದ ಇವತ್ತಿನ ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿನ ಗುಟ್ಟು !!!  ಇಂತಹ ಜನಮಾನಸ ಕಾರ್ಯಕ್ರಮದ ನಿರೂಪಣೆ ಮಾಡುವ ಭಾಗ್ಯ ನನಗೆ ದೊರಕಿದ್ದು ಸೌಭಾಗ್ಯ…​​

ನಮ್ಮ ಗ್ರಾಮದ ಪ್ರಸಿದ್ದ ಯುವಕರ ತಂಡ MMC ಇದರ ಸಂಪೂರ್ಣ ಸದಸ್ಯರ ಶ್ರಮ ಇವತ್ತಿನ ಕಾರ್ಯಕ್ರಮದ ಉತ್ತುಂಗತೆಯಲ್ಲಿ ಮತ್ತೆ ಸಾಬೀತು….. ರಾಜ್ಯ ಎಸ್ಟಿ ಮೋರ್ಚಾದ ಕಾರ್ಯದರ್ಶಿಗಳು ಸ್ನೇಹ ಟುಟೋರಿಯಲ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಮಾಲಕರಾದ Umesh Naik ರವರ ನಿರ್ದೇಶನ ಇವತ್ತು ಇತಿಹಾಸವನ್ನು ಸೃಷ್ಟಿಸಿದೆಯೆಂದರೂ ತಪ್ಪಾಗಲಾರದು….. ಹಸಿರೇ ಉಸಿರು

 
 
 
 
 
 
 
 
 
 
 

Leave a Reply