ತುಳು ರಂಗ ಭೂಮಿಯಲ್ಲಿ ಹೊಸ ಸಂಚಲನ‌ ಮೂಡಿಸಿದ “ಅಧ್ಯಕ್ಷೆರ್”~ ರಾಕೇಶ್ ಕುಂಜೂರು

ಕೊರೊನಾ ಸಂಕಟ, ಲಾಕ್ ಡೌನ್ ನಿರ್ಬಂಧದ ಕಾರಣಗಳಿಂದಾಗಿ ಬಸವಳಿದು ಹೋಗಿದ್ದ ರಂಗಭೂಮಿಯ ಚಟುವಟಿಕೆಗಳಿಗೆ ಮತ್ತೆ ಚಾಲನೆ ದೊರಕಿದ್ದು, ತುಳು ರಂಗಭೂಮಿಯಲ್ಲಿ ಕಾಪು ತರಂಗ ತರಂಗ ಕಲಾವಿದರ ನೂತನ‌ ನಾಟಕ ಅಧ್ಯಕ್ಷೆರ್ ಹೊಸ ಸಂಚಲನ ಮೂಡಿಸಿದೆ.

ಕಾಪು‌ ಲೀಲಾಧರ ಶೆಟ್ಟಿ ಸಾರಥ್ಯದ ರಂಗತರಂಗ ಕಲಾವಿದರ ನೂತನ ಕಲಾ ಕಾಣಿಕೆ ಅಧ್ಯಕ್ಷೆರ್ ಪ್ರಥಮ ಪ್ರದರ್ಶನದಲ್ಲೇ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸೂಪರ್ ಹಿಟ್ ನಾಟಕವಾಗಿ ಮೂಡಿ ಬಂದಿದೆ.

ತೆಲಿಕೆದ ಅರಸೆ ಪ್ರಸನ್ನ ಶೆಟ್ಟಿ ಬೈಲೂರು ರಚಿಸಿದ, ಶರತ್ ಉಚ್ಚಿಲ ಸಂಗೀತ ಹಾಗೂ ನಿರ್ದೇಶನದ ತಂಡದ ಪ್ರಬುದ್ಧ ಕಲಾವಿದರಾದ ತೆಲಿಕೆದ ತೆನಾಲಿ ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಮರ್ವಿನ್ ಶಿರ್ವ, ಸುಜಿತ್ ಶೆಟ್ಟಿ, ರಾಜೇಶ್ ಅಳಪೆ, ಶಿವಪ್ರಕಾಶ್ ಪೂಂಜ ಸಹಿತ ಎಲ್ಲರ ಮನೋಜ್ಞ ಅಭಿನಯ ಮತ್ತು ಸಾಂಘಿಕ ಪ್ರಯತ್ನದಿಂದಾಗಿ ಅಧ್ಯಕ್ಣೆರ್ ನಾಟಕವು ಪ್ರಥಮ ಪ್ರದರ್ಶನದಲ್ಲೇ ಸಿಕ್ಸರ್ ಬಾರಿಸಿದೆ.

ವ್ಯಕ್ತಿಯೋರ್ವ ಸಂಘ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ಆತನನ್ನು ಮನೆಯವರು ನೋಡಿಕೊಳ್ಳುವ ರೀತಿ, ಸಮಾಜದ ಒಂದು ವರ್ಗ ಆತನಿಗೆ ಕೊಡುವ ಗೌರವ, ಮತ್ತೊಂದು ವರ್ಗ ಆತನ ಹಿಂದೆ ನಡೆಸುವ ಮಸಲತ್ತು, ಪದಾಧಿಕಾರಿಗಳು ಆತನೊಂದಿಗೆ ಇಟ್ಟುಕೊಳ್ಳುವ ಸಂಬಂಧ, ಅದರ ನಡುವೆ ತನಗೆ ಸಾಂಸಾರಿಕವಾಗಿ ಎದುರಾಗುವ ತೊಂದರೆಗಳು, ಹಣಕಾಸಿನ‌ ಅಡಚಣೆಗಳು, ಅದನ್ನು ನಿಭಾಯಿಸುವ ರೀತಿ ಎಲ್ಲವನ್ನೂ ಕೇವಲ 3 ಗಂಟೆಯ ಅವಧಿಯಲ್ಲಿ ಮನೋಜ್ಞವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಾಟಕ ತಂಡದಿಂದ ಮೂಡಿ ಬಂದಿದೆ.

ನಾಟಕದುದ್ದಕ್ಕೂ ಕಿವಿಗೆ ಇಂಪೆನಿಸುವ ಮ್ಯೂಸಿಕ್, ಪಂಚಿಂಗ್ ಡೈಲಾಗ್ಸ್ , ಕಚಗುಳಿಯಿಡುವ ಜೋಕ್ಸ್, ಪ್ರೇಮ ಸಲ್ಲಾಪ, ಕೊನೇ ಕ್ಷಣದಲ್ಲಿ ಕಾಣ ಸಿಗುವ ಕ್ಲೈಮಾಕ್ಸ್, ಅತ್ಯುತ್ತಮ ರೀತಿಯ ರಂಗ ದಿಗ್ದರ್ಶನ, ಬೆಳಕು, ಸಂಯೋಜನೆ ಇವೆಲ್ಲವೂ ಅಧ್ಯಕ್ಷೆರ್ ನಾಟಕದಲ್ಲಿ ಪರಿಪೂರ್ಣವಾಗಿ ಕಾಣಸಿಕ್ಕಿವೆ.

ನಾಟಕದ ಯಶಸ್ಸಿಗಾಗಿ ಮುಖ್ಯ ಪಾತ್ರಧಾರಿ ಅಧ್ಯಕ್ಷರಿಂದ ಹಿಡಿದು ಎಲ್ಲರೂ ತಮ್ಮ ಪರಿಪೂರ್ಣ ಶ್ರಮವನ್ನು ಹಾಕಿದ್ದು, ಪ್ರತೀಯೊಬ್ಬ ಕಲಾವಿದರ ಪಾತ್ರ ಮತ್ತು ನಟನೆಯೂ ಅದ್ಭುತವಾಗಿತ್ತು. ಮನೋಜ್ಞ ಅಭಿನಯ, ಹಾಸ್ಯ ಭರಿತವಾಗಿ, ಸಾ‌ಸಾರಿಕ ಮತ್ತು ಸಾಮಾಜಿಕ ನೆಲೆಯಲ್ಲೂ ನಾಟಕವು ದೋಷ ರಹಿತವಾಗಿ ಮೂಡಿ ಬಂದಿದ್ದು, ಕೊರೋನತ್ತರ ಕಾಲಘಟ್ಟದಲ್ಲಿ ಇಂತಹ ಅದ್ಭುತ ನಾಟಕವನ್ನು ಕಲಾಭಿಮಾನಿಗಳು ಮತ್ತು ಸಮಾಜದ ಮುಂದಿರಿಸಿದ ರಂಗತರಂಗ ಕಲಾವಿದರಿಗೆ ಹ್ಯಾಟ್ಸಾಪ್.

ಅಧ್ಯಕ್ಷೆರ್ ತುಳು ನಾಟಕವನ್ನು ಒಮ್ಮೆ ನೋಡಿದರೆ ಸಾಲದು, ಮತ್ತೆ ಮತ್ತೆ ನೋಡಬೇಕೆನ್ನುವಷ್ಟರ ಮಟ್ಟಿಗೆ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ರಂಗ ಪ್ರಬುದ್ಧತೆಯನ್ನು ತೋರಿಸಿದ್ದಾರೆ. ಎಲ್ಲಾ ಕಲಾವಿದರಿಗೂ ಮತ್ತೊಮ್ಮೆ ಅಭಿನಂದನೆ‌ ಸಲ್ಲಿಸುತ್ತಾ, ಶೀಘ್ರ ಈ ನಾಟಕವು ಶತಕದ ಪ್ರದರ್ಶನವನ್ನು ಕಾಣುವಂತಾಗಲಿ. ~ರಾಕೇಶ್ ಕುಂಜೂರು

 
 
 
 
 
 
 
 
 

Leave a Reply