ಮಣಿಪಾಲದಲ್ಲೊಂದು ಬೃಹತ್ ಗಾತ್ರದ ಸೊಳ್ಳೆ!

ಮಣಿಪಾಲ: ಸಮುದಾಯ ವೈದ್ಯಕೀಯ ವಿಭಾಗ ಕೆ ಎಂ ಸಿ ಮಣಿಪಾಲ ಇವರ ಸಹಯೊಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೆಬೆಟ್ಟು ಇವರು ಮಾಹೆಯ ಇಂಟರಾಕ್ಟ್ ಆವರಣದಲ್ಲಿ ಡೆಂಗ್ಯೂ , ಮಲೇರಿಯಾ ಇನ್ನಿತರ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ಬೃಹತ್ ಗಾತ್ರದ ಸೊಳ್ಳೆಯ ಕಲಾಕೃತಿಯನ್ನು ರಚಿಸಿದರು.

ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಕಲಾಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಸೊಳ್ಳೆಯು ಮಾನವ ಕುಲಕ್ಕೆ ಅತೀ ಅಪಾಯಕಾರಿ, ಇವುಗಳು ಹರಡುವ ರೋಗಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಜನರು ಬಲಿಯಾಗುತ್ತಿದ್ದಾರೆ.

ಇವುಗಳು ಮಳೆಗಾಲದಲ್ಲಿ ಹರಡುವ ರೊಗಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ 3ಡಿ ಕಲಾಕೃತಿಯನ್ನು ರಚಿಸಲಾಗಿದೆ ಎಂದರು.

 
 
 
 
 
 
 
 
 
 
 

Leave a Reply