ಕಾಪು ಹೆಚ್. ಆರ್. ಎಸ್. ತಂಡದ ವತಿಯಿಂದ ಶ್ರಮದಾನ

ಕಾಪು :ಪ್ರವಾದಿ ಮುಹಮ್ಮದ್ (ಸ ) ರವರ ಸಮಾಜ ಸೇವೆಯ ಶಿಕ್ಷಣವನ್ನು ಅನುಸರಿಸಿ ಹ್ಯೂಮಾನಿಟಿರೈನ್ ರಿಲೀಫ್ ಸೊಸೈಟಿ( ರಿ) ಕರ್ನಾಟಕ, ಇದರ ಕರಾವಳಿ ವಿಭಾಗದ ಕಾಪು ತಂಡವು , ಮಲ್ಲಾರ್ ಗ್ರಾಮದಲ್ಲಿ ಇರುವ ಆಯುಷ್ ಕ್ಲಿನಿಕ್ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವಠಾರದಲ್ಲಿ ಶ್ರಮದಾನ ನಡೆಸಿತು.

ಪ್ರಕೃತಿ ಹಾಗೂ ಮನುಷ್ಯರಿಂದ ಸಂಭವಿಸುವ ಅವಘಡಗಳ ಸಂಧರ್ಭದಲ್ಲಿ ನಮ್ಮ ಸಂಸ್ಥೆಯು ಜಾತಿ, ಮತ, ಭೇದ ಮಾಡದೇ ಆ ಸ್ಥಳಕ್ಕೆ ಹೋಗಿ ಅಲ್ಲಿಯ ಜನರ ಸೇವೆ ಮಾಡುತ್ತಾ ಪರಿಹಾರದ ಕೆಲಸದಲ್ಲಿ ತೊಡಗುತ್ತದೆ. ತಮಿಳುನಾಡಿನ ತ್ಸುನಾಮಿ, ಉತ್ತರ ಕರ್ನಾಟಕ ಗುಡ್ಡ ಕುಸಿತ ಹಾಗೂ ನೆರೆ ದುರಂತ, ಕೇರಳದ ಜಲಪ್ರಳಯ , ಅಸ್ಸಾಂ ನಲ್ಲಿ ನೆರೆ ಬಂದಾಗ, ಮಡಿಕೇರಿಯ ಭೂ ಕುಸಿತ ದ ಸಮಯದಲ್ಲಿ ಈ ಸಂಸ್ಥೆಯು ಗಣನೀಯ ಕೆಲಸ ಮಾಡಿರುತ್ತದೆ. ಹಾಗೂ ಕೊರೋನ ಸಂದರ್ಭದಲ್ಲಿ, ಅಡಿಗೆ ತಯಾರಿಸಿ ಹಂಚುದರೊಂದಿಗೆ, ರೇಷನ್ ಸಾಮಾಗ್ರಿ ಒದಗಿಸಿಕೊಟ್ಟು, ಮೃತ ಪಟ್ಟ ದೇಹಗಳ ಅಂತಿಮ ಸಂಸ್ಕಾರ ಮಾಡುತ್ತಾ,ಹಗಲಿರುಳು ಜನರ ಸೇವೆಯಲ್ಲಿ ತೊಡಗಿಸಿಕೊಂಡಿತ್ತು.

ಸಾಮಾನ್ಯ ದಿನಗಳಲ್ಲಿ ತಮ್ಮ ಪರಿಸರದಲ್ಲಿ ಇರುವ ಸರಕಾರಿ ಶಾಲೆಗಳು , ಆಸ್ಪತ್ರೆಗಳು ಮತ್ತು ಹಾಸ್ಟೆಲ್ ಇನ್ನಿತರ ಸ್ಥಳಗಳಲ್ಲಿ ಶ್ರಮದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತದೆ. ಇದರ ಸದಸ್ಯರಿಗೆ ಉನ್ನತ ಮಟ್ಟದ ತರಭೇತಿ ಕೊಟ್ಟು ದಿನದ 24 ಗಂಟೆ ಕೂಡಾ ತಮ್ಮನ್ನು ತೊಡಗಿಸಿಕೊಳ್ಳಲು ತಿಳಿಸಲಾಗುತ್ತದೆ ಎಂದು ಮಾಜಿ ಕರಾವಳಿ ವಲಯದ ಸಂಚಾಲಕ ಅನ್ವರ್ ಅಲಿ ಕಾಪು ತಿಳಿಸಿದರು.

ಕಾಪು ತಂಡದ ಗ್ರೂಪ್ ಲೀಡರ್ ಮುಹಮ್ಮದ್ ಅಲಿ ಯವರ ನೇತೃತ್ವದಲ್ಲಿ ನಡೆದ ಶ್ರಮದಾನ ತಂಡದಲ್ಲಿ ಮುಹಮ್ಮದ್ ಇಕ್ಬಾಲ್ ಸಾಬ್, ಮುಹಮ್ಮದ್ ಫಾರೂಕ್, ರಿಯಾಜ್ ಅಹಮದ್, ಸಾಹಿಲ್, ಅಬ್ದುಲ್ ಅಹದ್, ಸಕ್ಲೇನ್ ಪಾಷ , ಅಮಾನ್ ತಸವರ್, ರಿಜ್ವಾನ್ ಅಬ್ದುಲ್ಲಾ, ಜಿಹಾನ್, ನವಾಜ್, ಬಷೀರ್ ಸಾಬ್,ಅಯ್ಯಾನ್,ಅನೀಸ್ ಅಲಿ, ಶೇಹೆನಾಜ್, ಹಸೀನಾ , ಆಯಿಷಾ ಶೈಮಾ , ಸುಷ್ಮಾ, ರೂಹಿ ಮರ್ಯಮ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷರು ಜನಾಬ್ ಶಬೀಹ್ ಅಹಮದ್ ಕಾಝೀ ಸಹಕಾರ ನೀಡಿದರು.

 
 
 
 
 
 
 
 
 
 
 

Leave a Reply