ವಿಶ್ವ ಪಾರ್ಶ್ವವಾಯು ಜಾಗೃತಿ ದಿನ -೨೦೨೨

ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಇವರ ಸಹಯೊಗದಲ್ಲಿವಿಶ್ವ ಪಾರ್ಶ್ವವಾಯು ಜಾಗೃತಿ ದಿನದ ಅಂಗವಾಗಿ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ಕಲಾಕೃತಿಯನ್ನು ಕೆ ಎಮ್ ಸಿ ಯ ಡಿನ್ ಡಾ.ಶರತ್ ಕೆ ರಾವ್ ಕೆಎಮ್‌ಸಿ ಯ ಅವರಣದ್‌ಲ್ಲಿ ಅನಾವರಣಗೊಳಿಸಿದರು.

ಕಲಾಕೃತಿಯಲ್ಲಿ ಪಾರ್ಶ್ವವಾಯುಗೆ ಕಾರಣವಾಗುವ ಅಪಾಯಕಾರಿ ಅಂಶಗಳ ಬಗ್ಗೆ ಮತ್ತು ಅವುಗಳನ್ನು ಯಾವ ರೀತಿಯ ಜೀವನಶೈಲಿಯಿಂದ ತಡೆಗಟ್ಟಬಹುದು ಎಂಬುವುದನ್ನು ಬಿಂಬಿಸಲಾಗಿದೆ.

ಕಸ್ತೂರ್ಭಾ ಆಸ್ಪತ್ರೆಯ ವೈಧ್ಯಕೀಯ ಅಧಿಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ ಅಧುನಿಕ ಜನಾಂಗದ ಬದಲಾಗಬೇಕಾದ ಜೀವನಶೈಲಿ ಬಗ್ಗೆ ಒತ್ತಿ ಹೇಳಿದರು.

ಈ ಕಲಾಕೃತಿಯನ್ನು ಜನಸಾಮಾನ್ಯರಲ್ಲಿ ಪಾರ್ಶ್ವವಾಯು ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಲಾಗಿದೆ ಹಾಗೂ ಮಾನಸಿಕ ಒತ್ತಡ, ರಕ್ತದೊತ್ತಡದ ನಿಯಂತ್ರಣದ ಅಗತ್ಯತೆ ಬಗ್ಗೆ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ವಿವರಿಸಿದರು. ವಿಭಾಗದ ಎಲ್ಲಾ ಪ್ರಾಧ್ಯಪಕರು ಮತ್ತು ಸ್ನಾತೋಕೋತ್ತರ ವಿದ್ಯಾರ್ಥಿಗಳು ಮತ್ತು ಸಿಬಂಧಿಗಳು ಉಪಸ್ಥಿತರಿದ್ದರು.

ಈ ಕಲಾಕೃತಿಯನ್ನು ೧ ವಾರಗಳ ಕಾಲ ಕೆ ಎಮ್ ಸಿ ಆವರಣದಲ್ಲಿ ಪ್ರದರ್ಶನಕ್ಕಿಡಲಾಗುವುದು.

 
 
 
 
 
 
 
 
 
 
 

Leave a Reply