ಪಾರ್ಕಿಂಗ್ ಲಾಟ್‌ನಲ್ಲಿ ಮಲಗಿದ್ದ ಮಗುವಿನ ಮೇಲೆ ಹರಿದ ಕಾರು; ಕಂದಮ್ಮ ಸ್ಥಳದಲ್ಲೇ ಸಾವು!

ಪಾರ್ಕಿಂಗ್ ಲಾಟ್‌ನಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಕಾರು ಹರಿದು ಕಂದಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ಮನಕಲುಕುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಹೈದರಾಬಾದ್‌ನ ಹೈಯತ್ ನಗರದ ಲೆಕ್ಚರ್ಸ್ ಕಾಲೋನಿಯಲ್ಲಿ ದುರ್ಘಟನೆ ನಡೆದಿದೆ. ಕಲಬುರಗಿ ಮೂಲದ ದಾರುಣ್ಯ (3) ಘಟನೆಯಲ್ಲಿ ಸಾವನ್ನಪ್ಪಿರುವ ಬಾಲಕಿ.

ಮಗುವಿನ ತಾಯಿ ಕೆಲಸ ಹುಡುಕಿಕೊಂಡು 3 ಮಕ್ಕಳೊಂದಿಗೆ ಹೈದರಾಬಾದ್ ತೆರಳಿದ್ದಳು. ನಗರದಲ್ಲಿ ವಿಪರೀತ ತಾಪಮಾನವಿದ್ದ ಕಾರಣ ತನ್ನ 3 ವರ್ಷದ ಮಗುವನ್ನು ಬೇಸ್ಮೆಂಟ್ ಮೇಲೆ ಮಲಗಿಸಿದ್ದಳು. ಆದರೆ ಚಾಲಕ ಮಗು ಮಲಗಿದ್ದನ್ನು ಗಮನಿಸದೇ ತಲೆ ಮೇಲೆ ಕಾರನ್ನು ಹತ್ತಿಸಿದ್ದಾನೆ. ಈ ವೇಳೆ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ಮಗುವಿನ ಮೇಲೆ ಕಾರು ಹತ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯವನ್ನು ಆಧರಿಸಿ ಚಾಲಕನ ವಿರುದ್ಧ ಹೈದರಾಬಾದ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply