ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೋಳಿಮಠ ನಿಧನ

ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೋಳಿಮಠ ನಿಧನಕ್ಕೆ ಬಸವರಾಜ ಬೊಮ್ಮಾಯಿ‌ ಕಂಬನಿ ಮಿಡಿದಿದ್ದು, ಪಾರ್ಥಿವ ಶರೀರದ ದರ್ಶನದ ವೇಳೆ ಕಣ್ಣೀರು ಹಾಕಿದರು.

ಗುರುಲಿಂಗಸ್ವಾಮಿ ಹೊಳಿಮಠ ಅವರು ಹೃದಯಾಘಾತದಿಂದ ಇಂದು ದೈವಾಧೀನರಾಗಿದ್ದು, ಅವರ ನಾಗರಬಾವಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನದವರೆಗೆ ಅವಕಾಶ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ಅಂತಿಮ ದರ್ಶನ ಪಡೆದರು. ಸಿಎಂಗೆ ಸಚಿವ ಮುನಿರತ್ನ, ಗೋಪಾಲಯ್ಯ, ಮುರುಗೇಶ್ ನಿರಾಣಿ ಸಾಥ್​ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಗುರುಲಿಂಗಸ್ವಾಮಿ ನನ್ನ ಯುವ ಸ್ನೇಹಿತ. ಅವರ ಅಕಾಲಿಕ ಮರಣ ದುಃಖ ತಂದಿದೆ. ನನಗೆ ಅವರು 20 ವರ್ಷದಿಂದ ಪರಿಚಯ. ರಾಮದುರ್ಗದ ಹಳ್ಳಿಯವರು. ಕಷ್ಟಪಟ್ಟು ಓದಿ ಪಾಸ್ ಆಗಿ ಮಾಧ್ಯಮದಲ್ಲಿ ಕೆಲಸ ಪಡೆದುಕೊಂಡಿದ್ದರು. ಪತ್ರಿಕಾ ದಿನದ ಆರಂಭದ ದಿನದಿಂದ ನನಗೆ ಪರಿಚಯ. ಟಿ.ವಿ ಮಾಧ್ಯಮದಲ್ಲೂ ಕೆಲಸ ಮಾಡಿದ್ದರು.

ವರದಿಯ ನಿಖರತೆ ಪಡೆದುಕೊಂಡು ಮುಂದುವರೆಯುವ ಜವಾಬ್ದಾರಿಯುತ ಪತ್ರಕರ್ತ. ಅವನೊಬ್ಬನೇ ಬೆಳೆಯಲಿಲ್ಲ, ತನ್ನ ಜೊತೆ ಇತರರನ್ನೂ ಬೆಳೆಸಿದ್ದ. ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಗೃಹ ಸಚಿವರಾಗಿದ್ದಾಗಿನಿಂದ ನನ್ನ ಜೊತೆ ಇದ್ದ. ಪ್ರತೀ ದಿನ ಹಲವರಿಗೆ ಸಹಾಯ ಮಾಡುತ್ತಿದ್ದ. ಸಿಎಂ ಫಂಡ್ ಫೈಲಿಗೆ ಸಹಿ ಹಾಕಿಸಿ ಸಹಾಯ ಮಾಡ್ತಿದ್ದ. ಕ್ರಿಯಾಶೀಲವಾಗಿದ್ದ ಎಂದು ಆತ್ಮೀಯತೆ ನೆನೆದರು.

 
 
 
 
 
 
 
 
 
 
 

Leave a Reply