ವಿಮಾನ ನಿಲ್ದಾಣದಲ್ಲಿ 2 ಕೋಟಿ ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ!

ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಮುಂದುವರೆದಿದ್ದು, ಜನವರಿ ತಿಂಗಳಲ್ಲಿ ಇಲ್ಲಿಯವರೆಗೆ ಒಟ್ಟು 2 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಸಾಗಾಟ ಮಾಡಲು ಯತ್ನಿಸಿ ಸ್ಮಗ್ಲರ್ ಗಳು ಸಿಕ್ಕಿ ಬಿದ್ದಿದ್ದಾರೆ.

ಜನವರಿ 1ರಿಂದ 18ರವರೆಗೆ ವಿವಿಧ ಪ್ರಕರಣಗಳಲ್ಲಿ ₹2,01,69,800 ಮೌಲ್ಯದ 3,677 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದುಬೈ ಮತ್ತು ಅಬುದಾಬಿಯಿಂದ ಬಂದಿದ್ದ ಎಂಟು ಪ್ರಯಾಣಿಕರು ವಿವಿಧ ರೀತಿಯಲ್ಲಿ ಚಿನ್ನವನ್ನು ಕಳ್ಳ ಸಾಗಣೆ ಮಾಡಲು ಯತ್ನಿಸಿದ್ದಾರೆ. ಒಬ್ಬ ಪ್ರಯಾಣಿಕನಿಂದ ₹3,20,265 ಮೌಲ್ಯದ ಇ-ಸಿಗರೇಟ್‌ಗಳಲ್ಲಿ ಬಳಸುವ ಇ- ನಿಕೋಟಿನ್ ಲಿಕ್ವಿಡ್ ಮತ್ತು ಸಿಗರೇಟ್‌ಗಳನ್ನು ವಶಕ್ಕೆ ಪಡೆಯ ಲಾಗಿದೆ. ಆತ ತನ್ನ ಬ್ಯಾಗ್‌ನಲ್ಲಿ ಸಾಗಣೆಗೆ ಯತ್ನಿಸಿದ್ದ. ಪ್ರಕರಣಗಳ ವಿಚಾರಣೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply