18 ದಿನಗಳ ಪರ್ಯಂತ ನಡೆಯಲಿರುವ ಶ್ರೀನಿವಾಸ ಕಲ್ಯಾಣ ಹರಿಕಥಾ ಕಾರ್ಯಕ್ರಮದ ಉದ್ಘಾಟನೆ

ಶ್ರೀಕೃಷ್ಣಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಶ್ರೀ ಹಂಡೆದಾಸ ಪ್ರತಿಷ್ಠಾನ (ರಿ.) ಕಾರ್ಕಳ  ಇದರ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 20.09.2021 ಸೋಮವಾರದಿಂದ 07.10.2021 ಗುರುವಾರದವರೆಗೆ 18 ದಿನಗಳ ಪರ್ಯಂತ ನಡೆಯುವ ಶ್ರೀನಿವಾಸ  ಕಲ್ಯಾಣ ಹರಿಕಥಾ ಕಾರ್ಯಕ್ರಮದ ಉದ್ಘಾಟನೆಯನ್ನು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು.
ಶ್ರೀನಿವಾಸ ಹಾಗೂ ಕೃಷ್ಣ ಇಬ್ಬರು ಭಗವಂತನ ಅವತಾರವಾಗಿರುತ್ತದೆ. ಆದುದರಿಂದ ಇಲ್ಲಿ ನಡೆಯುವ ಕಥಾಪ್ರಸಂಗವು  ಭಗವಂತನ ಬಗ್ಗೆ ತಿಳಿಸುವ ಕಥೆಯಾಗಿದೆ . ಪ್ರಸಕ್ತ ಪರಿಸ್ಥಿತಿಯಲ್ಲಿ ದೂರದರ್ಶನ, ಸಾಮಾಜಿಕ ಜಾಲತಾಣಗಳಲ್ಲಿ  ಎಲ್ಲರೂ ಆಕರ್ಷಿತರಾಗಿರುವುದರಿಂದ ಇಂತ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವಲ್ಲಿ ಹಂಡೆ ದಾಸ ಪರಂಪರೆಯ ಕೊಡುಗೆ ಅನನ್ಯವಾದುದು ಎಂದು ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅನುಗ್ರಹಿಸಿದರು.

ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಹರಿಕಥೆಯಲ್ಲಿ ಹೆಚ್ಚಿನ ಕಥೆಗಳು ಹರಿಯ ಭಕ್ತರ ಕಥೆಗಳಿರುತ್ತವೆ ಇದರಿಂದ ಭಕ್ತರ ಭಕ್ತಿಯು ಭಗವಂತನಲ್ಲಿ ಪರ್ಯಾವಸಾನವಾಗುತ್ತದೆ.ಎಲ್ಲ ವರ್ಗದ ಜನರನ್ನು ಆಕರ್ಷಿಸಲು ಹಿರಿಯರು ಹರಿಕಥೆಯ ಮಾರ್ಗವನ್ನು ಹಾಕಿಕೊಟ್ಟರು.
ಮಾನ್ವಿಯ ಜಗನ್ನಾಥದಾಸರು ತನ್ನ ಸ್ವಂತ ಅನುಭವಗಳನ್ನು ಸಮಾಜಕ್ಕೆ ನೀಡಿರುತ್ತಾರೆ. ಅವರ ದಾರಿಯಲ್ಲಿ ಬಂದಂತಹ ಹಂಡೆದಾಸ ಪರಂಪರೆಯು ಭಗವಂತನ ಮಹಾತ್ಮೆಯ ಹಲವಾರು ಕಥೆ, ಕೀರ್ತನೆಗಳನ್ನು  ಸಮಾಜಕ್ಕೆ  ನೀಡಿದ್ದು ಅದು ಮುಂದುವರಿಯಲಿ ಎಂದು ಸಂದೇಶ ನೀಡಿದರು.

ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಭಗವಂತನ ಚರಿತ್ರೆಯನ್ನು  ಜನರಿಗೆ ಬೇರೆ ಬೇರೆ ರೀತಿಯಲ್ಲಿ ತಿಳಿಸುವ ವಿಧಾನಗಳಲ್ಲಿ ಹರಿಕಥೆಯು ಸುಲಭ ಮಾರ್ಗವಾಗಿದೆ. ಹರಿ ಕೀರ್ತನೆ,ಉಪಕಥೆಗಳು,ಸಮೂಹ ಕೀರ್ತನೆ ಮೊದಲಾದ  ವೈವಿಧ್ಯಗಳೊಂದಿಗೆ ನಡೆಯುವ ಹರಿಕಥೆಯು ಸಜ್ಜನರಿಗೆ ತಲುಪಿಸಲು ಸಾಧ್ಯವಾಗಿದೆ. 
 
ಹಂಡೆ ಗುರುವೇದವ್ಯಾಸ ದಾಸರನ್ನು ಹತ್ತಿರದಲ್ಲಿ ಕಂಡಿದ್ದು ಆವರಿಗೆ  ವಿದ್ಯೆ, ದೇವರ ಭಕ್ತಿ ಹರಿಕಥೆ ಮಾಡುವ ಪ್ರಾವೀಣ್ಯತೆ ವಿಶೇಷವಾಗಿತ್ತು. ಅವರ ಪುತ್ರಿ ಪ್ರತಿಷ್ಠಾನದ ಮುಕಾಂತರ ನಡೆಸುವ ಎಲ್ಲ ಕಾರ್ಯಕ್ರಮಗಳು ಶ್ರೇಯಸ್ಸಾಗಲಿ  ಎಂದು ಅನುಗ್ರಹಿಸಿದರು. ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹರಿಕಥೆಯು ನಮ್ಮ ದೇಶದ ಪರಂಪರೆಯನ್ನು ತಿಳಿಸುವ ಕಥೆ. ದೇಶದ ಪ್ರತಿಯೊಂದು ಜಾಗಕ್ಕೆ ಅದರದ್ದೆ ಆದ ಪ್ರಾದೇಶಿಕವಾದ ಮಹಿಮೆಗಳಿರುತ್ತವೆ.

ಪ್ರತಿಷ್ಠಾನದ ಅಧ್ಯಕ್ಷರಾದ ರುಕ್ಮಿಣಿ ಹಂಡೆಯವರು ಅವರ ಹಿರಿಯರ ಮಾತಿನ ಪ್ರಕಾರ ಶಿಷ್ಯರನ್ನೆಲ್ಲ ಒಟ್ಟು ಸೇರಿಸಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರತಿಷ್ಠಾನದ ವತಿಯಿಂದ ವಾದಿರಾಜರಿಂದ ರಚಿತವಾದ  ರುಕ್ಮಿಣೀಶ ವಿಜಯ ಗ್ರಂಥದ ಹರಿಕಥೆಯನ್ನು ರಚಿಸಿ ಆ ಮುಕಾಂತರ ದೇವರ ಸೇವೆ ಯನ್ನು ಮಾಡುವಂತಾಗಲಿ ಎಂದು ಆಶೀರ್ವಚನ ನೀಡಿದರು.

ಪ್ರತಿಷ್ಠಾನದ ಗೌರವ ಸಲಹೆಗಾರರಾದ ರಾಮಚಂದ್ರ ಉಪಾಧ್ಯಾಯರು ಹಂಡೆದಾಸ  ಪರಂಪರೆ ಬೆಳೆದು ಬಂದ ರೀತಿ ಹಾಗೂ  ಪ್ರತಿಷ್ಠಾನದ ಬೆಳವಣಿಗೆಗಳನ್ನು ತಿಳಿಸಿದರು . ಅಧ್ಯಕ್ಷರಾದ ರುಕ್ಮಿಣಿ ಹಂಡೆಯವರು ಸ್ವಾಗತಿಸಿ, ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ  ಉಪಾಧ್ಯಕ್ಷ ವೇದವ್ಯಾಸ ಐತಾಳ್ ಧನ್ಯವಾದವಿತ್ತರು. 
 
 
 
 
 
 
 
 
 
 
 

Leave a Reply