ಉಡುಪಿ: ಆನ್ಲೈನ್ ಸ್ಕ್ಯಾಮ್ ಗೆ 80,602 ರೂ. ಕಳೆದುಕೊಂಡ ಯುವತಿ

ಆನ್ಲೈನ್ ಮೂಲಕ ಪುಸ್ತಕ ಖರೀದಿಸಲು ಹೋಗಿ ಯುವತಿಯೊಬ್ಬಳು 80,602 ರೂ. ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ತಾಲೂಕಿನ ಕೋಟೇಶ್ವರದ ರೂಪಶ್ರೀ ಎಂ.ಸಿ. ಅವರು ವಿದ್ಯಾಭ್ಯಾಸಕ್ಕಾಗಿ ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಖರೀದಿಸಿದ್ದರು. ಆದರೆ, ಆರ್ಡರ್ ಮಾಡಿ ಒಂದು ವಾರ ಕಳೆದರೂ ಪುಸ್ತಕಗಳು ಬಾರದೇ ಇರುವುದನ್ನು ಕಂಡು ಫೆ.18 ರಂದು ಗೂಗಲ್ ನಲ್ಲಿ ಕೋರಿಯರ್ ಸಂಸ್ಥೆಯ ವಿವರವನ್ನು ಹುಡುಕಾಡಿ ಕಂಡು ಬಂದ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದರು. ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿಯು ತಾನು ಕೋರಿಯರ್ ಸಂಸ್ಥೆಯವನೆಂದು ನಂಬಿಸಿ, ರೂಪಶ್ರೀ ಅವರ  ಮೊಬೈಲ್ ಗೆ ಲಿಂಕ್ ಒಂದನ್ನು ಕಳುಹಿಸಿ, ವಿವರ ಪಡೆದು ಹಂತ ಹಂತವಾಗಿ ಒಟ್ಟು 80,602 ರೂ. ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ ಎಂಬುದಾಗಿ ರೂಪ ಶ್ರೀ ಎಂ.ಸಿ ಅವರು ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply