ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ವಿತರಣಾ ಸಮಾರಂಭ

ಸರಕಾರಿ ಪ್ರೌಢ ಶಾಲೆ ವಡ್ಡರ್ಸೆಯಲ್ಲಿ ಪಠ್ಯ ಪರಿಕರ ಹಾಗೂ ವಿವಿಧ ಶೈಕ್ಷಣಿಕ ಕ್ಲಬ್ ಗಳ ಉದ್ಘಾಟನೆ ಹಾಗೂ ಸಮ್ಮಾನ ಸಮಾರಂಭ ಜರುಗಿತು. ಸುಮಾರು ನಲವತ್ತು ಸಾವಿರ ಮೌಲ್ಯದ ನೋಟ್ ಪುಸ್ತಕ ವಿತರಣೆ ಮಾಡಿದ ದಾನಿಗಳು. ಶೈಕ್ಷಣಿಕ ಪ್ರಗತಿಯಾಗಬೇಕಾದರೆ ಊರಿನ ದಾನಿಗಳ ಪಾತ್ರ ಬಹಳ ಮುಖ್ಯ ಈ ನಿಟ್ಟಿನಲ್ಲಿ ಶಿಕ್ಷಣ ಸೇವೆ ಅತ್ಯಂತ ಶ್ರೇಷ್ಠವಾದುದು. ಸರಿಯಾದ ಪಾಠ ಪ್ರವಚನ ವಿದ್ಯಾರ್ಥಿಗಳಿಗೆ ದೊರಕಿಸುವಲ್ಲಿ ಶಿಕ್ಷಕರ ಪಾತ್ರವು ಅಮೂಲ್ಯ ಎಂದು ಶಂಕರ್ ಐತಾಳ ಗೀತಾ ಎಚ್.ಎಸ್.ಎನ್. ಪೌಂಡೇಶನ್ ಕೋಟೇಶ್ವರ ಟ್ರಸ್ಟ್ ನ ಅಧ್ಯಕ್ಷರು ಮಾತನಾಡಿದರು. ಶಾಲೆಯ ವಿವಿಧ ಶೈಕ್ಷಣಿಕ ಕ್ಲಬ್ ಗಳ ಉದ್ಘಾಟನೆ ಮಾಡಿದ ಉದಯ ಕುಮಾರ್ ಶೆಟ್ಟಿ ಕೊತ್ತಾಡಿ ಧರ್ಮದರ್ಶಿಗಳು ಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆ ಇವರು ಮಾತಾಡಿ ವಡ್ಡರ್ಸೆ ಪ್ರೌಢಶಾಲೆಯ ಬೆಳವಣಿಗೆ ಊರಿನ ವಿದ್ಯಾಭಿಮಾನಿಗಳು ಸಹಕರಿಸಿದರೆ ಉತ್ತುಂಗಕೇರಿಸಲು ಸಾಧ್ಯ ಈ ನಿಟ್ಟಿನಲ್ಲಿ ನಮ್ಮದಾದ ಪ್ರಯತ್ನ ಸಂಸ್ಥೆಯ ಏಳಿಗೆಗೆ ಸದಾ ಇರುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಜೇತರಾದ ಗೀತಾ ಶೆಟ್ಟಿ ಶಿಕ್ಷಕಿಯನ್ನು ಸಂಮ್ಮಾನಿಸಲಾಯಿತು. ದಾನಿಗಳಾದ ಶಂಕರ ಹೆಗ್ಡೆ ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತಾದ ಸ್ಫೂರ್ತಿದಾಯಕ ಮಾತನನ್ನಾಡಿದರು. ಚಂದ್ರಶೇಖರಶೆಟ್ಟಿ ನಿವೃತ್ತ ಉಪನ್ಯಾಸಕರು ಸಂಸ್ಥೆಯ ರಜತ ಮಹೋತ್ಸವವನ್ನು ಊರಿನ ಸಹಭಾಗಿತ್ವದಿಂದ ಉತ್ತಮವಾಗಿ ನಿರ್ವಹಿಸಲಿ ಎಂದರು. ಸಮಾರಂಭ ಅಧ್ಯಕ್ಷ ಸ್ಥಾನ ನಿರ್ವಹಿಸಿಕೊಂಡ ರಮ್ಯ ಅಧ್ಯಕ್ಷರು ವಡ್ಡರ್ಸೆ ಗ್ರಾಮ ಪಂಚಾಯತ್ ಇವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಕಾರ್ಯ ಚಟುವಟಿಕೆಯ ಕುರಿತು ಶ್ಲಾಘಿಸಿದರು. ಆನಂದ ಶೆಟ್ಟಿ ಮುಖ್ಯೋಪಾಧ್ಯಾಯರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗೀತಾ ಶೆಟ್ಟಿ ವಂದಿಸಿದರು. ಸಭೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply