ವೈಕುಂಠ ಬಾಳಿಗಾ ಕಾನೂನು ಕಾಲೇಜ್​ನಲ್ಲಿ ಸದ್ಭಾವನಾ ದಿವಸ

ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜ್​ನಲ್ಲಿ ​ಗುರುವಾರದಂದು ಸದ್ಭಾವನಾ ದಿವಸ ಆಚರಿಸಲಾಯಿತು. ಈ ಸಮಾರಂಭ ದಲ್ಲಿ ಪ್ರಾಂಶುಪಾಲೆ ಡಾ. ನಿರ್ಮಲ ಹರಿಕೃಷ್ಣ ರವರು ಸದ್ಭಾವನಾ ದಿವಸದ ಮಹತ್ವದ ಬಗ್ಗೆ ಮಾತನಾಡಿದರು. ಎನ್.ಎಸ್.ಎಸ್. ಯೋಜನಾ ಘಟಕದ ಯೋಜನಾಧಿಕಾರಿ ಸುರೇಖಾ. ಕೆ ಪ್ರತಿಜ್ಞೆಯನ್ನು ಬೋಧಿಸಿದರು. ಪ್ರೀತಿ ಹರೀಶ್ ರಾಜ್ ನಿರೂಪಿಸಿದರು. ಜಯ ಮೋಲ್ ಪಿ.ಎಸ್.  ಸ್ವಾಗತಿಸಿ, ರಘುನಾಥ್ ಕೆ. ಎಸ್. ವಂದಿಸಿದರು.

Leave a Reply