ಸಮಾಜವು ಅಶಕ್ತರಿಗೆ ಊರುಗೋಲಾಗಬೇಕು– ಡಾ.ಕೆ.ಎಸ್.ಕಾರಂತ

“ಕಷ್ಟದಲ್ಲಿರುವ ಸಮಾಜ ಬಾಂಧವರಿಗೆ ಆಸರೆಯಾಗಿ ನಿಲ್ಲುವುದು ಪುಣ್ಯ ಸಂಚಯನದ ಕಾರ್ಯ ವಾಗಿದ್ದು ಕೂಟ ಮಹಾ ಜಗತ್ತಿನ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್ ಈ ನಿಟ್ಟಿನಲ್ಲಿ ಸ್ತುತ್ಯರ್ಹ ಕಾರ್ಯವನ್ನು ಮಾಡುತ್ತಿದೆ ” ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಹಾಗೂ ಫೌಂಡೇಶನ್ನಿನ ವಿಶ್ವಸ್ಥ ಡಾ.ಕೆ.ಎಸ್.ಕಾರಂತರು ಕೋಡಿ ಕನ್ಯಾನದ ಶ್ರೀಮತಿ ಲಲಿತಮ್ಮ ನರಸಿಂಹ ನಾವಡರ ಪುತ್ರ ಶ್ರೀ ರಾಘವೇಂದ್ರ ನಾವಡರ ಮನೆಯಲ್ಲಿ ಧನ ಸಹಾಯವನ್ನು ವಿತರಣೆ ಮಾಡುವ ಸಂದರ್ಭದಲ್ಲಿ ತಿಳಿಸಿದರು. ಕೂಟ ಮಹಾ ಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆ, ದೇವಳ ಮತ್ತು ಬಿಲಿಯನ್ ಫೌಂಡೇಶನ್ ಸಾಲಿಗ್ರಾಮ (ರಿ.)ದ ಸಂಯುಕ್ತ ಯೋಜನೆಯಂತೆ ಅನಾರೋಗ್ಯದಿಂದ ನರಳುತ್ತಿರುವ ನಾವಡ ಕುಟುಂಬಕ್ಕೆ ಸಹಾಯ ಹಸ್ತವನ್ನು ಚಾಚುವ ಸಂದರ್ಭದಲ್ಲಿ ಕೇಂದ್ರಾಧ್ಯಕ್ಷ ಶ್ರೀ ಸತೀಶ ಹಂದೆ, ಗೆಳೆಯರ ಬಳಗ (ರಿ).ಕಾರ್ಕಡದ ಅಧ್ಯಕ್ಷ ಶ್ರೀ ಕೆ.ತಾರಾನಾಥ ಹೊಳ್ಳ ,ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀಪತಿ ಅಧಿಕಾರಿ,ಕಾರ್ಯದರ್ಶಿ ಮಹಾಬಲ ಹೇರಳೆ ,ನಾಗೇಂದ್ರ ನಾವಡ ,ಕೋಡಿ ಚಂದ್ರಶೇಖರ ನಾವಡ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply