ಆಗಸ್ಟ್, 28- ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇ-ಲೋಕ ಅದಾಲತ್ ಗಳ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳ ಬಹುದಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕರ್ನಾಟಕ ಉಚ್ಚ ನ್ಯಾಯಲಯದ ನ್ಯಾಯಮೂರ್ತಿ ಅರವಿಂದ ಕುಮಾರ್ ತಿಳಿಸಿದರು. ಅವರು ಶುಕ್ರವಾರದಂದು ಮೇಘಾ ಇ-ಲೋಕ್ ಅದಾಲತ್ ಕುರಿತು ವಿಡಿಯೋ ಸಂವಾದದ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಕಕ್ಷಿದಾರರು ವಕೀಲರ ಮೂಲಕ ಅಥವಾ ನೇರವಾಗಿ ಈ ಮೇಲ್ ಮೂಲಕ ರಾಜೀ ಸಂಧಾನಕ್ಕೆ ಪ್ರಸ್ತಾಪಿಸುವುದರೊಂದಿಗೆ , ಉಭಯ ಕಕ್ಷಿದಾರರು ನ್ಯಾಯಾಧೀಶರ ಮಧ್ಯಸ್ಥಿಕೆ ಮೂಲಕ ಕೇಸ್ ಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ.

ನ್ಯಾಯಮೂರ್ತಿ ಅಲೋಕ್ ಆರಾಧ್ಯ ಮಾತನಾಡಿ, ರಾಜ್ಯಾದ್ಯಂತ ನಡೆಯುವ ಇ-ಲೋಕ ಅದಾಲತ್ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ತಮ್ಮ ಪ್ರಕರಣಗಳನ್ನು ಕಡಿಮೆ ಅವಧಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 25 ರಿಂದ ಮೇಘಾ ಇ-ಲೋಕ್ ಅದಾಲತ್ ಆರಂಭಗೊಂಡು 147 ಪ್ರಕರಣಗಳುಇತ್ಯರ್ಥ ಗೊಂಡಿದ್ದು, ಅವುಗಳಲ್ಲಿ 79 ಮೋಟಾರು ವಾಹನ ನಷ್ಠ ಪರಿಹಾರ ದಾವೆಯಲ್ಲಿ 2,38,84,000.00 ಗಳ ನಷ್ಠ ಪರಿಹಾರ ನೀಡಲು ಆದೇಶವಾಗಿದ್ದು, ಸಿವಿಲ್ ದಾವೆ 18 , ಇತರೆ ಕ್ರಿಮಿನಲ್ ಮೊಕದ್ದಮೆಗಳು 18, ಚೆಕ್ ಬೌನ್ಸ್ 28 ಹಾಗೂ ಕ್ರಿಮಿನಲ್ ಕೇಸ್ ಗಳು 4 ರಾಜಿಯಾಗಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ತಿಳಿಸಿದರು.