ಮಲ್ಪೆ: ಗಾಂಜಾ ಸೇವನೆ; ಯುವಕ ಪೊಲೀಸ್ ವಶಕ್ಕೆ

ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ತೆಂಕನಿಡಿಯೂರು ಗ್ರಾಮದ ಗರಡಿ ಮಜಲಿನಲ್ಲಿ ಇರುವ ಈಶ್ವರ ದೇವಸ್ಥಾನದ ಬಳಿಯ ಸಾರ್ವಜನಿಕ ಹಾಡಿಯಲ್ಲಿ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಲ್ಪೆ ಠಾಣಾ ಪೊಲೀಸರು ನಿನ್ನೆ ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ತೆಂಕನಿಡಿಯೂರು ಗ್ರಾಮದ ಗರಡಿ ಮಜಲಿನಲ್ಲಿ ಇರುವ ಈಶ್ವರ ದೇವಸ್ಥಾನದ ಬಳಿಯ ಸಾರ್ವಜನಿಕ ಹಾಡಿಯಲ್ಲಿ ಅಮಲುಭರಿತನಾಗಿ ತೂಗಾಡುವಂತೆ ಕಂಡು ಬಂದ ಯೋಗೀಶ (21) ಎಂಬಾತನನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೆರೆಗೆ ವಶಕ್ಕೆ ಪಡೆದು ಮಣಿಪಾಲದ ಫೊರೆನ್ಸಿಕ್ ವಿಭಾಗದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಈತನ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply