ಸುಳ್ಳೇ ಈತನ ಆಸ್ತಿ -15 ಮದುವೆಯಾದ ಮಹೇಶ!

15 ಮಹಿಳೆಯರನ್ನು ಸುಳ್ಳು ಹೇಳಿ ಮದುವೆಯಾದ ವ್ಯಕ್ತಿಯನ್ನು ಮೈಸೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 
 
ಬಂಧಿತ ಆರೋಪಿ ಬೆಂಗಳೂರಿನ ನಿವಾಸಿ ಮಹೇಶ್ ಕೆಬಿ ನಾಯಕ್ (33) ಎಂದು ತಿಳಿದು ಬಂದಿದೆ.
 
ಮ್ಯಾಟ್ರಿಮೋನಿಯಲ್ ಸೈಟ್​ನಲ್ಲಿ ಮಹಿಳೆಯರನ್ನು ಸಂಪರ್ಕಿಸಿ ತಾನು ವೈದ್ಯ ಮತ್ತು ಇಂಜಿನಿಯರ್ ಅಂತ ಹೇಳಿಕೊಂಡು ಪರಿಚಯ ಮಾಡಿಕೊಂಡು ವಯಸ್ಸಾದ ಅವಿವಾಹಿತ ಮಹಿಳೆಯರು ಹಾಗೂ ವಿಚ್ಛೇದಿತ ಮಹಿಳೆಯರನ್ನು ಈತ ಮದುವೆಯಾಗುತ್ತಿದ್ದ ಎನ್ನಲಾಗಿದೆ.
 
ಇತ್ತೀಚೆಗಷ್ಟೇ ಮದುವೆಯಾದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕುವೆಂಪು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಹೇಶ್​ನನ್ನು ಬಂಧಿಸಿದ್ದಾರೆ. 
 
ಆರೋಪಿಗೆ ಬೇರೆ ಬೇರೆ ಮಹಿಳೆಯರೊಂದಿಗೆ ನಾಲ್ವರು ಮಕ್ಕಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
 
ಆರೋಪಿ 5ನೇ ತರಗತಿವರೆಗೆ ಓದಿದ್ದು, ವೈದ್ಯ, ಇಂಜಿನಿಯರ್ ಅಥವಾ ಸಿವಿಲ್ ಕಂಟ್ರಾಕ್ಟರ್‌ನಂತೆ ವರ್ತಿಸಿ ಮಹಿಳೆಯರನ್ನು ಮದುವೆಯಾಗಿದ್ದಾನೆ. ಮಹೇಶ್​​ನನ್ನು ಬಂಧಿಸಿದ ಪೊಲೀಸರು ಆತನಿಂದ 2 ಲಕ್ಷ ರೂಪಾಯಿ ನಗದು, ಎರಡು ಕಾರುಗಳು, ಚಿನ್ನಾಭರಣಗಳು ಮತ್ತು ಏಳು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
 
ತಾನು ವೈದ್ಯ ಎಂದು ಜನರನ್ನು ನಂಬಿಸಲು ತುಮಕೂರಿನಲ್ಲಿ ಮಹೇಶ್ ನಕಲಿ ಕ್ಲಿನಿಕ್ ಸ್ಥಾಪಿಸಿದ್ದ ಎನ್ನಲಾಗಿದೆ.
 
 
 
 
 
 
 
 
 
 
 

Leave a Reply