ಸೇವಾ ಸಾರ್ಥಕ ಹಾಗು ವನಿತಾ ಸ್ಪೂರ್ತಿ ಪ್ರಶಸ್ತಿ ಪುರಸ್ಕಾರ

ಬ್ರಾಹ್ಮಣ ಮಹಾ ಸಭಾ ಕೊಡವೂರು :
ಯಾವುದೇ ಜಾತಿ‌ ಮತ ಭಾಷೆ ಪಂಥಗಳ ಬೇಧವಿಲ್ಲದೆ ಭಾರತದಾದ್ಯಂತ ಭಾರತೀಯರೆಲ್ಲರೂ ಸಂಭ್ರಮ ಸಡಗರದಿಂದ ಆಚರಿಸುವ ಏಕೈಕ ಉತ್ಸವವೆಂದರೆ ಅದು ಸ್ವಾತಂತ್ರ್ಯೋತ್ಸವ ಎಂದು ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಎಮ್ ಹರಿಶ್ಚಂದ್ರ ಅಭಿಪ್ರಾಯಪಟ್ಟರು.

ಅವರು‌ ಬ್ರಾಹ್ಮಣ ಮಹಾ ಸಭಾ ಕೊಡವೂರು ವಿಪ್ರ ಶ್ರೀ ಸಾಂಸ್ಕೃತಿಕ ಕಲಾ ಭವನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡುತ್ತಾ ನಮ್ಮ ದೇಶದಲ್ಲಿ ಸ್ವಾತಂತ್ರ್ಯಾ

ನಂತರ ದೇಶದ ಕಾನೂನಿನಲ್ಲಿ‌ ಹತ್ತು ಹಲವು ತಿದ್ದುಪಡಿಗಳು ಬಂದಿದ್ದು ಇದೀಗ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಭಾರತ ಮಾತೆಗೆ ಗೌರವ ಸಲ್ಲಿಸುವುದರೊಂದಿಗೆ ಹತ್ತು ಹಲವು ಜನ ಹಿತ ಕಾರ್ಯಗಳನ್ನು ಕೈಗೊಂಡಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆ ಅರ್ಥಪೂರ್ಣ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವೆಯ ಹರಿಕಾರನಾಗಿ‌ ನಿತ್ಯ ಜನಸೇವೆಯಲ್ಲಿ ವ್ಯಸ್ತರಾಗಿರುವ ವಿಶು ಶೆಟ್ಟಿ ಅಂಬಲಪಾಡಿ‌ ಇವರಿಗೆ ಗೌರವ ಧನದೊಂದಿಗೆ ಸೇವಾ ಸಾರ್ಥಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಂತೆಯೇ ಕಳೆದ ಮೂವತ್ತು ವರುಷಗಳಿಂದ ಉಡುಪಿ ಬೀಡಿನ ಗುಡ್ಡೆಯ ರುದ್ರ ಭೂಮಿಯಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸಿಕೊಂಡು ಬರುತ್ತಿರುವ ವನಜಾ ಪೂಜಾರ್ತಿಯವರಿಗೆ ವನಿತಾ ಸ್ಪೂರ್ತಿ ಪ್ರಶಸ್ತಿ ಯೊಂದಿಗೆ ಗೌರವ ಧನ ನೀಡಿ ಸನ್ಮಾನಿಸಲಾಯಿತು

.ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿದರು. ದೀಪಾ ರಾಮಕೃಷ್ಣ ಪ್ರಾರ್ಥಿಸಿ ಚಂದ್ರಶೇಖರ ರಾವ್ ಪ್ರಸ್ತಾವನೆಯ ಮಾತುಗಳನ್ನಾಡಿದರು‌.ಗೌರವಾಧ್ಯಕ್ಷ ಪಿ ಗುರುರಾಜ್ ರಾವ್ , ನಿವೃತ್ತ ಯೋಧ ಶ್ರೀಪತಿ ಭಟ್,ಕೋಶಾಧಿಕಾರಿ ಶ್ರೀಧರ ಶರ್ಮ ಉಪಸ್ಥಿತಿತರಿದ್ದರು.

ಲಕ್ಷ್ಮಿ ಚಂದ್ರಶೇಖರ ಹಾಗು ಭಾರತಿ ಸುಬ್ರಹ್ಮಣ್ಯ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ವಂದಿಸಿ ಅಶ್ವಿನಿ ಶ್ರೀನಿವಾಸ ಕಾರ್ಯಕ್ರಮ ‌ನಿರೂಪಿಸಿದರು. ಸ್ವಾತಂತ್ರೋತ್ಸವದ ಅಂಗವಾಗಿ ವಿಪ್ರ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply