ತರುಣನ ತುಟಿ ಕಚ್ಚಿ ಅತ್ಯಾಚಾರದಿಂದ ತಪ್ಪಿಸಿಕೊಂಡ ಮಹಿಳೆ!

 ಮಹಿಳೆಯೊಬ್ಬಳು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ತುಟ್ಟಿ ಕಚ್ಚಿ ಅತ್ಯಾಚಾರದಿಂದ ತಪ್ಪಿಸಿಕೊಂಡು ಮಾನ  ಉಳಿಸಿಕೊಂಡಿದ್ದಾರೆ.

ಯುವಕ ಬಲವಂತವಾಗಿ ಚುಂಬಿಸಲು ಯತ್ನಿಸಿದಾಗ ಮಹಿಳೆ ಆತನ ತುಟಿಗಳನ್ನು ಕಚ್ಚಿ ಕತ್ತರಿಸಿದ್ದಾಳೆ. ತುಟಿ ತುಂಡಾದ ತಕ್ಷಣ ಯುವಕ ನೋವಿನಿಂದ ಅಳಲು ಪ್ರಾರಂಭಿಸಿದ್ದಾನೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನರು ಸ್ಥಳಕ್ಕೆ ಆಗಮಿಸಿ ಆರೋಪಿ ಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು.

ಮೀರತ್ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಅವನ ತುಟಿಯ ತುಂಡನ್ನು ಪ್ಯಾಕೆಟ್‌ನಲ್ಲಿ ತೆಗೆದುಕೊಂಡು ಸಮೀಪದ ಸಿಎಚ್‌ಸಿಗೆ ಕರೆದೊಯ್ದರು. ಅಲ್ಲಿ ಆತನಿಗೆ ಚಿಕಿತ್ಸೆ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply